ಇತಿಹಾಸ ನೆಲೆಯಲ್ಲಿ ಶೃಂಗೇರಿ ಕಳಸ ಹೊರನಾಡು ಪ್ರದೇಶ
ಪ್ರಕೃತಿ ಸುಂದರವಾದ ಚಿಕ್ಕಮಂಗಳೂರು ಜಿಲ್ಲೆ ಹಳೆ ಶಿಲಾಯುಗದ ಕಾಲದಿಂದ ಇಂದಿನವರೆಗೂ ಚರಿತ್ರೆಯ ವಿವಿಧ ಘಟ್ಟಗಳಲ್ಲಿ ಅನೇಕ ಮಹತ್ವದ ಗುರಿತುಗಳನ್ನು ಮೂಡಿಸಿದೆ.
ಮೌರ್ಯರು. ಕದಂಬರು, ಗಂಗರು, ರಾಷ್ಟ್ರಕೂಟರು, ಚಾಲುಕ್ಯರು, ವಿಜಯನಗರದ ಅರಸರು, ಕೆಳದಿ ಅರಸರು,ಮೈಸೂರು ಒಡೆಯರು ಭೈರಾ ಅರಸರು,ತರಿಕೆರೆ ಪಾಳೆಯಗಾರರು ಮುಂದುವರಿದು ಬ್ರಿಟಿಷರು ಈ ಪ್ರದೇಶವನ್ನು ಬೇರೆ ಬೇರೆ ಕಾಲದಲ್ಲಿ ಆಳಿದ್ದು ಚರಿತ್ರೆಯಿಂದ ತಿಳಿದುಬರುವ ವಿಚಾರ. ಐತಿಹಾಸಿಕ ಮತ್ತು ಧಾರ್ಮಿಕವಾಗಿ ಚಿಕ್ಕಮಂಗಳೂರು ಜಿಲ್ಲೆಗೆ ದಕ್ಷಿಣದ ಕಾಶಿ ಎಂದೇ ಪ್ರಸಿದ್ಧ ಪಡೆದಿರುವ ಶೃಂಗೇರಿ, ಕಳಸ,ಹೊರನಾಡು ಇವುಗಳು ಪವಿತ್ರ ತಾಣವಾಗಿದೆ. ಈ ಚಿಕ್ಕಮಂಗಳೂರು ಪ್ರದೇಶ ರಾಮಾಯಣ ಕಾಲದಲ್ಲಿ ಋಷ್ಯಶೃಂಗಗಿರಿ ವಾಲ್ಮೀಕಿ ರಾಮಾಯಣದ ಬಾಲಖಾಂಡದಲ್ಲಿ ಋಷ್ಯಶೃಂಗ ಮುನಿಯ ಚರಿತ್ರೆಯಲ್ಲಿ ಈ ಪ್ರದೇಶ ಋಷ್ಯಶೃಂಗಗಿರಿ ಪ್ರದೇಶ ಎಂದು ಪ್ರಸಿದ್ಧಿ ಹೊಂದಿದ್ದುದ್ದನ್ನು ದಾಖಲಿಸುತ್ತದೆ.
ಆದಿ ಶಂಕರರು ಸುಮಾರು ಹನ್ನೆರಡು ನೂರು ವರ್ಷಗಳ ಹಿಂದೆ ಅದ್ವೇೖತ ಮಠವನ್ನು ಸ್ಥಾಪಿಸಿದ ಸ್ಥಳ ಶೃಂಗೇರಿ.ನಾಲ್ಕು ದಿಕ್ಕುಗಳಲ್ಲಿ ಪ್ರಧಾನ ಮಠವನ್ನು ಸ್ಥಾಪಿಸಿ ಹರಿದು ಹಂಚಿಹೋಗಿದ್ದ ಭಾರತವನ್ನು ಒಂದುಗೂಡಿಸುವ ಪ್ರಯತ್ನ ಮಾಡಿದುದು ಐತಿಹಾಸಿಕ ಸತ್ಯ. ಮುಂದೆ ವಿದ್ಯಾರಣ್ಯರು ಶೃಂಗೇರಿ ಪೀಠವನ್ನು ಅಲಂಕರಿಸಿದ ನಂತರದಲ್ಲಿ ಶ್ರೀಮಠದ ಕೀರ್ತಿ ಹೆಚ್ಚುವಂತಾಯಿತು. ವಿಜಯನಗರದ ಸಾಮ್ರಾಜ್ಯ ಸ್ಥಾಪನೆಗೆ ಕಾರಣರಾಗಿದ್ದರಿಂದ ಗುರುಗಳ ಬಿರುದಾವಳಿಗಳನ್ನು ಆ ಶಾಸನ ಮತ್ತು ಕಡತಗಳಲ್ಲಿ ವಿದ್ಯಾನಗರ ಮಹಾರಾಜಧಾನಿ, ಕರ್ನಾಟಕ ಸಿಂಹಾಸನ ಪ್ರತಿಷ್ಠಾಪನಾಚಾರ್ಯ ಎಂಬುದಾಗಿ ಉಲ್ಲೇಖಿಸಲಾಗುವುದನ್ನು ಗಮನಿಸಬಹುದು. ವಿಜಯನಗರ ಅನಂತರ ಆಡಳಿತಕ್ಕೆ ಬಂದ ಕೆಳದಿ ಮೈಸೂರು ಅರಸರು ಈ ಮಠಕ್ಕೆ ರಾಜಾಶ್ರಯ ದೊರೆ ತಿದ್ದರಿಂದ ಅದೊಂದು ಸಂಸ್ಥಾನವಾಗಿ ರೂಪುಗೊಂಡಿತು. ಧರ್ಮ ರಕ್ಷಣೆಯ ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡು ಧರ್ಮ ಸಂಸ್ಥಾನವಾಗಿ ಈ ರೂಪಗೊಂಡಿತ್ತು. ಹೈದರಾಲಿ, ಟಿಪ್ಪು, ನಿಝಾಮ,ಮರಾಠಾ ಪೇಶ್ವೆ. ಸರದಾರರೂ ಇತರ ಅನೇಕರು ಸಂಸ್ಥಾನಿಕರೂ ಭಕ್ತಾದಿಗಳಿಗೂ ಈ ಮಠಕ್ಕೆ ದಾನ ದತ್ತಿಗಳನ್ನು ನೀಡುವುದರ ಮೂಲಕ ಮಠ ಕರ್ನಾಟಕಕ್ಕೆ ಚಿಕ್ಕಮಂಗಳೂರು ಕಳಸ ಪ್ರಾಯವಾಗಿ ಬೆಳೆಯಿತು.
ಚಿಕ್ಕಮಂಗಳೂರು ಜಿಲ್ಲೆಯಲ್ಲಿ ಅನೇಕ ಇತಿಹಾಸ ಪೂರ್ವದ ನೆಲೆಗಳನ್ನು ಗುರುತಿಸಲಾಗಿದೆ ಹಲವಾರು ಪ್ರದೇಶಗಳಲ್ಲಿ ಶಿವ ಯುಗ ಸಂಸ್ಕೃತಿಗೆ ಸಂಬಂಧಿಸಿದಂತಹ ಕೊಡಲಿ ಮುಂತಾದ ಆಯುಧಗಳು ದೊರೆ ತಿರುವುದಿದೆ ಈ ಜಿಲ್ಲೆಗೆ ಸಂಬಂಧಿಸಿದಂತೆ ಇತಿಹಾಸ ಪೂರ್ವದ ನೆಲೆಗಳಲ್ಲಿ ಪ್ರಮುಖವಾದದ್ದು ಬೆಳೆವಿನ ಕೊಡುಗೆ ಎಂದು ಗುರುತಿಸಲಾಗಿದೆ. ಇದು ಚಿಕ್ಕಮಂಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಒಂದು ಗ್ರಾಮ. ಪ್ರಾಗೈತಿಹಾಸಿಕ ಹಲವಾರು ಸಮಾಧಿಗಳು, ಕೊಡಲಿ, ಮಡಿಕೆ ಚೂರುಗಳು ಇಲ್ಲಿ ಹೆಚ್ಚು ಸಿಕ್ಕಿವೆ. ಇದನ್ನು ಪ್ರಮುಖ ಇತಿಹಾಸ ಪೂರ್ವದ ನೆಲೆ ಎಂದು ಗುರುತಿಸಲಾಗಿದೆ. ಇಲ್ಲಿ ಬೃಹತ್ ಶಿಲಾಯುಗಕ್ಕೆ ಸಂಬಂಧಿಸಿದಂತೆ ಗೋರಿಗಳು,ಸೌತಳ್ಳಿ ಗುಡ್ಡದಲ್ಲಿ ಮತ್ತು ಕಾಗೆ ಕಾಡಿನಲ್ಲಿ ದೊರಕಿವೆ.
ಈ ಗ್ರಾಮದ ಪೂರ್ವ ಮತ್ತು ಉತ್ತರ ದಿಕ್ಕಿಗೆ ತುಂಗಾ ನದಿ ಹರಿಯುತ್ತದೆ. ಈ ಪ್ರದೇಶ ದಟ್ಟ ಕಾನಿನಿಂದ ಕೂಡಿದ್ದಾಗಿದೆ. ಇದು ಕೇವಲ ಹೊಸ ಶಿಲಾಯುಗದ ನೆಲೆ ಆಗಿರದೆ ಬೃಹತ್ತ ಶಿಲಾಯುಗದ ಸಂಸ್ಕೃತಿಯ ನೆಲೆಗಳೂ ಇಲ್ಲಿ ಇತ್ತೇನ್ನುವುದಕ್ಕೆ ಕುರುಹುಗಳು ಸಾಕ್ಷಿಯಾಗಿವೆ ಐತಿಹಾಸಿಕವಾಗಿ ಪ್ರದೇಶದಲ್ಲಿ ಜೈನ ಧರ್ಮ ನೆಲೆ ಕಂಡಿತ್ತೆನ್ನಲು ಸಾಕಷ್ಟು ಆವಶೇಷಗಳು ಲಭ್ಯವಿವೆ. ಗಂಗರ ಕಾಲದಿಂದ ಪ್ರಾರಂಭವಾಗಿ ಮಧ್ಯಕಾಲೀನ ಯುಗಕ್ಕೆ ಸೇರಿದ ಸ್ಮಾರಕಗಳು ಈ ಪ್ರದೇಶದಲ್ಲಿ ಸಿಗುತ್ತವೆ. ಕಳಸ ಕಾರ್ಕಳ ರಾಜ್ಯ ಅಸ್ತಿತ್ವದಲ್ಲಿ ಇದ್ದ ಸಂದರ್ಭದಲ್ಲಿ ಬಿಡುವಿನ ಕೊಡುಗೆ ಆ ರಾಜ್ಯದ ಉತ್ತರದ ಗಡಿ ಆಗಿತ್ತೆಂಬುದಾಗಿ ಶಾಸನ ತಿಳಿಸುತ್ತದೆ.