ಯುಎಸ್ ಮೂಲದ ಹಿಂಡೆನ್‌ಬರ್ಗ್ ರಿಸರ್ಚ್ ಸಂಸ್ಥೆ, ಎಕ್ಸ್ನಲ್ಲಿ ಟ್ವೀಟ್ವೊಂದನ್ನು ಹಂಚಿಕೊಂಡಿದೆ. Something big soon India (ಸದ್ಯದಲ್ಲಿಯೇ ಭಾರತದಲ್ಲಿ ಮತ್ತೊಂದು ದೊಡ್ಡದು ನಡೆಯಲಿದೆ) ಎಂಬ ಸೂಚನೆಯೊಂದನ್ನು ನೀಡಿದೆ. ಇನ್ನು ಈ ಟ್ವೀಟ್ ಎಲ್ಲ ಕಡೆ ಭಾರೀ ವೈರಲ್ ಆಗುತ್ತಿದ್ದು, ಚರ್ಚೆ ಕೂಡ ನಡೆಯುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರವಾಗಿ ಟ್ರೆಂಡ್ ಆಗುತ್ತಿದೆ.
ಈ ಹಿಂದೆ ಭಾರತದ ಅದಾನಿ ಗ್ರೂಪ್ ಕಂಪನಿಯನ್ನು ಟಾರ್ಗೆಟ್ ಮಾಡಿ ಒಂದು ಸಂಶೋಧನೆಯ ವರದಿಯನ್ನು ನೀಡಿತ್ತು. ಈ ಬಗ್ಗೆ ಸಂಸತ್ ಸಭೆಯಲ್ಲೂ ಭಾರೀ ಚರ್ಚೆಗೆ ಕಾರಣವಾಗಿತ್ತು. ಮಾನನಷ್ಟ ಮೊಕದ್ದಮೆಯ ನಂತರ ಈ ಸಂಸ್ಥೆ ಮೌನವಾಗಿತ್ತು. ಇದೀಗ ಮತ್ತೆ ಏನೋ ದೊಡ್ಡ ಮಟ್ಟದಲ್ಲಿ ಭಾರತಕ್ಕೆ ಕಾದಿದೆ ಎಂಬುಂತೆ ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ.
ಹಿಂಡೆನ್‌ಬರ್ಗ್ ಅದಾನಿ ಗ್ರೂಪ್‌ನ ವಿರುದ್ಧದ ಆರೋಪ ಮಾಡಿದ ನಂತರ ಅದಾನಿ ಗ್ರೂಪ್ ಸ್ಟಾಕ್ ಬೆಲೆಗಳಲ್ಲಿ ಗಮನಾರ್ಹ ಕುಸಿತ ಕಂಡಿತ್ತು. ಈ ಆರೋಪ $ 100 ಶತಕೋಟಿ ನಷ್ಟಕ್ಕೆ ಕಾರಣವಾಯಿತು. ಹಿಂಡೆನ್‌ಬರ್ಗ್ ವರದಿಯಲ್ಲಿ ಮಾಡಿದ ಎಲ್ಲಾ ಆರೋಪಗಳನ್ನು ಅದಾನಿ ಗ್ರೂಪ್ ನಿರಾಕರಿಸಿದೆ. ಆಧಾರರಹಿತವಾದ ಆರೋಪಗಳನ್ನು ಮಾಡಲಾಗಿದೆ ಎಂದು ಗೌತಮ್ ಅದಾನಿ ಹೇಳಿದರು.
ಇನ್ನು ಅದಾನಿ ಗ್ರೂಪ್ ಮೇಲೆ ಬಂದ ಆರೋಪದ ಬಗ್ಗೆ ಮಾತನಾಡಿದ ಭಾರತದ ಹಿರಿಯ ವಕೀಲ ಮತ್ತು ಬಿಜೆಪಿ ನಾಯಕ ಮಹೇಶ್ ಜೇಠ್ಮಲಾನಿಯವರ, ಇತ್ತೀಚಿನ ಆರೋಪಗಳಿಂದ ಪರಿಸ್ಥಿತಿ ಮತ್ತಷ್ಟು ಜಟಿಲವಾಗಿದೆ. ಚೀನಾದ ಸಂಪರ್ಕ ಹೊಂದಿರುವ ಅಮೆರಿಕದ ಉದ್ಯಮಿಯೊಬ್ಬರು ಅದಾನಿ ಕುರಿತು ಹಿಂಡೆನ್‌ಬರ್ಗ್ ವರದಿಗೆ ನಿಯೋಜಿಸುತ್ತಾರೆ. ಇದು ಕಿಂಗ್ಡನ್ ಕ್ಯಾಪಿಟಲ್ ಮ್ಯಾನೇಜ್ಮೆಂಟ್ LLC ಯ ಮಾರ್ಕ್ ಕಿಂಗ್ಡನ್ ವರದಿ ಎಂದು ಹೇಳಿದ್ದಾರೆ.
ಹಿಂಡೆನ್‌ಬರ್ಗ್ ವರದಿ ರಾಜಕೀಯ ವರದಿಯಾಗಿದೆ. ಇದು ಅದಾನಿ ಗ್ರೂಪ್ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಆದರೆ ಅದಾನಿ ಕಂಪನಿಗೆ ಆರ್ಥಿಕವಾಗಿ ನಷ್ಟ ಉಂಟಾಗಬಹುದು ಈ ಬಗ್ಗೆ ಕಾನೂನು ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ಹೇಳಿದರು. ಆದರೆ ಇದೀಗ ಮತ್ತೆ ಹಿಂಡೆನ್‌ಬರ್ಗ್ ಎಕ್ಸ್ನಲ್ಲಿ ಭಾರತಕ್ಕೆ ದೊಡ್ಡ ಆಘಾತ ಕಾದಿದೆ ಎಂಬ ರೀತಿಯಲ್ಲಿ ಟ್ವೀಟ್ ಮಾಡಿದ್ದಾರೆ.