ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ 38 ಯಂಗ್ ಪ್ರೊಫೆಶನಲ್ಸ್ (ಜನರಲ್/ಲೀಗಲ್) ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. 12ನೇ ತರಗತಿ, ಬಿಇ, ಬಿ.ಟೆಕ್, ಎಂಬಿಬಿಎಸ್, ಸಿಎ, ಸ್ನಾತಕೋತ್ತರ ಪದವೀಧರರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರು. ಆನ್ಲೈನ್ ಮೂಲಕ ನವೆಂಬರ್ 15ರೊಳಗೆ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ.
ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ.
ಹುದ್ದೆಯ ಮಾಹಿತಿ:
ಯಂಗ್ ಪ್ರೊಫೆಸನಲ್(ಜನರಲ್)-29
ಯಂಗ್ ಪ್ರೊಫೆಸನಲ್ (ಲೀಗಲ್)-09
ಒಟ್ಟು 38 ಹುದ್ದೆಗಳು
ವಿದ್ಯಾರ್ಹತೆ:
ಯಂಗ್ ಪ್ರೊಫೆಸನಲ್(ಜನರಲ್)-ಬಿಇ, ಬಿ.ಟೆಕ್/ ಎಲ್ಎಲ್ಬಿ/ ಎಂಬಿಬಿಎಸ್/ ಸ್ನಾತಕೋತ್ತರ ಪದವಿ
ಯಂಗ್ ಪ್ರೊಫೆಸನಲ್ (ಲೀಗಲ್)-ಎಲ್ಎಲ್ಬಿ
ವಯೋಮಿತಿ:
ಭಾರತೀಯ ಕ್ರೀಡಾ ಪ್ರಾಧಿಕಾರ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು 32 ವರ್ಷ ಮೀರಿರಬಾರದು.
ಸ್ಥಳ:
ಭಾರತದಲ್ಲಿ ಎಲ್ಲಿ ಬೇಕಾದರೂ
ವೇತನ:
ಭಾರತೀಯ ಕ್ರೀಡಾ ಪ್ರಾಧಿಕಾರ ನೇಮಕಾತಿ ಅಧಿಸೂಚನೆ ಪ್ರಕಾರ, ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ₹ 50,000 ವೇತನ ನೀಡಲಾಗುತ್ತದೆ.
ಆಯ್ಕೆ ಪ್ರಕ್ರಿಯೆ:
ದಾಖಲಾತಿ ಪರಿಶೀಲನೆ
ವೈಯಕ್ತಿಕ ಸಂದರ್ಶನ
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 31/10/2022
ಅರ್ಜಿ ಸಲ್ಲಿಸಲು ಕೊನೆ ದಿನ: 15/11/2022