ಮನೆ ಅಪರಾಧ ಸೋನಾಲಿ ಪೋಗಟ್ ಸಾವು:  ಪಾನೀಯದಲ್ಲಿ ರಾಸಾಯನಿಕ ಬೆರೆಸಿ ಕುಡಿಸಿದ್ದ ಆರೋಪಿಗಳು: ಐಜಿಪಿ ಮಾಹಿತಿ

ಸೋನಾಲಿ ಪೋಗಟ್ ಸಾವು:  ಪಾನೀಯದಲ್ಲಿ ರಾಸಾಯನಿಕ ಬೆರೆಸಿ ಕುಡಿಸಿದ್ದ ಆರೋಪಿಗಳು: ಐಜಿಪಿ ಮಾಹಿತಿ

0

ಪಣಜಿ(Panaji): ಟಿಕ್‌ಟಾಕ್ ತಾರೆ, ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಅವರಿಗೆ ಪಾನೀಯದಲ್ಲಿ ರಾಸಾಯನಿಕವನ್ನು ಬೆರೆಸಿ ಕುಡಿಸಿದ್ದಾಗಿ ಆರೋಪಿಗಳು ವಿಚಾರಣೆ ಬಾಯಿಬಿಟ್ಟಿದ್ದಾರೆ ಎಂದು ಗೋವಾ ಐಜಿಪಿ ಓಂವೀರ್‌ ಸಿಂಗ್‌ ಬಿಷ್ನೋಯಿ ಮಾಹಿತಿ ನೀಡಿದ್ದಾರೆ.

ಶುಕ್ರವಾರ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಆರೋಪಿ ಸುಧೀರ್ ಸಂಗ್ವಾನ್ ಮತ್ತು ಅತನ ಸಹವರ್ತಿ ಸುಖ್ವಿಂದರ್ ವಾಸಿ ಕ್ಲಬ್‌ನಲ್ಲಿ ಸೊನಾಲಿ ಫೋಗಟ್‌ ಅವರೊಂದಿಗೆ ಪಾರ್ಟಿ ಮಾಡುತ್ತಿರುವುದು ಸಿಸಿಟಿವಿ ದೃಶ್ಯಾವಳಿಗಳಿಂದ ಗೊತ್ತಾಗಿದೆ. ಇಬ್ಬರಲ್ಲಿ ಒಬ್ಬಾತ ಫೋಗಟ್‌ ಅವರಿಗೆ ಬಲವಂತವಾಗಿ ದ್ರವವೊಂದನ್ನು ಕುಡಿಸಿರುವುದು ವಿಡಿಯೊದಲ್ಲಿ ದಾಖಲಾಗಿದೆ ಎಂದು ತಿಳಿಸಿದ್ದಾರೆ.

ಆರೋಪಿಗಳಾದ ಸುಖ್ವಿಂದರ್ ಮತ್ತು ಸುಧೀರ್ ಇಬ್ಬರೂ ಸೊನಾಲಿ ಫೋಗಟ್‌ ಅವರಿಗೆ ಉದ್ದೇಶಪೂರ್ವಕವಾಗಿ ರಾಸಾಯನಿಕವೊಂದನ್ನು ಪಾನೀಯದಲ್ಲಿ ಬೆರೆಸಿ ಕುಡಿಸಿದ್ದಾಗಿ ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಬಿಜೆಪಿ ನಾಯಕಿ, ನಟಿ ಸೊನಾಲಿ ಫೋಗಟ್‌ (42) ಸೋಮವಾರ ರಾತ್ರಿ ಗೋವಾದಲ್ಲಿ ಮೃತಪಟ್ಟಿದ್ದರು. ಹೃದಯಾಘಾತದಿಂದ ಅವರು ಸಾವಿಗೀಡಾಗಿರುವುದಾಗಿ ಮೊದಲಿಗೆ ಹೇಳಲಾಗಿತ್ತು. ಅದರೆ, ಅವರ ಮರಣೋತ್ತರ ಪರೀಕ್ಷೆ ವರದಿ ಗುರುವಾರ ಬಹಿರಂಗವಾಗಿದ್ದು, ಅವರ ದೇಹದ ಮೇಲೆ ಗಾಯಗಳಾಗಿರುವುದು ತಿಳಿದುಬಂದಿತ್ತು. ಹೀಗಾಗಿ ನಟಿ ಕೊಲೆಯಾಗಿರುವುದು ಖಚಿತವಾಗಿತ್ತು.

 ಪ್ರಕರಣ ಸಂಬಂಧ ಗೋವಾ ಪೊಲೀಸರು ಸುಧೀರ್ ಸಂಗ್ವಾನ್ ಹಾಗೂ ಸುಖ್ವಿಂದರ್ ವಾಸಿ ಎಂಬುವರನ್ನು ಆರೋಪಿಗಳೆಂದು ಪರಿಗಣಿಸಿ ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಸತ್ಯ ಹೊರಬಿದ್ದಿದೆ.