ಮನೆ ಮನೆ ಮದ್ದು ವೀರ್ಯ ವೃದ್ಧಿ

ವೀರ್ಯ ವೃದ್ಧಿ

0

1. ಎಳನೀರನ್ನು ಕುಡಿಯುವುದು, ಎಳನೀರಿಗೆ ಜೇನುತುಪ್ಪ ಸೇರಿಸಿ ಕುಡಿಯುವುದು ಮಾವಿನಹಣ್ಣಿನ ಸೀಕರಣೆ ಸೇವಿಸುವುದು, ಮಾವಿನ ಹಣ್ಣನ್ನೇ ತಿನ್ನುವುದು, ಬಾಳೆಹಣ್ಣನ್ನು ಸೇವಿಸುವುದು ಮಾಡುತ್ತಿದ್ದರೆ ವೀರ್ಯ ವೃದ್ಧಿಯಾಗುತ್ತದೆ.

Join Our Whatsapp Group

2. ಜೇನುತುಪ್ಪ ಹಾಲು, ಕೊಬ್ಬರಿ, ಖರ್ಜೂರ,ಬಾದಾಮಿ, ಒಣ ದ್ರಾಕ್ಷಿಗಳನ್ನು ಸೇರಿಸಿ ಬಾದಾಮಿ ಹಾಲು ಮಾಡಿ ಸೇವಿಸುತ್ತಿದ್ದರೆ ವೀರ್ಯ ವೃದ್ಧಿಗುವುದು

3. ಖರ್ಜೂರದೊಂದಿಗೆ ಹುರಿಗಲೆಯನ್ನು ಕುಟ್ಟಿ,ಆದಕ್ಕೆ ಸ್ವಲ್ಪ ಬೆಲ್ಲ ಸೇರಿಸಿ ಉಂಡೆಗಳನ್ನು ಮಾಡಿಟ್ಟುಕೊಂಡು ಪ್ರತಿದಿನ ಒಂದು ಉಂಡೆ ತಿಂದು, ಹಾಲು ಕುಡಿಯಲು ವೀರ್ಯ ವೃದ್ಧಿಯಾಗುವುದು. 4.  ವೀರ್ಯವೃದ್ಧಿಗೆ ಉದ್ದಿನಬೇಳೆಯನ್ನು ಕೆಂಪಗೆ ಹುರಿದು ಹಿಟ್ಟು ಮಾಡಿಕೊಂಡು ಅದನ್ನು ಹಾಲಿನಲ್ಲಿ ಕದಡಿ ತಳಿಸೀಯದಂತೆ ಕೆದಕುತ್ತಾ ಕೈ ಆಡಿಸುತ್ತಲೇ ಏಲಕ್ಕಿ ಪುಡಿ,ಸಕ್ಕರೆ, ಗೋಡಂಬಿ, ದ್ರಾಕ್ಷಿ  ಬಾದಾಮಿ ಹಾಕಿ ಸೇವಿಸಿದರೆ ವೀರ್ಯ ವೃದ್ಧಿಯಾಗುವುದು.

5. ತೊಳೆದು ಉದ್ದಿನ ಬೇಳೆ ತುಪ್ಪದಲ್ಲಿ ಹುರಿದು ಪಾಯಸ ಮಾಡಿ ಸೇವಿಸಲು ವೀರ್ಯ ವೃದ್ಧಿಯಾಗುವುದು.

6. ಅತಿಮಧುರದ ಚೂರ್ಣವನ್ನು ಮಾಡಿ ಜೇನುತುಪ್ಪ ತುಪ್ಪದ ಜೊತೆಯಲ್ಲಿ ಸೇವಿಸಲು ವೀರ್ಯ ವೃದ್ಧಿಯಾಗುವುದು.

7. ಹಾಲಿನಲ್ಲಿ ಭದ್ರಮುಸ್ತೆಯ ಪುಡಿ ಹಾಕಿ ಸೇರಿಸಲು ಸ್ತ್ರೀಯರ ಅಹಂಕಾರವನ್ನು  ಮುರಿಯಬಹುದು.

8. ಶತಾವರಿಗೆಡ್ಡೆಗಳನ್ನು ಶೇಖರಿಸಿ ಹಾಲಿನಲ್ಲಿ ಅರೆದು ಸಕ್ಕರೆ ಬೆರೆಸಿ ಕುಡಿಯಲು ವೀರ್ಯ ವೃದ್ಧಿಯಾಗುವುದು.