ಇನ್ಸ್ಟಾಗ್ರಾಂ ತನ್ನ ಬಳಕೆದಾರರಿಗೆ ‘ಡ್ಯುಯಲ್ ಕ್ಯಾಮೆರಾ’ ಆಯ್ಕೆಯನ್ನು ಪರಿಚಯಿಸಿದ ನಂತರ, ಶೀಘ್ರದಲ್ಲೇ ‘ಕ್ಯಾಂಡಿಡ್ ಚಾಲೆಂಜಸ್’ ಎಂಬ ಹೆಸರಿನ ಮತ್ತೊಂದು ವೈಶಿಷ್ಟ್ಯವನ್ನು ಹೊರತರಲು ಸಿದ್ಧತೆ ಮಾಡಿಕೊಳ್ಳುತ್ತಿದೆ.
ಮೆಟಾ ಮಾಲಿಕತ್ವದ ಫೇಸ್ಬುಕ್ಗೆ ಹೋಲಿಕೆ ಮಾಡಿದರೆ ಇನ್ಸ್ಟಾಗ್ರಾಂ ಬಳಕೆದಾರರ ಸಂಖ್ಯೆ ಹೆಚ್ಚೇ ಇದೆ. ಅದರಲ್ಲೂ ಗ್ರಾಹಕರನ್ನು ಹೆಚ್ಚಿಸುವ ಸಲುವಾಗಿ ಇನ್ಸ್ಟಾಗ್ರಾಂ ಹೊಸ ಫೀಚರ್ಸ್ ಅನ್ನು ಪರಿಚಯಿಸುತ್ತಲೇ ಇರುತ್ತದೆ. ಅದರಂತೆ ಇದೀಗ ‘ಕ್ಯಾಂಡಿಡ್ ಚಾಲೆಂಜಸ್’ ಎಂಬ ಹೊಸ ಫೀಚರ್ ಪರಿಚಯಿಸಿಲು ಮುಂದಾಗಿದೆ.
ಇನ್ಸ್ಟಾಗ್ರಾಂ ತನ್ನ ಬಳಕೆದಾರರಿಗೆ ‘ಡ್ಯುಯಲ್ ಕ್ಯಾಮೆರಾ’ ಆಯ್ಕೆಯನ್ನು ಪರಿಚಯಿಸಿದ ನಂತರ, ಶೀಘ್ರದಲ್ಲೇ ‘ಕ್ಯಾಂಡಿಡ್ ಚಾಲೆಂಜಸ್’ ಎಂಬ ಹೆಸರಿನ ಮತ್ತೊಂದು ವೈಶಿಷ್ಟ್ಯವನ್ನು ಹೊರತರಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಹೆಸರೇ ಸೂಚಿಸುವಂತೆ, ಬಳಕೆದಾರರು ತಮ್ಮ ಕ್ಯಾಂಡಿಡ್ ಚಿತ್ರಗಳನ್ನು ಫೋಟೋ ಹಂಚಿಕೆ ವೇದಿಕೆಯಲ್ಲಿ ಹಂಚಿಕೊಳ್ಳಬೇಕಾಗುತ್ತದೆ.
ಇನ್ಸ್ಟಾಗ್ರಾಂ ಬಳಕೆದಾರರು ಈ ಆ್ಯಪ್ ಬಳಸಿಕೊಂಡು ಸೆಲ್ಫಿ ತೆಗೆದುಕೊಳ್ಳಲು ಮತ್ತು ಪೋಸ್ಟ್ ಮಾಡಲು ಪ್ರತಿ ದಿನವೂ ವಿಭಿನ್ನ ಸಮಯದಲ್ಲಿ ಪ್ರಾಂಪ್ಟ್ ಅನ್ನು ಪಡೆಯುತ್ತಾರೆ, ನಂತರ ಅದನ್ನು ಅವರ Instagram ಕಥೆಗಳಲ್ಲಿ ಹಂಚಿಕೊಳ್ಳಲಾಗುತ್ತದೆ. ಈ ಹೊಸ ವೈಶಿಷ್ಟ್ಯದ ಬಗ್ಗೆ ಉತ್ಸಾಹವನ್ನು ಹೆಚ್ಚಿಸಲು, ಇನ್ಸ್ಟಾಗ್ರಾಂ ಬಳಕೆದಾರರಿಗೆ ತಮ್ಮ ಕ್ಯಾಂಡಿಡ್ ಇಮೇಜ್ಗಳನ್ನು ಅಪ್ಲೋಡ್ ಮಾಡಲು ಕೇವಲ 2 ನಿಮಿಷಗಳನ್ನು ನೀಡುತ್ತದೆ.
ಮಾಹಿತಿಯಂತೆಯೇ, ಈ ನೂತನ ವೈಶಿಷ್ಟ್ಯವು ಜನಪ್ರಿಯ ಅಪ್ಲಿಕೇಶನ್ ‘BeReal’ ನ ನಕಲು ಎಂದು ತೋರುತ್ತದೆ ಎಂದು ಟೆಕ್ ವರದಿಗಾರರು ಹೇಳುತ್ತಾರೆ. ದಿನದ ಯಾವುದೇ ಸಮಯದಲ್ಲಿ ಅಪ್ಲಿಕೇಶನ್ನಿಂದ ಪ್ರಾಂಪ್ಟ್ ಪಡೆದ ನಂತರ 2 ನಿಮಿಷಗಳ ಸಮಯದ ಮಿತಿಯೊಳಗೆ ತಮ್ಮ ಸೆಲ್ಫಿಗಳನ್ನು ಅಪ್ಲೋಡ್ ಮಾಡಲು ಬಳಕೆದಾರರನ್ನು ಕೇಳುವುದರಲ್ಲಿ ಈ ಅಪ್ಲಿಕೇಶನ್ನ ಮೂಲತತ್ವವಿದೆ.
ಟೆಕ್ ಸಂಶೋಧಕರಾದ ಅಲೆಸ್ಸಾಂಡ್ರೊ ಪಲುಝಿ ಅವರು ಇನ್ಸ್ಟಾಗ್ರಾಂ ಅಪ್ಲಿಕೇಶನ್ನ ಈ ಹೊಸ ಬೀಟಾ ವೈಶಿಷ್ಟ್ಯದ ಬಗ್ಗೆ ಚಿತ್ರಣವನ್ನು ನೀಡಿದ್ದಾರೆ ಮತ್ತು ವೈಶಿಷ್ಟ್ಯವು ಕೇವಲ ಒಂದು ಮೂಲಮಾದರಿಯಾಗಿರಬಹುದು ಎಂದು ಹೇಳಿದ್ದಾರೆ.
ಅಂದಹಾಗೆಯೇ ಇನ್ಸ್ಟಾಗ್ರಾಂ ಕ್ಯಾಂಡಿಡ್ ಚ್ಯಾಲೆಂಜಸ್, BeReal ಅಪ್ಲಿಕೇಶನ್ನಿಂದ ಪ್ರೇರಿತವಾಗಿದೆ. ಇದನ್ನು ಬಳಕೆದಾರರಿಗೆ ಹೊಸ ಅನುಭವ ನೀಡಲಿದೆ.
ಕ್ಯಾಂಡಿಟ್ ಚ್ಯಾಲೆಂಜಸ್ ಪ್ರತಿದಿನ ಬೇರೆ ಬೇರೆ ಸಮಯದಲ್ಲಿ, 2 ನಿಮಿಷಗಳಲ್ಲಿ ಫೋಟೋವನ್ನು ಸೆರೆಹಿಡಿಯಲು ಮತ್ತು ಹಂಚಿಕೊಳ್ಳಲು ಅಧಿಸೂಚನೆಯನ್ನು ಸಿಗಲಿದೆ” ಎಂದು ಪಲುಝಿ ಟ್ವೀಟ್ ಮಾಡಿದ್ದಾರೆ.