ಮನೆ ಅಪರಾಧ ಕಾರುಡಿಕ್ಕಿ ಹೊಡೆದು ಮಗ ಸಾವು; ತಾಯಿಗೆ ತೀವ್ರ ಪೆಟ್ಟು

ಕಾರುಡಿಕ್ಕಿ ಹೊಡೆದು ಮಗ ಸಾವು; ತಾಯಿಗೆ ತೀವ್ರ ಪೆಟ್ಟು

0

ಮಳವಳ್ಳಿ: ರಸ್ತೆ ಬದಿಯಲ್ಲಿ ಹೋಗುತ್ತಿದ್ದ ತಾಯಿ ಮಗನಿಗೆ ಕಾರುಡಿಕ್ಕಿ ಹೊಡೆದ ಪರಿಣಾಮ 8 ವರ್ಷದ ಮಗ ಸಾವನ್ನಪ್ಪಿ, ತಾಯಿಯ ಕಾಲಿಗೆ ತೀವ್ರ ಪೆಟ್ಟಾಗಿರುವ ಘಟನೆ ಮಳವಳ್ಳಿ ಪಟ್ಟಣದಲ್ಲಿ ನಡೆದಿದೆ.

Join Our Whatsapp Group

ಮಳವಳ್ಳಿ ಪಟ್ಟಣದ ಪೇಟೆಬೀದಿ ನಿವಾಸಿ ರಾಜು ಅವರ ಪುತ್ರ ತೇಜಸ್ ಗೌಡ (8) ಸಾವಿಗೀಡಾದ ಬಾಲಕ. ಇವರ ಪತ್ನಿ ಉಷಾರಾಣಿ ತೀವ್ರವಾಗಿ ಗಾಯಗೊಂಡಿದ್ದಾರೆ.


ಮಳವಳ್ಳಿ ಪಟ್ಟಣದ ಕನಕಪುರ ಮುಖ್ಯರಸ್ತೆಯ ಮಾಯಪ್ಪ ಸ್ಕೂಲ್ ಸಮೀಪ ಮನೆಪಾಠ ಮುಗಿಸಿಕೊಂಡು ತಾಯಿ ಜೊತೆ ಮಗು ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ.ತಾಯಿ ಮಗ ಇಬ್ಬರು ರಸ್ತೆ ಬದಿಯಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಕಾರೊಂದು ಡಿಕ್ಕಿ ಹೊಡೆದು ಪರಾರಿಯಾಗಿದೆ.


ಬಾಲಕ ತೇಜಸ್ ಗೌಡನಿಗೆ ಮಳವಳ್ಳಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ನಂತರ ಮೈಸೂರು ಖಾಸಗಿ ಆಸ್ಪತ್ರೆಗೆ ತೆರಳುವ ಮಧ್ಯದಲ್ಲಿ ಸಾವನ್ನಪ್ಪಿದ. ಉಷಾರಾಣಿ ಅವರ ಎರಡು ಕಾಲುಗಳಿಗೆ ತೀವ್ರ ಪೆಟ್ಟಾಗಿವೆ.


ಬಾಲಕನ ಸಾವಿನ ಹಿನ್ನೆಲೆಯಲ್ಲಿ ಕುಟುಂಬದವರ ಮತ್ತು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಮಳ್ಳವಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.