ಮೈಸೂರು (Mysuru): ದಕ್ಷಿಣ ಪದವೀಧರ ಕ್ಷೇತ್ರ ಮತ ಎಣಿಕೆ ಕಾರ್ಯ ಇಂದು ಬೆಳಿಗ್ಗೆ 8 ಗಂಟೆಯಿಂದ ಆರಂಭವಾಗಿದ್ದು, ಇಲ್ಲಿಯವರೆಗೆ 49,700 ಮತ ಎಣಿಕೆ ಮುಕ್ತಾಯವಾಗಿದೆ.
ಈ ಬಗ್ಗೆ ಚುನಾವಣಾಧಿಕಾರಿ ಜಿ.ಸಿ. ಪ್ರಕಾಶ್ ಅಧಿಕೃತವಾಗಿ ಹೇಳಿಕೆ ನೀಡಿದ್ದಾರೆ. ಇನ್ನೂ 49 ಸಾವಿರ ಎಣಿಕೆ ಬಾಕಿ ಉಳಿದಿದೆ.
ಈವರೆಗೆ ಎಣಿಕೆಯಾಗಿರುವ ಮತಗಳಲ್ಲಿ ಕಾಂಗ್ರೆಸ್ 16,137, ಬಿಜೆಪಿ 13,179, ಜೆಡಿಎಸ್ : 8,512, ಪ್ರಸನ್ನ ಗೌಡ : 3,142, ವಿನಯ್ : 1,890, ಬಿಎಸ್ಪಿ : 1,418 ಮತಗಳನ್ನು ಪಡೆದುಕೊಂಡಿದ್ದು, 3,718 ಮತಗಳು ತಿರಸ್ಕೃತಗೊಂಡಿವೆ. ಕಾಂಗ್ರೆಸ್ ಅಭ್ಯರ್ಥಿ 2,958 ಮತಗಳ ಮುನ್ನೆಡೆ ಪಡೆದುಕೊಂಡಿದ್ದಾರೆ.
ಪಡುವಾರಹಳ್ಳಿಯಲ್ಲಿರುವ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಎಣಿಕೆ ಕಾರ್ಯ ನಡೆಯುತ್ತಿದ್ದು, ಕಣಕ್ಕಿಳಿದಿರುವ 19 ಅಭ್ಯರ್ಥಿಗಳ ರಾಜಕೀಯ ಭವಿಷ್ಯದ ಫಲಿತಾಂಶ ಮಧ್ಯರಾತ್ರಿಯ ಹೊತ್ತಿಗೆ ಘೋಷಣೆಯಾಗುವ ಸಾಧ್ಯತೆ ಇದೆ.
ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಈಚಿನ ವರ್ಷಗಳಿಗೆ ಹೋಲಿಸಿದರೆ ಶೇ.30 ರಷ್ಟು ಹೆಚ್ಚಿನ ಮತದಾನವಾಗಿತ್ತು.