ಮನೆ ರಾಜ್ಯ ಕೆಆರ್ ಎಸ್ ಒಳ ಹರಿವಿನ ಪ್ರಮಾಣದಲ್ಲಿ ಕೊಂಚ ಏರಿಕೆ

ಕೆಆರ್ ಎಸ್ ಒಳ ಹರಿವಿನ ಪ್ರಮಾಣದಲ್ಲಿ ಕೊಂಚ ಏರಿಕೆ

0

ಮಂಡ್ಯ: ಕಾವೇರಿ ಕೊಳ್ಳದ ಜನರಿಗೆ ಸಿಹಿ ಸುದ್ದಿ ದೊರೆತಿದ್ದು, ಕೆಆರ್ ಎಸ್ ಒಳ ಹರಿವಿನ ಪ್ರಮಾಣದಲ್ಲಿ ಕೊಂಚ ಏರಿಕೆ ಕಂಡುಬಂದಿದೆ.

ಡ್ಯಾಂಗೆ 11,800 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಅಣೆಕಟ್ಟೆಯ ನೀರಿನ ಪ್ರಮಾಣದಲ್ಲೂ ಏರಿಕೆಯಾಗಿದೆ.

ಕಾವೇರಿ ಹೋರಾಟದ ನಡುವೆಯೂ ಜನರ ಆತಂಕವನ್ನು ಕೊಂಚ ಮಟ್ಟಿಗೆ ವರುಣ ದೂರ ಮಾಡಿದ್ದಾನೆ.

KRS ಅಣೆಕಟ್ಟೆಯ ನೀರಿನ ಮಟ್ಟ.

ಡ್ಯಾಂನ ಗರಿಷ್ಟ ಮಟ್ಟ 124.80ಅಡಿ

ಇಂದಿನ ಮಟ್ಟ 99.54ಅಡಿ

ಒಳ ಹರಿವು 11,800ಕ್ಯೂಸೆಕ್.

ನಿನ್ನೆ 5,811 ಕ್ಯೂಸೆಕ್ ಇದ್ದ ಒಳ ಹರಿವು.

ನಿನ್ನೆಗಿಂತ ಇಂದು ಒಳ ಹರಿವಿನ ಪ್ರಮಾಣ ದುಪ್ಪಟ್ಟಾಗಿದ್ದು, ಹೊರಹರಿವಿನ ಪ್ರಮಾಣ 1,592 ಕ್ಯೂಸೆಕ್ ಇದೆ.