ಮನೆ ಸುದ್ದಿ ಜಾಲ ನಿಧಾನವಾಗಿ ಚಲಿಸಿದ್ದ, ಐ20 ಕಾರು – ದೆಹಲಿ ಸ್ಫೋಟದ ದೃಶ್ಯ ಲಭ್ಯ

ನಿಧಾನವಾಗಿ ಚಲಿಸಿದ್ದ, ಐ20 ಕಾರು – ದೆಹಲಿ ಸ್ಫೋಟದ ದೃಶ್ಯ ಲಭ್ಯ

0

ನವದೆಹಲಿ : ರಾಜಧಾನಿಯ ಕೆಂಪು ಕೋಟೆಯ ಬಳಿ ಐ20 ಕಾರು ಸ್ಫೋಟಗೊಂಡ ದೃಶ್ಯಗಳು ಲಭ್ಯವಾಗಿದೆ. ನಿಧಾನವಾಗಿ ಚಲಿಸುತ್ತಿದ್ದ, ಕಾರು ಒಮ್ಮಿಂದೊಮ್ಮೆಗೆ ಸ್ಫೋಟಗೊಂಡಿದೆ.

ಈ ಘಟನೆಯ 15 ಸೆಕೆಂಡುಗಳ ಕ್ಲಿಪ್ ಕೆಂಪು ಕೋಟೆ ಮೆಟ್ರೋ ನಿಲ್ದಾಣದ ಬಳಿ ಜನದಟ್ಟಣೆಯ ಪ್ರದೇಶವನ್ನು ತೋರಿಸುತ್ತದೆ. ಡಜನ್ಗಟ್ಟಲೆ ವಾಹನಗಳು ನಿಧಾನವಾಗಿ ಚಲಿಸುತಿದ್ದವು.

ಸೋಮವಾರ ಸಂಜೆ 6:50 ಕ್ಕೆ ಸ್ಫೋಟಕ ತುಂಬಿದ ಐ20 ಕಾರು ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಕೂಡಲೇ ಸಿಸಿಟಿವಿ ಕ್ಯಾಮೆರಾಗಳು ಆಫ್‌ ಆಗಿದೆ. ದೆಹಲಿ ಸ್ಫೋಟ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಲಾಗಿದೆ.

ಆರಂಭದಲ್ಲಿ 9 ಮಂದಿ ಮೃತಪಟ್ಟಿದ್ದರು. 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಗಾಯಗೊಂಡವರ ಪೈಕಿ 4 ಮಂದಿ ಮೃತಪಟ್ಟಿದ್ದು ಇಲ್ಲಿಯವರೆಗೆ ಒಟ್ಟು ಸಾವನ್ನಪ್ಪಿದವರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ.