ಮನೆ ದೇವಸ್ಥಾನ ದಕ್ಷಿಣ ಕಾಶಿ ರಾಮನಾಥಪುರ

ದಕ್ಷಿಣ ಕಾಶಿ ರಾಮನಾಥಪುರ

0

ಹಾಸನ ಜಿಲ್ಲೆಯ ಅರಕಲಗೂಡಿನ 21 km ದೂರದಲ್ಲಿರುವ ಪ್ರಸಿದ್ಧ ಯಾತ್ರಸ್ಥಳ. ಕಾವೇರಿ ನದಿ ದಡದ ಮೇಲಿನ ಪ್ರಶಾಂತ ಸ್ಥಳ. ಇಲ್ಲಿ ಸುಬ್ರಮಣ್ಯೇಶ್ವರ ಪಟ್ಟಭಿರಾಮ, ಅಗಸ್ತ್ಯೇಶ್ವರ, ಪ್ರಸನ್ನ ರಾಮೇಶ್ವರ, ಆಂಜನೇಯ, ಲಕ್ಷ್ಮಿ ನರಸಿಂಹ, ದುರ್ಗಾ ರಾಮೇಶ್ವರ, ಎಂಬ ಏಳು ದೇವಸ್ಥಾನಗಳಿವೆ. ಪ್ರತಿವರ್ಷ ಸುಬ್ರಹ್ಮಣ್ಯ ಸ್ವಾಮಿ, ಪಟ್ಟಾಭಿರಾಮ, ಪ್ರಸನ್ನ ರಾಮೇಶ್ವರ, ಅಗಸ್ತ್ಯೇಶ್ವರ, ಇವುಗಳ ಜಾತ್ರೆಗಳು ರಥೋತ್ಸವಗಳು ದನಗಳ ಪರಿಷೆಗಳು ನಡೆಯುತ್ತವೆ. ಕಾವೇರಿ ನದಿ ಮಧ್ಯದ ಗೋ ಗರ್ಭದಲ್ಲಿ ಪ್ರವೇಶಿಸಿ ಹೊರಬರುವ ಪುಣ್ಯಪ್ರದವೆಂದು ಭಕ್ತರು ತಿಳಿದರು.

ಮಾಲೇಕಲ್ಲು ತಿರುಪತಿ

ಅರಸೀಕೆರೆ ಎಂಬಲ್ಲಿ ಮೂರು ಕಿ.ಮೀ. ದೂರದ ಯಾತ್ರಾ ಸ್ಥಳ. ಇಲ್ಲಿನ ಹೀರೆಕಲ್ಲು ಬೆಟ್ಟದ ಮೇಲಿರುವ ವೆಂಕಟರಮಣ ಸ್ವಾಮಿ, ಬೆಟ್ಟದ ಬುಡದಲ್ಲಿರುವ ಗೋವಿಂದರಾಜ ಸ್ವಾಮಿ ದೇವಾಲಯ ಪ್ರಸಿದ್ಧ. ವೆಂಕಟರಮಣ ಸ್ವಾಮಿ ದೇವಾಲಯಕ್ಕೆ ಹೋಗಲು 1700 ಮೆಟ್ಟಿಲುಗಳಿವೆ .ಎರಡು ದೇವಸ್ಥಾನಗಳಿಗೂ ವರ್ಷವೆಲ್ಲ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ ಪ್ರತಿ ವರ್ಷ ದೊಡ್ಡ ಜಾತ್ರೆಯಾಗುತ್ತದೆ.

ದೊಡ್ಡದೇವನೂರು

ಅರಸೀಕೆರೆ ಸಮೀಪದ ಬಾಣಾವರದಿಂದ ಆರೇಳು ಕಿ.ಮೀ ದೂರದ ದೊಡ್ಡ ದೇವನೂರು ಒಂದು ಪುಣ್ಯ ಸ್ಥಳ. ಇಲ್ಲಿ ಲಕ್ಷ್ಮಿಕಾಂತ ಸ್ವಾಮಿ ದೇವಸ್ಥಾನ (ಲಕ್ಷ್ಮಿರಮಣಸ್ವಾಮಿ) ಭಕ್ತರಿಗೆ ನೆಮ್ಮದಿ ನೀಡುತ್ತದೆ. ಈ ದೇವಾಲಯದಲ್ಲಿ ಕುಳಿತೇ ಲಕ್ಷ್ಮೀಶ ಕವಿ “ಜೈಮಿನಿ ಭಾರತ” ಎಂಬ ಕನ್ನಡ ಕಾವ್ಯವನ್ನು ರಚಿಸಿದ್ದನ್ನುತ್ತಾರೆ. ಕವಿ ಕಟ್ಟಿದ ಕಾವ್ಯ ಮಂಟಪ ಇಲ್ಲಿ ಪ್ರೇಕ್ಷಣೀಯ. ಮಂಟಪದಲ್ಲಿ ಸುಂದರವಾದ ಲಕ್ಷ್ಮೀಶನ ಮೂರ್ತಿ ಇದೆ. ಗೋಡೆಗಳ ಮೇಲೆ ಜೈಮಿನಿ ಭಾರತದ ಕೆಲವು ಪದ್ಯಗಳನ್ನು ಕೆಡೆಸಿ ಹಾಕಲಾಗಿದೆ ಕಡೆಸಿ ಹಾಕಲಾಗಿದೆ. ಪ್ರತಿ ವರ್ಷ ಇಲ್ಲಿ ವೈಶಾಖ ಮಾಸದಲ್ಲಿ ರಥೋತ್ಸವಗಳು ನಡೆಯುತ್ತದೆ.

ಹಿಂದಿನ ಲೇಖನಬಸ್-ದ್ವಿಚಕ್ರ ವಾಹನದ ನಡುವೆ ಅಪಘಾತ: ಇಬ್ಬರಿಗೆ ಗಾಯ
ಮುಂದಿನ ಲೇಖನತುಮಕೂರು: ಲೋಡ್ ಗಟ್ಟಲೆ ಔಷಧಿ ಮತ್ತು ಮಾತ್ರೆಗಳು ಪತ್ತೆ- ದೂರು ದಾಖಲು