ಭಾರತೀಯ ಕ್ರೀಡಾ ಪ್ರಾಧಿಕಾರವು (AAI) ಜೂನಿಯರ್ ಅಸಿಸ್ಟಂಟ್ ಮತ್ತು ಸೀನಿಯರ್ ಅಸಿಸ್ಟಂಟ್ ಹುದ್ದೆಗಳ ಭರ್ತಿಗೆ ನೇಮಕ ನೋಟಿಫಿಕೇಶನ್ ಬಿಡುಗಡೆ ಮಾಡಿದೆ. ಒಟ್ಟು 156 ಹುದ್ದೆಗಳು ಖಾಲಿ ಇವೆ.
ಜೂನಿಯರ್ ಅಸಿಸ್ಟಂಟ್ (ಅಗ್ನಿಶಾಮಕ ಸೇವೆ) ಎನ್ಇ-4 : 132 ಹುದ್ದೆಗಳು, ಜೂನಿಯರ್ ಅಸಿಸ್ಟಂಟ್ (ಆಫೀಸ್) ಎನ್ಇ-4 : 10 ಹುದ್ದೆಗಳು, ಸೀನಿಯರ್ ಅಸಿಸ್ಟಂಟ್ (ಅಕೌಂಟ್ಸ್ ) ಎನ್ಇ-6: 13 ಹುದ್ದೆಗಳು, ಸೀನಿಯರ್ ಅಸಿಸ್ಟಂಟ್ (ಅಫೀಶಿಯಲ್ ಲಾಂಗ್ವೇಜ್) ಎನ್ಇ-06: 01 ಹುದ್ದೆ ಖಾಲಿ ಇದೆ.
ಜೂನಿಯರ್ ಅಸಿಸ್ಟಂಟ್ (ಅಗ್ನಿಶಾಮಕ ಸೇವೆ) ಎನ್ಇ-4 : 10th, 12th, Diploma (ಸಂಬಂಧಿಸಿದ ವಿಷಯಗಳಲ್ಲಿ), ಹೆಚ್ಎಂವಿ, ಎಲ್ಎಂವಿ ಲೈಸೆನ್ಸ್ ಹೊಂದಿರಬೇಕು. ಜೂನಿಯರ್ ಅಸಿಸ್ಟಂಟ್ (ಆಫೀಸ್) ಎನ್ಇ-4 : ಪದವಿ, ಸೀನಿಯರ್ ಅಸಿಸ್ಟಂಟ್ (ಅಕೌಂಟ್ಸ್ ) ಎನ್ಇ-6: ಪದವಿ, ಸೀನಿಯರ್ ಅಸಿಸ್ಟಂಟ್ (ಅಫೀಶಿಯಲ್ ಲಾಂಗ್ವೇಜ್) ಎನ್ಇ-06: ಡಿಗ್ರಿ, ಪಿಜಿ (ಸಂಬಂಧಿಸಿದ ವಿಷಯಗಳಲ್ಲಿ) ಮಾಡಿರಬೇಕು.
ಹುದ್ದೆಗಳಿಗೆ ಆನ್ಲೈನ್ ಅಪ್ಲಿಕೇಶನ್ ಸಲ್ಲಿಸಲು ಲಿಂಕ್ ಅನ್ನು ಸೆಪ್ಟೆಂಬರ್ 1 ರಂದು ಬಿಡುಗಡೆ ಮಾಡಲಾಗುತ್ತದೆ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ನಡೆಸಿ, ಮೆರಿಟ್ ಮತ್ತು ಮೀಸಲಾತಿ ಆಧಾರದಲ್ಲಿ ನೇಮಕ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 30 ಕೊನೆಯ ದಿನ. ಹೆಚ್ಚಿನ ಮಾಹಿತಿಗಳಿಗೆ ಭಾರತೀಯ ಕ್ರೀಡಾ ಪ್ರಾಧಿಕಾರದ ಅಧಿಕೃತ ವೆಬ್ಸೈಟ್ https://www.aai.aero/ ಗೆ ಭೇಟಿ ನೀಡಬಹುದು.