ಮನೆ Uncategorized ಹೊರಗಿನವರೆಂಬ ಟೀಕೆಗೆ ಠಕ್ಕರ್: ಚಾಮರಾಜನಗರದ ಮತದಾರರಾದ ಸೋಮಣ್ಣ, ಪತ್ನಿ

ಹೊರಗಿನವರೆಂಬ ಟೀಕೆಗೆ ಠಕ್ಕರ್: ಚಾಮರಾಜನಗರದ ಮತದಾರರಾದ ಸೋಮಣ್ಣ, ಪತ್ನಿ

0

ಬೆಂಗಳೂರಿನ ವಿಜಯನಗರ ಕ್ಷೇತ್ರ ವ್ಯಾಪ್ತಿಯ ಮತದಾರರ ಪಟ್ಟಿಯಲ್ಲಿದ್ದ ವಿ.ಸೋಮಣ್ಣ ಚಾಮರಾಜನಗರ ಅಭ್ಯರ್ಥಿಯಾದ ಬಳಿಕ ಚಾಮರಾಜನಗರ ಮತದಾರರ ಪಟ್ಟಿಗೆ ತಮ್ಮ ಹಾಗೂ ಪತ್ನಿ ಶೈಲಜಾ ಹೆಸರು ಸೇರ್ಪಡೆ ಮಾಡಿದ್ದಾರೆ.

Join Our Whatsapp Group

ಚಾಮರಾಜನಗರದ ಶಂಕನಪುರ ಬಡಾವಣೆಯ ಮನೆ ವಿಳಾಸ ಕೊಟ್ಟಿದ್ದಾರೆ. ತಮ್ಮ ಪರವಾಗಿ ಮತ ಚಲಾಯಿಸಿಕೊಳ್ಳುವುದರೊಂದಿಗೆ ‘ಹೊರಗಿನ ಅಭ್ಯರ್ಥಿ’ ಎಂಬ ಮೂದಲಿಕೆಗೆ ಸೋಮಣ್ಣ ಠಕ್ಕರ್ ಕೊಟ್ಟಿದ್ದು, ಚಾಮರಾಜನಗರದಲ್ಲೇ ಇರುತ್ತೇನೆ ಎಂಬ ಸಂದೇಶ ರವಾನಿಸಿದ್ದಾರೆ. “ಚಾಮರಾಜನಗರ ಅಭ್ಯರ್ಥಿ ಆದ ಬಳಿಕ ಮತದಾರರ ಪಟ್ಟಿ ಪರಿಷ್ಕರಣೆಗೆ ಕಾಲವಕಾಶವಿದ್ದ ಹಿನ್ನೆಲೆಯಲ್ಲಿ ನಾನು ಹಾಗೂ ನನ್ನ ಶ್ರೀಮತಿ ಇಲ್ಲಿಗೆ ಮತದಾನವನ್ನು ವರ್ಗಾಯಿಸಿಕೊಂಡಿದ್ದೇನೆ. ನಾನಿದ್ದದ್ದು ವಿಜಯನಗರ, ಗೋವಿಂದರಾಜನಗರ ಹಾಗೂ ಬಿನ್ನಿಪೇಟೆ ಕ್ಷೇತ್ರ ಆಗಿತ್ತು. ನನ್ನ ಪರವಾಗಿ ನಾನು 3-4 ಬಾರಿಯಷ್ಟೇ ಮತ ಚಲಾಯಿಸಿಕೊಂಡಿರುವುದು. ಈ ಬಾರಿ ಚಾಮರಾಜನಗರದಲ್ಲಿ ಮತ ಚಲಾಯಿಸಿಸುತ್ತೇನೆ” ಎಂದು ತಿಳಿಸಿದರು.

ವರುಣ ಚುನಾವಣಾ ಅಖಾಡ ವರ್ಣರಂಜಿತವಾಗಿದೆ. ಪ್ರತಿ ಊರಿಗೂ ಭೇಟಿ ಕೊಟ್ಟಿದ್ದೇನೆ. ನಾನು ಗೆದ್ದ ಬಳಿಕ ಇಡೀ ಕ್ಷೇತ್ರವನ್ನೇ ಬದಲಿಸುತ್ತೇನೆ ಎಂದು ಸೋಮಣ್ಣ ಭರವಸೆ ನೀಡಿದರು. ಚಾಮರಾಜನಗರದಲ್ಲಿ ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್​​ಗೆ ಯಾವ ಪುರುಷಾರ್ಥಕ್ಕೆ ಮತ ಹಾಕಬೇಕು?, ಸಿದ್ದರಾಮಯ್ಯ ಹೆಜ್ಜೆ ಗುರುತುಗಳು ವರುಣ ಕ್ಷೇತ್ರದಲ್ಲಿ ಏನೂ ಇಲ್ಲ ಎಂದು ಹರಿಹಾಯ್ದರು.

ಕೆಲ‌ವು ಕಿಡಿಗೇಡಿಗಳು ನಾನು ನನ್ನ ಮಗನನ್ನು ಎಂಎಲ್‌ಎ ಮಾಡಲು ಚಾಮರಾಜನಗರಕ್ಕೆ ಬಂದಿದ್ದೇನೆಂದು ವದಂತಿ ಹಬ್ಬಿಸುತ್ತಿದ್ದಾರೆ. ಇದಕ್ಕೆಲ್ಲ ಜನರು ಕಿವಿಗೊಡಬಾರದು. ವರಿಷ್ಠರು ಇಲ್ಲಿಗೆ ಕಳುಹಿಸಿದ್ದು ನಾನು ಬಂದಿದ್ದೇನೆ. ಚಾಮರಾಜನಗರ ಸರ್ವಾಂಗೀಣ ಅಭಿವೃದ್ಧಿಗೆ ನಾನು ಬಂದಿದ್ದು. ನನ್ನ ಮಗನನ್ನು ಎಂಎಲ್‌ಎ ಮಾಡಲು ಬಂದಿಲ್ಲ‌ ಎಂದರು. ಹೊರಗಿನವರು, ಬೆಂಗಳೂರಿಗೆ ಹೊರಟು ಹೋಗುತ್ತಾರೆ ಎಂಬುದನ್ನು ಜನರು ನಂಬಬಾರದು. ಇಲ್ಲೇ ಮನೆ ಮಾಡಿದ್ದೇನೆ. ಇಲ್ಲೇ ಇರುತ್ತೇನೆ. ನಾನು ಇಲ್ಲಿನ ಮತದಾರನೂ ಆಗಿದ್ದೇನೆ ಎಂದು ತಿಳಿಸಿದರು.