ಧೂಮಪಾನ, ಹೊಗೆಸೊಪ್ಪು ಜಗಿಯುವುದು ಇಂತಹ ಅಭ್ಯಾಸಗಳಿಂದ ದೂರವಿರಬೇಕು. ಸಿಗರೇಟ್ ಬಿಡಿಗಳಲ್ಲಿ ಹೋಗೆಯೇ ಅಲ್ಲದೆ ಟಾರು ನೀ ಕೋಟಿನ್ ನಂತಹ ಕ್ಯಾನ್ಸರನ್ನು ಉಂಟುಮಾಡುವ ಬೇರೆ ಪದಾರ್ಥಗಳನ್ನು ಕೂಡಾ ಇವೆ. ಇವುಗಳ ತಂಟಗೆ ಹೋಗದಿದ್ದರೆ ಬಾಯಿ ಕ್ಯಾನ್ಸರ್,ಶ್ವಾಸಕೋಶಗಳ ಕ್ಯಾನ್ಸರ್ ಬರುವ ಸಂಭವ ಕಡಿಮೆಯಾಗುತ್ತದೆ.
★ವ್ಯಕ್ತಿಗತ ಶುಚಿತ್ವ, ಮುಖ್ಯವಾಗಿ ಬಾಯಿಯ ಶುಚಿತ್ವ ಚರ್ಮದ ಶುಚಿತ್ವ ಜನನೇಂದ್ರಿಯಗಳ ಶುಚಿತ್ವವನ್ನು ಪಾಲಿಸುವುದರ ಮೂಲಕ, ಆಯಾ ಅವಯವಗಳಿಗೆ ಕ್ಯಾನ್ಸರ್ ರಾಗದಂತೆ ನೋಡಿಕೊಳ್ಳಬಹುದು.
★ಹಳಸಿದ ಪದಾರ್ಥಗಳನ್ನು ತಿನ್ನಬಾರದು ಕೊನೆಗೆ ಕಪ್ಪಾಗಿ ಕೆಟ್ಟು ಹೋದ ಪರೋಟ ಚಪಾತಿಗಳ ಭಾಗವನ್ನು ತಿನ್ನಬಾರದು.
★ಮಧ್ಯ,ಕರಿದ ಪದಾರ್ಥಗಳು, ಕೊಬ್ಬು ಸಂಗ್ರಹಿಸಿದ ಮಾಂಸ ಮೊದಲಾದವುಗಳನ್ನು ಹೆಚ್ಚಾಗಿ ತಿನ್ನದಿರುವುದೇ ಮೇಲು. ಇವೆಲ್ಲವೂ ಹೆಚ್ಚಾಗಿ ತೆಗೆದುಕೊಂಡರೆ, ಯಾವುದೋ ಒಂದು ರೂಪದಲ್ಲಿ ಕ್ಯಾನ್ಸರನ್ನು ತರಬಲ್ಲವು.
★ ಒಂದು ಬಾರಿ ಕಾಯಿಸಿದ ಎಣ್ಣೆಯನ್ನು ಅಡಿಗೆಕಾಗಲಿ ಕರಿಯಾಲಾಗಲಿ ಪದೇ ಪದೇ ಉಪಯೋಗಿಸಬಾರದು.
★ ಸಿಪ್ಪೆ ತೆಗೆಯದೆ ತಿನ್ನುವ ಹಣ್ಣುಗಳನ್ನು ಅವುಗಳ ಮೇಲಿರುವ ಕ್ರಿಮಿನಾಶಕಗಳು ಪೂರ್ತಿ ಹೋಗುವವರೆಗೆ ಶುಭ್ರವಾಗಿ ತೊಳೆದು ತಿನ್ನಬೇಕು. ತರಕಾರಿಗಳನ್ನು ಸಹ ಹಗೆಯೇ ಶುಭ್ರವಾಗಿ ತೊಳೆಯಬೇಕು.
★ಚಿಕ್ಕ ವಯಸ್ಸಿನಲ್ಲಿ ಮದುವೆ, ಅನೇಕ ಬಾರಿ ಗರ್ಭಧಾರಣೆಯಂತಹವು ಗರ್ಭಕೋಶದ ಕ್ಯಾನ್ಸರ್ ಗೆ ದಾರಿ ಮಾಡುವ ಅವಕಾಶವಿದೆ.
★ಸ್ವೇಚ್ಛಾ ಲೈಂಗಿಕತೆ,ವಿವಾಹೇತರ ಆಕ್ರಮ ಸಂಬಂಧಗಳಿಗೆ ಕಡಿವಾಣ ಹಾಕಬೇಕು.
★ತಡವಾದ ಗರ್ಭಧಾರಣೆ ಗರ್ಭಕೋಶ ಕ್ಯಾನ್ಸಲ್ಗೂ ಗರ್ಭ ಕೊರಳಿನ ಕ್ಯಾನ್ಸರಿಗೂ ದಾರಿ ಮಾಡುವ ಸಂಭವವಿದೆ.
★ನಾರು ಪದಾರ್ಥ ಅಧಿಕವಾಗಿರುವ ಆಹಾರಗಳು, ಹಣ್ಣುಗಳು, ಹಸಿರು ತರಕಾರಿಗಳನ್ನು ತಿನ್ನುವುದರಿಂದ, ಕೆಲಬಗೆಯ ಕ್ಯಾನ್ಸರ್ಗಳನ್ನು ದೂರವಿರಬಹುದು ಉದಾಹರಣೆಗೆ
★ಹೂಕೇಸರ
★ಕ್ಯಾರೆಟ್
★ಕ್ಯಾಬೇಜ್
★ಸೊಪ್ಪು ತರಕಾರಿಗಳು ಇತ್ಯಾದಿ.
★ಯಾವ ಅಸ್ವಸ್ಥತೆಗಾಗಲಿ ಔಷಧಗಳನ್ನು ಸ್ವಯಂವೈದ್ಯ ನಿಮಗೆ ನೀವೇ ಇಷ್ಟ ಬಂದ ರೀತಿಯಲ್ಲಿ ಸ್ವಯಂ ತೆಗೆದುಕೊಳ್ಳಬಾರದು. ಡಾಕ್ಟರ್ ಸೂಚನೆಯ ಮೆರೆಗೇ ಬಳಸಬೇಕು.
★ ಶರೀರದಲ್ಲ ಅಧಿಕವಾಗಿರುವ ಕೊಬ್ಬು ಹೋಗಿಸಲು ನಿಯಮಿತವಾಗಿ ವ್ಯಾಯಾಮ ಮಾಡಬೇಕು. ಸೊಂಟ ದಪ್ಪವಾಗಿರುವ ಸ್ತ್ರೀಯರಿಗೆ ಗರ್ಭಕೋಶದ ಕ್ಯಾನ್ಸರ್ ಬರುವ ಸಂಭವವಿದೆ.
★ಜೀವನದಲ್ಲಿ ಎದುರಾಗುವ ಒತ್ತಡಗಳನ್ನು ಸಾಧ್ಯವಾದಷ್ಟು ತಗಿಸಿಕೊಳ್ಳಬೇಕು. ಉದ್ರೇಕ ಕಳವಳಗಳಿಂದಾಗಿ ನಮ್ಮಲ್ಲಿನ ರೋಗ ನಿರೋಧಕ ವ್ಯವಸ್ಥೆ ದುರ್ಬಲವಾಗುತ್ತದೆ.ಆದರಿಂದ ಕ್ಯಾನ್ಸರ್ ಕಣಗಳೊಡನೆ ಹೋರಾಡುವ ಶಕ್ತಿ ನಮ್ಮಲ್ಲಿ ಕಡಿಮೆಯಾಗುತ್ತದೆ.