ಮನೆ ಅಂತಾರಾಷ್ಟ್ರೀಯ ಅಮೆರಿಕದಲ್ಲಿ ಸಣ್ಣ ವಿಮಾನ ಪತನ: 10 ಮಂದಿ ಸಾವು

ಅಮೆರಿಕದಲ್ಲಿ ಸಣ್ಣ ವಿಮಾನ ಪತನ: 10 ಮಂದಿ ಸಾವು

0

ಅಲಾಸ್ಕಾ, ಅಮೆರಿಕ: ಪಶ್ಚಿಮ ಅಲಾಸ್ಕಾದಲ್ಲಿ ಸಣ್ಣ ವಿಮಾನವೊಂದು ಪತನಗೊಂಡಿದೆ. ಪ್ರಯಾಣಿಕ ವಿಮಾನದಲ್ಲಿದ್ದ ಎಲ್ಲಾ 10 ಜನರು ಸಾವನ್ನಪ್ಪಿದ್ದಾರೆ ಎಂದು ಅಮೆರಿಕದ ಕೋಸ್ಟ್ ಗಾರ್ಡ್ ಹೇಳಿದೆ.

Join Our Whatsapp Group

ಅಲಾಸ್ಕಾದ ಪಶ್ಚಿಮ ಕರಾವಳಿಯಲ್ಲಿ ನಿಯಂತ್ರಣ ಕಳೆದುಕೊಂಡು ನಾಪತ್ತೆಯಾದ ವಿಮಾನ ಪತನವಾಗಿರುವ ಸ್ಥಳವನ್ನು ಅಮೆರಿಕದ ಕೋಸ್ಟ್​ ಗಾರ್ಡ್​ ಶುಕ್ರವಾರ ಪತ್ತೆ ಹಚ್ಚಿದೆ. ಅಲಾಸ್ಕಾದ ಕೋಸ್ಟ್ ಗಾರ್ಡ್ X ಖಾತೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, ವಿಮಾನವು ನೋಮ್‌ನಿಂದ ಆಗ್ನೇಯಕ್ಕೆ 34 ಮೈಲುಗಳಷ್ಟು ದೂರದಲ್ಲಿ ಕಂಡು ಬಂದಿದೆ ಎಂದು ಹೇಳಿದೆ.

ವಿಮಾನದಲ್ಲಿದ್ದ ಎಲ್ಲರೂ ಮೃತಪಟ್ಟಿದ್ದಾರೆ ಎಂದು ನಂಬಲಾಗಿದೆ ಎಂದು ಕೋಸ್ಟ್​ ಗಾರ್ಡ್​ ಅಧಿಕಾರಿಗಳು ತಿಳಿಸಿದ್ದಾರೆ. ಕಳಪೆ ಹವಾಮಾನ ಮತ್ತು ಕಡಿಮೆ ಗೋಚರತೆಯಿಂದಾಗಿ ವಿಮಾನ ನಿಯಂತ್ರಣ ಕಳೆದುಕೊಂಡು ಪತನವಾಗಿದೆ. ಅಗ್ನಿಶಾಮಕ ಸಿಬ್ಬಂದಿ ನೋಮ್‌ನಿಂದ ಟಾಪ್‌ಕಾಕ್‌ವರೆಗೆ ತೀವ್ರ ಹುಡುಕಾಟ ನಡೆಸಿತು. ಇನ್ನು ಯುಎಸ್ ಕೋಸ್ಟ್ ಗಾರ್ಡ್ ಫ್ಲೈಟ್ ಸಿಬ್ಬಂದಿ ವಾಯುಪ್ರದೇಶದಲ್ಲಿ ಶೋಧ ಕೈಗೊಂಡಿತ್ತು.

ಅಲಾಸ್ಕಾ ಸಾರ್ವಜನಿಕ ಸುರಕ್ಷತೆ ಇಲಾಖೆಯ ಪ್ರಕಾರ, ಬೆರಿಂಗ್ ಏರ್ ನಿರ್ವಹಿಸುವ ಟರ್ಬೊಪ್ರಾಪ್ ಸೆಸ್ನಾ ಕಾರವಾನ್ ಗುರುವಾರ ಮಧ್ಯಾಹ್ನ ಕಾಣೆಯಾಗಿದೆ ಎಂದು ವರದಿಯಾಗಿತ್ತು.

ಸ್ಥಳೀಯ ಕಾಲಮಾನ ಶುಕ್ರವಾರ ಬೆಳಗ್ಗೆ 9 ಗಂಟೆಗೆ ವಿಮಾನದಲ್ಲಿದ್ದ ಪ್ರತಿಯೊಬ್ಬರ ಕುಟುಂಬಗಳಿಗೆ ಸೂಚನೆ ನೀಡಲಾಗಿದೆ ಎಂದು ನೋಮ್ ಸ್ವಯಂಸೇವಕ ಅಗ್ನಿಶಾಮಕ ಇಲಾಖೆ ತಿಳಿಸಿದೆ. ಅಲಾಸ್ಕಾ ಸ್ಟೇಟ್ ಟ್ರೂಪರ್ ಲೆಫ್ಟಿನೆಂಟ್ ಬೆನ್ ಎಂಡ್ರೆಸ್ ಅವರು ಮಾತನಾಡಿ, ವಿಮಾನದಲ್ಲಿದ್ದವರೆಲ್ಲ ವಯಸ್ಕರು ಎಂದು ಹೇಳಿದರು.