ಈ ಪುಣ್ಯಕ್ಷೇತ್ರವು ಬಹಳ ಪುರಾತನ,ಚೋಳರ ಕಾಲದ ಇತಿಹಾಸವಿದೆ ಇತ್ತೀಚಿಗೆ 9 ವರ್ಷಗಳ ಹಿಂದೆ ಪುನರ್ಜೀವನಗೊಂಡಿದೆ.ಊರಿನ ಗ್ರಾಮಸ್ಥರು ತಮಿಳುನಾಡಿನಿಂದ ಶಿಲ್ಪಿಗಳನ್ನು ಕರೆಸಿ ದೇವಸ್ಥಾನವನ್ನು ನಿರ್ಮಾಣಗೊಳಿಸಿದ್ದಾರೆ ಈ ಕ್ಷೇತ್ರದಲ್ಲಿ ಸೋಮವಾರ ದಿನ ವಿಶೇಷವಾಗಿ ಪೂಜೆ ನಡೆಯುತ್ತದೆ.ಅಂಕ ಅಂದರೆ ಒಂದು ನಾಥ ಅಂದರೆ ಒಡೆಯ ಈ ಕ್ಷೇತ್ರದಲ್ಲಿ ತಾನೊಬ್ಬನೇ ಇರಬೇಕು ಎಂದು ಅಂಕನಾಥೇಶ್ವರನೆಂದು ಕರೆಸಿಕೊಂಡಿದ್ದಾರೆ.
ಮತ್ತೊಂದು ವಿಶೇಷವೆಂದರೆ ಈ ಊರಿನ ಹೆಸರು ಅಂಕನಾಥಪುರ ಈ ಕ್ಷೇತ್ರದಲ್ಲಿ ನಡೆಸಿರುವ ಸ್ವಾಮಿ ಅಂಕನಾಥೇಶ್ವರ ಈ ಅಂಕನಾಥಪುರದಲ್ಲಿ ಬೇರೆ ಯಾವ ದೇವರುಗಳಿಲ್ಲ ಸುತ್ತಮುತ್ತ ಗ್ರಾಮದಲ್ಲಿ ನೋಡುವ ದೇವಾಲಯಗಳು ಬಹಳಷ್ಟಿವೆ ಈ ಅಂಕನಾಥೇಶ್ವರಸ್ವಾಮಿಯ ಎಡಭಾಗದಲ್ಲಿ ಬಂಡಿಹಳ್ಳಿ ಮಾರಿಕಾಂಬಾ ದೇವಿ, ಪಾರ್ವತಿ ದೇವಿ,ಶ್ರೀ ಸಿದ್ದಲಿಂಗೇಶ್ವರ ಸ್ವಾಮಿ,ಶ್ರೀ ಮುನೇಶ್ವರಸ್ವಾಮಿ ನೆಲೆಸಿದ್ದಾರೆ ಹಾಗೆ ಬಲಭಾಗದಲ್ಲಿ ಹಿರಿಯಮ್ಮ ತಾಯಿ ನೆಲೆಸಿದ್ದು, ಅಂಕನಾಥೇಶ್ವರ ಸ್ವಾಮಿಯ ಆಗ್ನೇಯ ಭಾಗದಲ್ಲಿ ಶ್ರೀ ನಂದಿ ಬಸವೇಶ್ವರರು ನೆಲೆಸಿದ್ದಾರೆ.
ಇಲ್ಲಿ ಧನುರ್ಮಾಸದ ಹೊರತುಪಡಿಸಿ ವರ್ಷದ ಎಲ್ಲಾ ತಿಂಗಳುಗಳಲ್ಲಿ ಅಂಕನಾಥೇಶ್ವರ ಸ್ವಾಮಿಯು ಪೂಜೆಗೊಳ್ಳುತ್ತಾನೆ. ಈ ಸ್ವಾಮಿಯು ಸ್ವತಹ ಉದ್ಭವ ಮೂರ್ತಿಯಾಗಿದ್ದು.ಇತ್ತೀಚೆಗೆ ಜೀರ್ಣೋದ್ಧಾರ ನಡೆದಿದೆ ಈ ಕ್ಷೇತ್ರದಲ್ಲಿ ಸಂತಾನ ಫಲ ಪ್ರೇಕ್ಷಯಿಂದ ಬರುವ ಭಕ್ತಾದಿಗಳ ಹೆಚ್ಚು ಹಾಗೂ ಸ್ವಾಮಿಯಲ್ಲಿ ಹರಕೆಯನ್ನು ಹೊತ್ತು ಅವರಿಗೆ ಸಂತಾನ ಫಲಪ್ರಾಪ್ತಿ ಯಾದಾಗ ಶುಭರಾತ್ರಿಯ ದಿನದಂದು ಅನ್ನ ಸಂರ್ಪಣೆ ಮತ್ತು ಸ್ವಾಮಿಗೆ ಪ್ರಿಯವಾದ ಸಿಹಿಯನ್ನು ಮಾಡಿಸಿ ಬಂದ ಭಕ್ತಾದಿಗಳಿಗೆ ಎಲ್ಲಾ ಹಂಚುತ್ತಾರೆ.