ಮನೆ ಸ್ಥಳೀಯ ದಕ್ಷಿಣ ಶಿಕ್ಷಕರ ಕ್ಷೇತ್ರ: ಜೆಡಿಎಸ್‌ ನ ಕೆ.ವಿವೇಕಾನಂದ 1,278 ಮತಗಳಿಂದ ಮುನ್ನಡೆ

ದಕ್ಷಿಣ ಶಿಕ್ಷಕರ ಕ್ಷೇತ್ರ: ಜೆಡಿಎಸ್‌ ನ ಕೆ.ವಿವೇಕಾನಂದ 1,278 ಮತಗಳಿಂದ ಮುನ್ನಡೆ

0

ಮೈಸೂರು: ವಿಧಾನಪರಿಷತ್ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆ ಮತ ಎಣಿಕೆ ಪ್ರಗತಿಯಲ್ಲಿದ್ದು, ಮೊದಲ ಸುತ್ತಿನ ಮುಕ್ತಾಯದ ವೇಳೆಗೆ ಜೆಡಿಎಸ್‌ನ ಕೆ.ವಿವೇಕಾನಂದ 1,278 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.

Join Our Whatsapp Group

ಅವರು 3757 ಮತಗಳನ್ನು ಗಳಿಸಿದ್ದರೆ, ಕಾಂಗ್ರೆಸ್‌ನ ಮರಿತಿಬ್ಬೇಗೌಡ ‌2,479 ಮತಗಳನ್ನು ಪಡೆದಿದ್ದಾರೆ.

ಮೊದಲ ಸುತ್ತಿನಲ್ಲಿ 7000 ಮತಗಳ ಎಣಿಕೆ ನಡೆದಿದೆ. ಮಾಜಿ ಶಾಸಕ 36, ವಿಧಾನಪರಿಷತ್ ಮಾಜಿ ಸದಸ್ಯ ಕೆ.ಸಿ. ಪುಟ್ಟಸಿದ್ದಶೆಟ್ಟಿ 11 ಮತಗಳನ್ನಷ್ಟೆ ಪಡೆದಿದ್ದಾರೆ. ನಿವೃತ್ತ ಡಿಡಿಪಿಯು ನಾಗಮಲ್ಲೇಶ್ 165 ಹಾಗೂ ಹ.ರ.ಮಹೇಶ್ 114 ಮತಗಳನ್ನು ಗಳಿಸಿ ಗಮನಸೆಳೆದಿದ್ದಾರೆ.

ಈ ಸುತ್ತಿನಲ್ಲಿ 401 ಮತಗಳು ಕುಲಗೆಟ್ಟ ಮತಗಳಾಗಿವೆ ಎಂದು ಚುನಾವಣಾಧಿಕಾರಿ ಜಿ.ಸಿ. ಪ್ರಕಾಶ್ ತಿಳಿಸಿದ್ದಾರೆ.

ಹಿಂದಿನ ಲೇಖನಅತ್ಯಾಚಾರ ಪ್ರಕರಣ: ದೇವರಾಜೇಗೌಡ ಜಾಮೀನು ಅರ್ಜಿ ವಜಾ
ಮುಂದಿನ ಲೇಖನಸಾರ್ವಜನಿಕ ಸೇವಕರ ರಕ್ತ, ಬೆವರಿಗೆ ಬೆಲೆ ನೀಡಬೇಕು; ಪರವಾನಗಿ ಪಡೆದ ಸರ್ವೇಯರ್‌ಗಳ ಹೆಚ್ಚುವರಿ ವೇತನ ಪಾವತಿಸಲು ಆದೇಶ