ಮೈಸೂರು: ಮುಡಾ ಕೇಸ್ ಗೆ ಸಂಬಂಧಿಸಿದಂತೆ ತನಿಖಾ ವರದಿ ಪ್ರತಿ ನೀಡಲು ಲೋಕಾಯುಕ್ತ ಎಸ್ ಪಿ ಸತಾಯಿಸುತ್ತಿದ್ದಾರೆ ಎಂದು ದೂರುದಾರ ಸ್ನೇಹಮಯಿ ಕೃಷ್ಣ ಆರೋಪ ಮಾಡಿದ್ದಾರೆ.
ಈ ಕುರಿತು ಮಾತನಾಡಿದ ಸ್ನೇಹಮಯಿ ಕೃಷ್ಣ, ಲೋಕಾಯುಕ್ತ ಎಸ್ ಪಿ ವರದಿ ಪ್ರತಿ ನೀಡಲು ಸತಾಯಿಸುತ್ತಿದ್ದಾರೆ. ಆರೋಪಿಗಳ ಜತೆ ಶಾಮೀಲಾಗಿ ರಕ್ಷಣೆ ನೀಡುತ್ತಿದ್ದಾರೆ. ಕೋರ್ಟ್ ಗೆ ಅರ್ಜಿ ಸಲ್ಲಿಸಿ ಪ್ರತಿ ಪಡೆಯುವೆ. ಶೀಘ್ರದಲ್ಲೇ ತಕರಾರು ಅರ್ಜಿ ಸಲ್ಲಿಸುವೆ ಎಂದರು.
ವಕೀಲರ ಸಹಾಯ ಪಡೆದು ನಾನೇ ವಾದ ಮಾಡುತ್ತೇನೆ. ನನ್ನ ಆತ್ಮಸ್ಥೈರ್ಯ ಕುಗ್ಗಿಸಲು ಯಾರಿಂದಲೂ ಸಾಧ್ಯವಿಲ್ಲ. ಫೋನ್ ಮಾಡಿದರೂ ಎಸ್ ಪಿ ಉತ್ತರ ಕೊಡುತ್ತಿಲ್ಲ. ದೂರುದಾರರಿಗೆ ಕಿರುಕುಳ ಕೊಡುವುದೇ ಅವರ ಉದ್ದೇಶ ಎಂದು ಸ್ನೇಹಮಯಿ ಕೃಷ್ಣ ಕಿಡಿಕಾರಿದರು.
Saval TV on YouTube