ಪೌರಾಣಿಕ ಕಥೆಗಳಿಂದ ನಾವು ಮಾತ್ರವಲ್ಲ, ಮಕ್ಕಳು ಕಲಿಯುವುದು ಕೂಡ ಸಾಕಷ್ಟಿದೆ. ಪುರಾಣಗಳಲ್ಲಿನ ನೈತಿಕ ಮೌಲ್ಯಗಳು ಅವರ ಜೀವನಕ್ಕೆ ದಾರಿದೀಪವಾಗಬಹುದು.
ಪ್ರತಿಯೊಂದು ಸಂಸ್ಕೃತಿಯು ತನ್ನದೇ ಆದ ಪುರಾಣವನ್ನು ಹೊಂದಿದೆ. ವೀರ ಪಾತ್ರಗಳ, ಪೌರಾಣಿಕ ವೀರರ, ದೇವರುಗಳ ಮತ್ತು ಅದ್ಭುತ ಸ್ಥಳಗಳನ್ನು ಕಥೆಗಳನ್ನು ಒಳಗೊಂಡಿರುತ್ತದೆ. ನಮ್ಮ ಪುರಾಣಗಳಲ್ಲಿನ ಕಥೆಗಳು ಕೇವಲ ವಯಸ್ಕರಿಗೆ ಮಾತ್ರವಲ್ಲ, ಮಕ್ಕಳಿಗೂ ಕೂಡ ಜೀವನ ಪಾಠವನ್ನು, ನೈತಿಕ ಮೌಲ್ಯವನ್ನು ತಿಳಿಸುತ್ತದೆ. ನಿಮ್ಮ ಮಕ್ಕಳು ತಮ್ಮ ಜೀವನದಲ್ಲಿ ಪುರಾಣಗಳಿಂದ ಅಳವಡಿಸಿಕೊಳ್ಳಬೇಕಾದ ಸಾಕಷ್ಟು ಜೀವನ ಮೌಲ್ಯಗಳಿವೆ.
ಏಕಲವ್ಯನ ಸಮರ್ಪಣೆ
ಏಕಲವ್ಯ ತನ್ನ ಬುಡಕಟ್ಟು ಜನಾಂಗದವರೊಂದಿಗೆ ಕಾಡಿನಲ್ಲಿ ವಾಸಿಸುತ್ತಿದ್ದ ಬಾಲಕ. ಜಗತ್ತಿನ ಅತ್ಯುತ್ತಮ ಬಿಲ್ಲುಗಾರನಾಗಬೇಕೆಂಬ ಹಂಬಲ ಅವರ ಜೀವನದ ಮುಖ್ಯ ಉದ್ದೇಶ. ಬಿಲ್ವಿದ್ಯೆಯನ್ನು ಕಲಿಸಲು ದ್ರೋಣರ ಬಳಿ ಕೇಳಿದಾಗ ಆತನ ಜಾತಿಯು ಅಡ್ಡ ಬರುತ್ತದೆ. ಕೀಳು ಜಾತಿಯಲ್ಲಿ ಹುಟ್ಟಿದವನೆಂಬ ಕಾರಣಕ್ಕೆ ದ್ರೋಣರು ಬಿಲ್ವಿದ್ಯೆ ಕಲಿಸಲು ನಿರಾಕರಿಸತ್ತಾರೆ. ನಂತರ ದ್ರೋಣರನ್ನೇ ತನ್ನ ಗುರುವೆಂದು ಭಕ್ತಿಯಿಂದ ಭಾವಿಸಿ ದ್ರೋಣರ ಮಣ್ಣಿನ ಪ್ರತಿಮೆಯನ್ನು ಮಾಡಿ ಅದರ ಮುಂದೆ ಬಿಲ್ವಿದ್ಯೆಯನ್ನು ಅಭ್ಯಾಸ ಮಾಡಿ ಮಹಾನ್ ಬಿಲ್ಲುಗಾರನಾಗುತ್ತಾನೆ. ಏಕಲವ್ಯನ ಬಿಲ್ವಿದ್ಯೆ ಚಾತುರ್ಯವನ್ನು ಕಂಡ ದ್ರೋಣರು ಈತ ತನ್ನ ಶಿಷ್ಯ ಅರ್ಜುನನ್ನೇ ಸೋಲಿಸುತ್ತಾನೆಂಬ ಭಯದಲ್ಲಿ ಆತನ ಹೆಬ್ಬೆರಳನ್ನು ಗುರುದಕ್ಷಿಣೆಯಾಗಿ ಪಡೆದುಕೊಳ್ಳುತ್ತಾನೆ. ಇಲ್ಲದಿದ್ದರೆ ಏಕಲವ್ಯನು ಅರ್ಜುನನ ಬಿಲ್ವಿದ್ಯೆ ಕಲೆಯನ್ನು ಮೀರಿಸಿ ತಾನೇ ಉತ್ತಮ ಬಿಲ್ಲುಗಾರನಾಗಿರುತ್ತಿದ್ದನು.
ನೀತಿಪಾಠ: ನಿಮ್ಮ ಮಗು ಶಿಕ್ಷಕರಿಗೆ ಮತ್ತು ಬೋಧಕರಿಗೆ ಗೌರವ ಕೊಡುವುದನ್ನು ಕಲಿಯುತ್ತದೆ. ಕಠಿಣ, ಪರಿಶ್ರಮ ಜೀವನದ ಮೂಲಾಧಾರವೆಂಬುದು ಅವರಿಗೆ ತಿಳಿಸಬೇಕು.