ಮೈಸೂರು: ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ (RLHP) ಹಾಗೂ ತಾಲೂಕು ಪಂಚಾಯಿತಿ ಮೈಸೂರು ಇವರ ಸಹಯೋಗದಲ್ಲಿ ಮಕ್ಕಳ ಹಕ್ಕುಗಳ ಗ್ರಾಮ ಸಭೆಯ ಸಮರ್ಪಕ ಅನುಷ್ಠಾನ ಕುರಿತು ತರಭೇತಿ ಉದ್ಘಾಟನೆ ಮಾಡಿದರು.
ನಂತರ ಮಾತನಾಡಿದ ಅವರು, ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993 ಅಧ್ಯಾಯ 2ರ 3ಹೆಚ್ಚ್ (2)(i) ಇದರಂತೆ ನವಂಬರ್ ತಿಂಗಳಲ್ಲಿ ಎಲ್ಲ ಗ್ರಾಮ ಪಂಚಾಯಿತಿಗಳು ಮಕ್ಕಳ ವಿಶೇಷ ಗ್ರಾಮ ಸಭೆ ಮಾಡಬೇಕಾಗಿದ್ದು, ಇದರ ಕುರಿತು ಇಲಾಖೆಯು ಸುತ್ತೋಲೆಯನ್ನು ಹೊರಡಿಸಿದ್ದು ಮೂರು ತಿಂಗಳಗಳ ಕಾಲ ಮಕ್ಕಳ ಸ್ನೇಹಿ ಗ್ರಾಮ ಪಂಚಾಯಿತಿ ಅಭಿಯಾನ ವನ್ನೂ ಸಮರ್ಪಕ ಅನುಷ್ಠಾನ ಮಾಡಬೇಕಾಗಿರುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಗ್ರಾಮ ಪಂಚಾಯಿತಿಗಳಲ್ಲಿ ಮಹಿಳೆಯರ ಮತ್ತು ಮಕ್ಕಳ ಕಾವಲು ಸಮಿತಿ ಇದ್ದು ಇದನ್ನು ಸರಿಯಾಗಿ ನಡೆಸಿಕೊಂಡು ಹೋದಲಿ ಸ್ಥಳೀಯ ಮಕ್ಕಳ ಸಮಸ್ಯೆಗಳನ್ನು ಆಗಿಂದಾಗೆ ಬಗೆಹರಿಸಬಹುದು, ಸದರಿ ತರಬೇತಿಯ ಉಪಯೋಗವನ್ನು ಪಡೆದುಕೊಳ್ಳಿರಿ ಎಂದು ತಿಳಿಸಿದರು.
ಸಂಸ್ಥೆಯ ಸಂಯೋಜಕರಾದ ಶಶಿಕುಮಾರ್ ಎಸ್ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಸ್ಥೆಯು ಮಕ್ಕಳ ಅಭಿವೃದ್ಧಿಗಾಗಿ ಕಳೆದ 40 ವರ್ಷಗಳಿಂದ ಕರ್ನಾಟಕದ ಎಂಟು ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು ಪ್ರಸ್ತುತ ಗ್ರಾಮೀಣ ಭಾಗದಲ್ಲಿ 11 ಗ್ರಾಮ ಪಂಚಾಯಿತಿಯ 25 ಗ್ರಾಮಗಳಲ್ಲಿ ಆರೋಗ್ಯ ಮತ್ತು ನೈರ್ಮಲ್ಯದ ಮೂಲಕ ಅಭಿವೃದ್ಧಿಯನ್ನು ಕಾಣುವಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಸ್ಥಳೀಯ ಮಠದ ಸಮಿತಿಗಳಾದ ಗ್ರಾಮ ಆರೋಗ್ಯ ನೈರ್ಮಲ್ಯ ಮತ್ತು ಪೌಷ್ಟಿಕ ಸಮಿತಿ, ಮಹಿಳಾ ಮತ್ತು ಮಕ್ಕಳ ರಕ್ಷಣಾ ಗೌಸಲು ಸಮಿತಿ, ಶಿಕ್ಷಣ ಹಕ್ಕು ಕಾರ್ಯಪಡೆ, ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣೆ ಸಮಿತಿ ಇದೆ ಇವುಗಳ ಸಾಮರ್ಥ್ಯ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಕೊಪ್ಪಳ ಯುನಿಸೆಫ್ ಜಿಲ್ಲಾಧಿಕಾರಿಗಳ ಕಚೇರಿ, ಮಕ್ಕಳ ಸಂರಕ್ಷಣ ಯೋಜನೆ, ಪ್ರಾದೇಶಿಕ ಸಂಯೋಜಕರು ಡಾ.ಕೆ ರಾಘವೇಂದ್ರ ಭಟ್, ಮಹಿಳಾ ಮತ್ತು ಮಕ್ಕಳ ರಕ್ಷಣಾ ಕಾವಲು ಸಮಿತಿ, ಶಾಲೆಗಳಲ್ಲಿ ಮಕ್ಕಳ ಸಂರಕ್ಷಣಾ ನೀತಿ, ಬಾಲ್ಯ ವಿವಾಹ ಹಾಗೂ ಮಕ್ಕಳ ಹಕ್ಕುಗಳ ಗ್ರಾಮ ಸಭೆಯ ಸಮರ್ಪಕ ಅನುಷ್ಠಾನ ನ ದ ಬಗ್ಗೆ ವಿವರಿಸುತ್ತಾ ಮಕ್ಕಳ ಹಕ್ಕುಗಳ ವಿಶೇಷ ಗ್ರಾಮ ಸಭೆಯು ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗಬಾರದು. ನವೆಂಬರ್ 14 ರಿಂದ ಜನವರಿ 26 ರವರೆಗೆ ಮೂರು ತಿಂಗಳಗಳ ಕಾಲ ವಿವಿಧ ಚಟುವಟಿಕೆಗಳ ಮೂಲಕ ಮಕ್ಕಳ ಅಭಿಯಾನವನ್ನು ಇಲಾಖೆಯ ಸುತ್ತೋಲೆಯಂತೆ ಮಾಡಬೇಕಾಗಿದೆ ಪ್ರಮುಖವಾಗಿ ಜನನ ಮತ್ತು ಮರಣ ನೊಂದಣಿ, ಅಪೌಷ್ಟಿಕ ಮಕ್ಕಳ ಬಗ್ಗೆ, ಶಾಲೆ ಬಿಟ್ಟ ಮಕ್ಕಳನ್ನು ಪುನಹ ಶಾಲೆಗೆ ಕರೆ ತರುವ ಬಗ್ಗೆ, ಸಲಹಾ ಪೆಟ್ಟಿಗೆಯನ್ನು ಇಡುವುದು, ಬಾಲ್ಯ ವಿವಾಹ ಹಾಗೂ ಪೋಕ್ಸೋ ಕಾಯ್ದೆ ಕುರಿತು ವ್ಯಾಪಕವಾದ ಜಾಗೃತಿಯನ್ನು ಮೂಡಿಸುವುದು ಹೀಗೆ 28 ಅಂಶಗಳ ಕುರಿತು ವಿವರವಾಗಿ ತಿಳಿಸಿದರು.
ತರಬೇತಿಯಲ್ಲಿ ತಾಲೂಕು ಕಾರ್ಯಕ್ರಮ ಅಧಿಕಾರಿ ಸುರೇಶ್, ಸಹಾಯಕ ನಿರ್ದೇಶಕರಾದ ಗಂಗಾಧರ್, ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಕ್ಷೇತ್ರ ಸಂಪನ್ಮೂಲ ಸಮನ್ವಯ ಅಧಿಕಾರಿಗಳು,ಶಿಕ್ಷಣ ಸಂಯೋಜಕರು ಹಾಗೂ ಆರ್ ಎಲ್. ಎಚ್.ಪಿ ಸಿಬ್ಬಂದಿಗಳು ಉಪಸ್ಥಿತರಿದ್ದರು.