ಮನೆ ಕ್ರೀಡೆ SRH vs RCB: ಟಾಸ್ ಗೆದ್ದ ಆರ್’ಸಿಬಿ: ಚೇಸಿಂಗ್ ಆಯ್ಕೆ

SRH vs RCB: ಟಾಸ್ ಗೆದ್ದ ಆರ್’ಸಿಬಿ: ಚೇಸಿಂಗ್ ಆಯ್ಕೆ

0

ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯು ಇದೀಗ ಕ್ಲೈ ಮ್ಯಾಕ್ಸ್‌ ಹಂತದಲ್ಲಿದೆ. ಪ್ಲೇ ಆಫ್ ಅರ್ಹತೆ ಸಲುವಾಗಿ ಕೊನೇ ಪ್ರಯತ್ನ ಹಿಡಿದಿಟ್ಟಿರುವ ಫಾಫ್‌ ಡು ಪ್ಲೆಸಿಸ್‌ ಸಾರಥ್ಯದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ಸನ್‌ ರೈಸರ್ಸ್‌ ಹೈದರಾಬಾದ್‌ ಎದುರು ಗೆಲುವು ಅನಿವಾರ್ಯವಾಗಿದೆ.

Join Our Whatsapp Group

ಟಾಸ್‌ ಗೆದ್ದ ಆರ್‌ಸಿಬಿ ನಾಯಕ ಫಾಫ್ ಡು ಪ್ಲೆಸಿಸ್‌ ರನ್‌ ಚೇಸಿಂಗ್‌ ಆಯ್ಕೆ ಮಾಡಿಕೊಂಡಿದ್ದಾರೆ.

ಹೈದರಾಬಾದ್‌ : ತನ್ನ ಪಾಲಿನ ಎಲ್ಲಾ ಪಂದ್ಯಗಳನ್ನು ಗೆದ್ದು ಐಪಿಎಲ್ ಪ್ಲೇ ಆಫ್‌ ಹಂತಕ್ಕೆ ಕಾಲಿಡುವ ಲೆಕ್ಕಾಚಾರ ಮಾಡಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಇದೀಗ ಸನ್‌ ರೈಸರ್ಸ್‌ ಹೈದರಾಬಾದ್‌ ಎದುರು ಪೈಪೋಟಿ ನಡೆಸಲಿದೆ. ಈ ಪಂದ್ಯದಲ್ಲಿ ಆರ್‌ಸಿಬಿ ಗೆಲ್ಲುವ ಫೇವರಿಟ್‌ ಆಗಿದ್ದರೂ ಎಸ್‌ ಆರ್‌ ಎಚ್‌ ಅಚ್ಚರಿಯ ಫಲಿತಾಂಶ ನೀಡುವ ತವಕದಲ್ಲಿದೆ. ಇನ್ನು ಟಾಸ್‌ ಗೆದ್ದ ಆರ್‌ ಸಿಬಿ ಆತಿಥೇಯರನ್ನು ಮೊದಲು ಬ್ಯಾಟ್‌ ಮಾಡುವಂತೆ ಆಹ್ವಾನಿಸಿತು.

ದಿನೇಶ್‌ ಕಾರ್ತಿಕ್‌ಗೆ ಕೊಕ್:

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ತನ್ನ ವಿಕೆಟ್‌ಕೀಪರ್‌ ಬ್ಯಾಟ್ಸ್‌ ಮನ್‌ ದಿನೇಶ್‌ ಕಾರ್ತಿಕ್‌ ಅವರನ್ನು ಆಡುವ 11ರ ಬಳಗದಿಂದ ಕೈಬಿಟ್ಟಿದೆ. ಅವರ ಜಾಗದಲ್ಲಿ ಯುವ ಆಟಗಾರ ಅನುಜ್ ರಾವತ್‌ ಕೀಪಿಂಗ್ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಜೊತೆಗೆ ಸ್ಪಿನ್ ಬೌಲಿಂಗ್‌ ಆಲ್‌ ರೌಂಡರ್‌ ಶಹಬಾಝ್ ಅಹ್ಮದ್ ಅವರನ್ನೂ ಸೇರಿಸಿಕೊಂಡಿದೆ.

ಇತ್ತಂಡಗಳ ಪ್ಲೇಯಿಂಗ್‌ XI ವಿವರ:

ಎಸ್‌ಆರ್‌ಎಚ್‌ XI:

ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ಏಡೆನ್ ಮಾರ್ಕ್ರಮ್ (ನಾಯಕ), ಹೆನ್ರಿಚ್ ಕ್ಲಾಸೆನ್ (ವಿಕೆಟ್‌ ಕೀಪರ್‌), ಹ್ಯಾರಿ ಬ್ರೂಕ್, ಗ್ಲೆನ್ ಫಿಲಿಪ್ಸ್, ಅಬ್ದುಲ್ ಸಮದ್, ಕಾರ್ತಿಕ್ ತ್ಯಾಗಿ, ಮಯಾಂಕ್ ದಾಗರ್, ಭುವನೇಶ್ವರ್ ಕುಮಾರ್, ನಿತೀಶ್ ರೆಡ್ಡಿ.

ಆರ್‌ಸಿಬಿ XI:

ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ಗ್ಲೆನ್ ಮ್ಯಾಕ್ಸ್‌ವೆಲ್, ಮಹಿಪಾಲ್ ಲೊಮ್ರೊರ್, ಅನುಜ್ ರಾವತ್ (ವಿಕೆಟ್‌ ಕೀಪರ್‌), ಶಹಬಾಜ್ ಅಹ್ಮದ್, ಮೈಕೆಲ್ ಬ್ರೇಸ್‌ವೆಲ್, ವೇಯ್ನ್ ಪಾರ್ನೆಲ್, ಹರ್ಷಲ್ ಪಟೇಲ್, ಕರಣ್ ಶರ್ಮಾ, ಮೊಹಮ್ಮದ್ ಸಿರಾಜ್.