ನವದೆಹಲಿ(New Delhi): ಭಾರತದ ಕೊರೊನಾ(Corona) ಸಾಂಕ್ರಾಮಿಕ ರೋಗ ನಿಯಂತ್ರಿಸುವ ಸಲುವಾಗಿ ಲಸಿಕೆ(vaccine) ವಿತರಣೆಗೆ(Delivery) ವೇಗ ನೀಡುವಂತೆ ಪ್ರಧಾನಮಂತ್ರಿ(Prime Minister) ನರೇಂದ್ರ ಮೋದಿ(Narendra Modi) ಕರೆ ನೀಡಿದ್ದಾರೆ.
ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳ ಜೊತೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ ನಂತರ ಪ್ರಧಾನಮಂತ್ರಿ ನರೇಂದ್ರ ಮೋದಿ ಮಾತನಾಡಿ, ಸಣ್ಣ ಮಕ್ಕಳು ಸೇರಿದಂತೆ ಎಲ್ಲರಿಗೂ ಲಸಿಕೆ ನೀಡುವತ್ತ ಗಮನ ಹರಿಸುವಂತೆ ಸೂಚನೆ ನೀಡಿದರು.
ಜನರು ಕೊರೊನಾ ನಮ್ಮಿಂದ ದೂರ ಹೋಗಿದೆ ಎಂಬ ಮನೋಭಾವ ಬಿಡಬೇಕು. ಭಾರತದಲ್ಲಿ ಕಾಣಿಸಿಕೊಂಡಿರುವ ಓಮಿಕ್ರಾನ್ ಉಪ ಪ್ರಬೇಧವು ಹೊಸ ಸವಾಲನ್ನು ತಂದೊಡ್ಡಿದೆ. ಈ ಹಿಂದೆ ಮೂರು ಅಲೆಗಳನ್ನು ಯಶಸ್ವಿಯಾಗಿ ಎದುರಿಸಿದ್ದು, ಈಗ ನಾಲ್ಕನೇ ಅಲೆಯನ್ನೂ ಸಮರ್ಥವಾಗಿ ಎದುರಿಸಬೇಕಿದೆ ಎಂದು ತಿಳಿಸಿದ್ದಾರೆ,.