ಮನೆ ಅಪರಾಧ ಕುಡಿದ ಅಮಲಿನಲ್ಲಿ ಹೆತ್ತ ತಾಯಿ ಮೇಲೆ ಅತ್ಯಾಚಾರಗೈದ ಪುತ್ರ

ಕುಡಿದ ಅಮಲಿನಲ್ಲಿ ಹೆತ್ತ ತಾಯಿ ಮೇಲೆ ಅತ್ಯಾಚಾರಗೈದ ಪುತ್ರ

0

ದಾಂಡೇಲಿ(ಉತ್ತರ ಕನ್ನಡ): ಕುಡಿದ ಅಮಲಿನಲ್ಲಿ ಹೆತ್ತ ತಾಯಿ ಮೇಲೆ ಮಗನೇ ಅತ್ಯಾಚಾರವೆಸಗಿರುವ ಹೀನ ಕೃತ್ಯ ದಾಂಡೇಲಿಯಲ್ಲಿ ನಡೆದಿದ್ದು, ಆರೋಪಿ ಮಗನನ್ನು ಬಂಧಿಸಲಾಗಿದೆ.

ಕೂಲಿ ಕೆಲಸಗಾರ 24 ವರ್ಷದ ಜಾಕಿ(ಹೆಸರು ಬದಲಿಸಲಾಗಿದೆ) ಹೇಯ ಕೃತ್ಯ ಎಸಗಿದ ಮಗ.

ದಾಂಡೇಲಿ ಪಟ್ಟಣದ ಅರಣ್ಯ ಇಲಾಖೆ ಡಿಪೋ ಆವರಣದಲ್ಲಿ 52 ವರ್ಷದ ತನ್ನ ತಾಯಿ ಜೊತೆ ಈತ ವಾಸವಾಗಿದ್ದ. ಎಂದಿನಂತೆ ಶನಿವಾರ ರಾತ್ರಿಯೂ ಮದ್ಯ ಸೇವಿಸಿ ಮನೆಗೆ ಬಂದಿದ್ದ ಜಾಕಿ ತಡರಾತ್ರಿ ನಿದ್ದೆ ಮಂಪರಿನಲ್ಲಿದ್ದ ತಾಯಿಯನ್ನು ಎಬ್ಬಿಸಿ, ಏನೋ ಮಾತಾಡಬೇಕು ಎಂದು ಸೋಫಾ ಬಳಿ ಕರೆದು ಬಲಾತ್ಕಾರ ಮಾಡಿದ್ದಾನೆ. ಈ ಘಟನೆಯಿಂದ ಆಘಾತಕ್ಕೀಡಾದ ತಾಯಿ, ಕಣ್ಣೀರು ಹಾಕುತ್ತಾ ಸ್ವಲ್ಪ ಹೊತ್ತು ಮನೆಯಿಂದ ಹೊರಗೆ ಕುಳಿತಿದ್ದು, ನಂತರ ಮಗನಿಂದ ತಪ್ಪಿಸಿಕೊಂಡು ತನ್ನ ಕೋಣೆ ಸೇರಿಕೊಂಡಿದ್ದಾರೆ. ಬೆಳಗ್ಗೆ 6ರ ಸುಮಾರಿಗೆ ಆರೋಪಿ ತಾನು ಎಲ್ಲಿಯೋ ಹೋಗಬೇಕು ಎಂದು ಕೂಗಿ ಕರೆದು, ತಾಯಿಗೆ ಬೆದರಿಕೆ ಹಾಕುತ್ತ ಮತ್ತೊಮ್ಮೆ ಅತ್ಯಾಚಾರವೆಸಗಿದ್ದಾನೆ ಎಂದು ನಗರ ಪೊಲೀಸ್ ಠಾಣೆಯಲ್ಲಿ ಸೋಮವಾರ ಸಂತ್ರಸ್ತೆಯಾಗಿರುವ ತಾಯಿ ದೂರು ನೀಡಿದ್ದಾರೆ.

ಕೂಡಲೇ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.