ನೈಋತ್ಯ ಮುಂಗಾರು ಮೇ 31ರಂದು ಕೇರಳ ಪ್ರವೇಶಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಪಂಜಾಬ್, ಹರ್ಯಾಣ, ದೆಹಲಿ, ರಾಜಸ್ಥಾನ, ಉತ್ತರ ಪ್ರದೇಶ, ಗುಜರಾತ್ ಮತ್ತು ವಾಯುವ್ಯ ಮಧ್ಯಪ್ರದೇಶದ ಕೆಲವು ಭಾಗಗಳು ತೀವ್ರವಾದ ಶಾಖದ ಅಲೆಯಿಂದ ತತ್ತರಿಸುತ್ತಿವೆ. ಹವಾಮಾನ ಇಲಾಖೆಯು ಈ ರಾಜ್ಯಗಳಿಗೆ ರೆಡ್ ಅಲರ್ಟ್ ಅನ್ನು ಸಹ ಹೊರಡಿಸಿದೆ ಮತ್ತು ವಯಸ್ಸಾದವರು, ಶಿಶುಗಳು ಮತ್ತು ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವವರಿಗೆ, ದುರ್ಬಲ ಜನರು ತೀವ್ರ ಕಾಳಜಿವಹಿಸಬೇಕು ಎಂದು ಒತ್ತಿ ಹೇಳಿದೆ.
ಹಿಮಾಚಲ ಪ್ರದೇಶದ ಕೆಳಗಿನ ಬೆಟ್ಟಗಳಲ್ಲಿ ವಿಪರೀತ ಶಾಖವು ಮುಂದುವರಿಯುತ್ತದೆ ಎಂದು ಹವಾಮಾನ ಕಚೇರಿ ತಿಳಿಸಿದೆ. ಕರ್ನಾಟಕದಲ್ಲಿ ಈಗಾಗಲೇ ಮುಂಗಾರು ಪೂರ್ವ ಮಳೆ ಶುರುವಾಗಿದೆ. ಭಾರತೀಯ ಆರ್ಥಿಕತೆಯು ಕೃಷಿ ಆಧಾರಿತವಾಗಿದೆ, ಮುಂಗಾರು ಅದಕ್ಕೆ ಜೀವನಾಡಿಯಂತೆ ಕಾರ್ಯನಿರ್ವಹಿಸುತ್ತದೆ.
ಮೇ 31ರ ವೇಳೆಗೆ ಮುಂಗಾರು ಕೇರಳ ತಲುಪುವ ನಿರೀಕ್ಷೆಯಿದೆ. ಕಳೆದ 150 ವರ್ಷಗಳಲ್ಲಿ ಕೇರಳದಲ್ಲಿ ಮಾನ್ಸೂನ್ ಆಗಮನದ ದಿನಾಂಕಗಳಲ್ಲಿ ಸಾಕಷ್ಟು ವ್ಯತ್ಯಾಸಗಳನ್ನು ಕಂಡಿವೆ. 1918 ರಲ್ಲಿ, ಮಾನ್ಸೂನ್‌ನ ಆರಂಭಿಕ ಆಗಮನವು ಮೇ 11 ರಂದು ಆಗಿತ್ತು, ಆದರೆ 1972 ರಲ್ಲಿ ಮಾನ್ಸೂನ್ ಜೂನ್ 18 ರಂದು ಕೇರಳಕ್ಕೆ ಆಗಮಿಸಿದಾಗ ಆರಂಭಿಕ ಆಗಮನವಾಗಿದೆ.
ಕಳೆದ ವರ್ಷ ಜೂನ್ 8ರಂದು ಕೇರಳಕ್ಕೆ ಮುಂಗಾರು ಆಗಮಿಸಿತ್ತು. 2022 ರಲ್ಲಿ, ಮುಂಗಾರು ಕೇರಳವನ್ನು ಮೇ 29 ರಂದು ಮತ್ತು 2021 ರಲ್ಲಿ ಜೂನ್ 3 ರಂದು, 2020 ರಲ್ಲಿ ಜೂನ್ 1 ರಂದು ತಲುಪಿತು. ಈ ವರ್ಷ ಭಾರತದಲ್ಲಿ ಮುಂಗಾರು ಮಳೆ ಸಾಮಾನ್ಯಕ್ಕಿಂತ ಹೆಚ್ಚಾಗಿರುತ್ತದೆ ಎಂದು ಹವಾಮಾನ ಇಲಾಖೆ ಹೇಳಿತ್ತು. ಇದಕ್ಕೆ ಕಾರಣ ಲಾ ನಿನಾ ಮತ್ತು ಪೆಸಿಫಿಕ್ ಮಹಾಸಾಗರದ ತಂಪಾಗಿರುವ ಕಾರಣ ಈ ವರ್ಷ ಉತ್ತಮ ಮಳೆಯಾಗುವ ಸಾಧ್ಯತೆಯಿದೆ.