ಶ್ರವಣಬೆಳಗೊಳ: ಶಿವಮೊಗ್ಗ ಜಿಲ್ಲೆಯ ಸಾಗರದ ಆಗಮ ಕೀರ್ತಿ ಅವರನ್ನು ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಜೈನ ಮಠದ ಉತ್ತರಾಧಿಕಾರಿಯಾಗಿ ನಾಲ್ಕು ತಿಂಗಳ ಹಿಂದೆಯೇ ನೇಮಿಸಿದ್ದರು.
ಎರಡು ದಿನದ ಹಿಂದಷ್ಟೇ ಕ್ಷೇತ್ರದ ಹಿರಿಯರನ್ನು ಮಠಕ್ಕೆ ಕರೆಸಿದ್ದ ಸ್ವಾಮೀಜಿ, ಆಗಮ ಕೀರ್ತಿಗ ಳನ್ನು ಉತ್ತರಾಧಿಕಾರಿಯಾಗಿ ನೇಮಿಸಲಾಗಿದೆ. ನನ್ನ ಆರೋಗ್ಯ ಸರಿ ಉಳಿ ಯುತ್ತಿಲ್ಲ. ಹೀಗಾಗಿ ಅವರನ್ನೇ ಮುಂದುವರಿಸಬೇಕು ಎಂದು ತಿಳಿಸಿದ್ದರು.
ಆಗಮ ಕೀರ್ತಿ ಅವರನ್ನು ಉತ್ತರಾಧಿಕಾರಿಯಾಗಿ ಮಾಡಲಾಗುತ್ತಿದ್ದು, ಪಟ್ಟಾಧಿಕಾರ ಮಹೋತ್ಸವ ಮುಂದಿನ ದಿನಗಳಲ್ಲಿ ನಡೆಯಲಿದೆ ಎಂದು ಮಠದ ಮೂಲಗಳು ತಿಳಿಸಿವೆ.
Saval TV on YouTube