ಮನೆ ಆರೋಗ್ಯ ಕೆಲವೊಂದು ಡ್ರೈ ಫ್ರೂಟ್ಸ್’ಗಳನ್ನು ಬೇಡ ಎಂದರೂ ತಿನ್ನಬೇಕಂತೆ!

ಕೆಲವೊಂದು ಡ್ರೈ ಫ್ರೂಟ್ಸ್’ಗಳನ್ನು ಬೇಡ ಎಂದರೂ ತಿನ್ನಬೇಕಂತೆ!

0

ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ನಾವು ಆರೋಗ್ಯಕರ ಆಹಾರಗಳ ಕಡೆಗೆ ಒಲವು ತೋರಬೇಕು. ಅವುಗಳಲ್ಲಿ ಡ್ರೈ ಫ್ರೂಟ್ಸ್ ಕೂಡ ಒಂದು. ಚಳಿಗಾಲದಲ್ಲಿ ಬದಲಾದ ತಾಪಮಾನಕ್ಕೆ ತಕ್ಕಂತೆ ನಮ್ಮ ದೇಹ ಹೊಂದಿಕೊಳ್ಳಲು ಮಾಡುವಂತ ಗುಣ ಮತ್ತು ಶಕ್ತಿ ಇವುಗಳಲ್ಲಿದೆ.

ದೇಹಕ್ಕೆ ಬೇಕಾದ ಸಾಕಷ್ಟು ಬಗೆಯ ಪೌಷ್ಟಿಕ ಸತ್ವಗಳು ಮತ್ತು ವಿಟಮಿನ್ ಅಂಶಗಳು ಇವುಗಳಲ್ಲಿ ಸಿಗಲಿವೆ. ಸಂಜೆಯ ಸ್ನಾಕ್ಸ್ ಸಮಯದಲ್ಲಿ ಬೇರೆ ಬೇರೆ ಅನಾರೋಗ್ಯಕರ ಆಹಾರಗಳನ್ನು ತಿನ್ನುವ ಬದಲು ಒಂದು ಹಿಡಿ ಡ್ರೈ ಫ್ರೂಟ್ಸ್ ತಿನ್ನುವುದರಿಂದ ಸಕಾರಾತ್ಮಕ ಫಲಿತಾಂಶಗಳು ಸಿಗುತ್ತವೆ. ಆರೋಗ್ಯ ತಜ್ಞರಾದ ಲವ್ನೀತ್ ಬಾತ್ರಾ ಹೇಳುವ ಪ್ರಕಾರ ಡ್ರೈ ಫ್ರೂಟ್ಸ್ ತಿನ್ನುವುದರಿಂದ ಈ ಕೆಳಗಿನ ಆರೋಗ್ಯದ ಲಾಭಗಳು ಲಭಿಸುತ್ತವೆ….

ಇವುಗಳಲ್ಲಿ ಆಂಟಿ ಆಕ್ಸಿಡೆಂಟ್ ಪ್ರಮಾಣ ಹೆಚ್ಚಾಗಿದೆ

• ನಿಮ್ಮ ದೇಹದ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡಿ ನಿಮ್ಮ ದೇಹದಲ್ಲಿ ಎಚ್ ಡಿ ಎಲ್ ಅಂದರೆ ಒಳ್ಳೆಯ ಕೊಲೆಸ್ಟ್ರಾಲ್ ಪ್ರಮಾಣವನ್ನು ಜಾಸ್ತಿ ಮಾಡುತ್ತವೆ. ಒಳ್ಳೆಯ ನಾರಿನ ಅಂಶ ಸಿಗಲಿದ್ದು, ನಿಮಗೆ ಹೊಟ್ಟೆ ತುಂಬಿದ ಅನುಭವ ಉಂಟಾಗುತ್ತದೆ.

• ಉರಿಯುತ ನಿವಾರಕ ಗುಣಗಳು ಇವುಗಳಲ್ಲಿವೆ

•  ದೇಹ ಪೌಷ್ಟಿಕ ಸತ್ವಗಳನ್ನು ಹೀರಿಕೊಳ್ಳುವ ಹಾಗೆ ಮಾಡುತ್ತವೆ.

• ಕರುಳಿನ ಆರೋಗ್ಯಕ್ಕೆ ಒಳ್ಳೆಯದು

• ಹಾಗಾದರೆ ಯಾವೆಲ್ಲ ಡ್ರೈ ಫ್ರೂಟ್ಸ್ ಆರೋಗ್ಯಕ್ಕೆ ಯಾವ ತರಹದ ಲಾಭಗಳನ್ನು ಕೊಡುತ್ತವೆ ನೋಡೋಣ….

ಬಾದಾಮಿ ಬೀಜಗಳು

• ಇವುಗಳಲ್ಲಿ ವಿಟಮಿನ್ ಇ ಹೆಚ್ಚಾಗಿದ್ದು, ಕೊಬ್ಬಿನ ಅಂಶ ಕರಗುವ ಪೌಷ್ಟಿಕ ಸತ್ವ ಇದರಲ್ಲಿದೆ.

• ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ನಿಮಗೆ ಸಣ್ಣಪುಟ್ಟ ಕಾಯಿಲೆಗಳು ಬರದಂತೆ ತಡೆಯುತ್ತದೆ.

•  ಕರುಳಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಕರುಳಿನ ಭಾಗದಲ್ಲಿ ಒಳ್ಳೆಯ ಬ್ಯಾಕ್ಟೀರಿಯಗಳನ್ನು ಉತ್ಪತ್ತಿ ಮಾಡಿ ನೀವು ಸೇವಿಸಿದ ಆಹಾರ ಚೆನ್ನಾಗಿ ಜೀರ್ಣವಾಗುವಂತೆ ಮಾಡುತ್ತದೆ.

ವಾಲ್ ನಾಟ್ ಬೀಜಗಳು

• ಇವುಗಳಲ್ಲಿ ಒಮೆಗಾ 3 ಫ್ಯಾಟಿ ಆಸಿಡ್ ಪ್ರಮಾಣ ಹೆಚ್ಚಾಗಿದೆ. ಮೆದುಳಿನ ಅಭಿವೃದ್ಧಿಯಲ್ಲಿ ಮತ್ತು ಉರಿಯುತ ನಿವಾರಣೆಯಲ್ಲಿ ವಾಲ್ ನಟ್ ಪಾತ್ರವಿದೆ.

• ತಾಮ್ರದ ಖನಿಜಾಂಶ ವಾಲ್ನಟ್ ಬೀಜಗಳಲ್ಲಿ ಹೆಚ್ಚಾಗಿದ್ದು, ನಿಮ್ಮ ದೇಹದಲ್ಲಿ ಶಕ್ತಿಯ ಉತ್ಪತ್ತಿ ನಡೆಯುತ್ತದೆ.

ಗೋಡಂಬಿ ಬೀಜಗಳು

• ಗೋಡಂಬಿ ಬೀಜಗಳಲ್ಲಿ ಚಳಿಗಾಲಕ್ಕೆ ತಕ್ಕಂತೆ ನಿಮ್ಮ ದೇಹದ ತಾಪಮಾನವನ್ನು ಅಭಿವೃದ್ಧಿ ಪಡಿಸುವ ಗುಣವಿದೆ. ನಿಮ್ಮ ದೇಹದಲ್ಲಿ ಉಷ್ಣಾಂಶವನ್ನು ಇದು ಹೆಚ್ಚು ಮಾಡುತ್ತದೆ.

• ಗೋಡಂಬಿ ಬೀಜಗಳಲ್ಲಿ ವಿಟಮಿನ್ ಬಿ ಅಪಾರ ಪ್ರಮಾಣದಲ್ಲಿ ಇರಲಿದ್ದು, ನಿಮ್ಮ ದೇಹದ ಜೀವಕೋಶಗಳನ್ನು ಬಲಪಡಿಸುತ್ತದೆ.

• ಅಷ್ಟೇ ಅಲ್ಲದೆ ನಾರಿನ ಅಂಶ ಕೂಡ ಗೋಡಂಬಿ ಬೀಜಗಳಲ್ಲಿ ಹೆಚ್ಚಾಗಿ ಸಿಗಲಿದ್ದು, ನಿಮ್ಮ ಹೊಟ್ಟೆಗೆ ಸಂಬಂಧಪಟ್ಟ ಹಲವಾರು ಸಮಸ್ಯೆಗಳು ಪರಿಹಾರವಾಗುತ್ತವೆ. ಮಲಬದ್ಧತೆ ಮತ್ತು ಅಸಿಡಿಟಿ ದೂರವಾಗುತ್ತದೆ.

ಪಿಸ್ತಾ ಬೀಜಗಳು

ಪಿಸ್ತಾ ಬೀಜಗಳಲ್ಲಿ ಫಾಸ್ಫರಸ್ ಮತ್ತು ಅಮೈನೊ ಆಮ್ಲಗಳ ಪ್ರಮಾಣ ಅಪಾರವಾಗಿದ್ದು, ನಿಮ್ಮ ದೇಹದಲ್ಲಿ ಹಾರ್ಮೋನ್ ಉತ್ಪತ್ತಿಯಲ್ಲಿ ನೆರವಾಗುತ್ತದೆ. ಮುಖ್ಯವಾಗಿ ವಿಟಮಿನ್ ಬಿ ಇವುಗಳಿಂದ ನಿಮ್ಮ ದೇಹದಲ್ಲಿ ಉಪಯೋಗಕ್ಕೆ ಬರುತ್ತದೆ. ಆರೋಗ್ಯಕರ ಬ್ಯಾಕ್ಟೀರಿಯಗಳ ಪ್ರಮಾಣ ಮತ್ತು ಅಭಿವೃದ್ಧಿ ನಿಮ್ಮ ದೇಹಕ್ಕೆ ಇವುಗಳಿಂದ ಸಿಗುತ್ತದೆ.

ಕಡಲೆ ಬೀಜಗಳು

• ಕಡಲೆ ಬೀಜಗಳಲ್ಲಿ ನಿಮ್ಮ ಹೊಟ್ಟೆ ತುಂಬಿಸುವ ಗುಣವಿದೆ. ಅಂದರೆ ಸ್ವಲ್ಪ ಪ್ರಮಾಣದಲ್ಲಿ ನೀವು ಕಡಲೆ ಬೀಜ ತಿಂದರೂ ಸಹ ಹೆಚ್ಚು ಕಾಲ ಹೊಟ್ಟೆ ಹಸಿವು ಆಗುವುದಿಲ್ಲ. ಆರೋಗ್ಯಕರ ತೂಕ ನಿರ್ವಹಣೆಯಾಗುತ್ತದೆ.

• ವಿಟಮಿನ್ b3 ಮತ್ತು ನಯಾಸಿನ್ ಹೆಚ್ಚಾಗಿ ಕಡಲೆ ಬೀಜಗಳಲ್ಲಿ ಸಿಗಲಿದ್ದು, ನಿಮ್ಮ ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ. ದೇಹದಲ್ಲಿ ಎಲ್ಲಾ ಭಾಗಗಳಿಗೆ ಉತ್ತಮ ರಕ್ತ ಸಂಚಾರ ಉಂಟಾಗುವಂತೆ ಮಾಡುತ್ತದೆ.

ಹಿಂದಿನ ಲೇಖನನೀರವ್ ಮೋದಿ ಹಗರಣ: ಲಿಖಿತ ದೂರು ಇಲ್ಲದೆ ಸಿಎಗಳ ವಿರುದ್ಧ ಐಸಿಎಐ ಸ್ವಯಂಪ್ರೇರಿತ ತನಿಖೆ ನಡೆಸಬಹುದು- ದೆಹಲಿ ಹೈಕೋರ್ಟ್
ಮುಂದಿನ ಲೇಖನ28.78 ಕೋಟಿ ವೆಚ್ಚದಲ್ಲಿ ಅಶೋಕಪುರಂ ರೈಲು ನಿಲ್ದಾಣದ ಅಭಿವೃದ್ಧಿ: ಪ್ರತಾಪ್ ಸಿಂಹ