ಪುಣ್ಯಕ್ಷೇತ್ರವು 2004ರಲ್ಲಿ ಶಂಖು ಸ್ಥಾಪನೆಯಾಯಿತು. ನಂತರ ಸ್ವಲ್ಪ ಕೆಲಸಗಳು ವಿಳಂಬವಾಯಿತು ನಂತರ ಹಿರಿಯರ ಸ್ವಾಮಿಗಳ ಅದಂತಹ ಸುಬ್ರಹ್ಮಣ್ಯ ಸ್ವಾಮಿಗಳ ನೇತೃತ್ವದಲ್ಲಿ ಕೆಲವೊಂದು ಕೆಲಸ ಮಾಡಿಸಿದರು ನಂತರ 2009ರಲ್ಲಿ ಸುಬ್ರಹ್ಮಣ್ಯಸ್ವಾಮಿಗಳು ಯಲ್ಲಪ್ಪ ಗುಡ್ಡಸ್ವಾಮಿಗಳು ಅಧ್ಯಕ್ಷರಾದಂತ ಸತೀಶ್ ಅವರು ಸಭೆ ಸೇರಿ 18 ಮೆಟ್ಟಿಲು ಇರುವಂತಹ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಬೇಕೆಂದು ಚಿತ್ರದುರ್ಗ ಹಾಗೂ ನಂಜನಗೂಡಿನ ದೇವಸ್ಥಾನಗಳಿಗೆ ಹೋಗಿ ಅಲ್ಲಿನ ವಾಸ್ತು ಶಿಲ್ಪ ಹಾಗೂ ಮೆಟ್ಟಿಲುಗಳನ್ನು ಯಾವ ರೀತಿ ಮಾಡಿದ್ದಾರೆ ಎಂದು ಪರಿಶೀಲಿಸಿ ಕೇರಳದ ತಂತ್ರಿಗಳಲ್ಲಿ ವಿಚಾರಿಸಿ ಕೆಲಸವನ್ನು ಪ್ರಾರಂಭಿಸಿದರು.
2009ರಲ್ಲಿಶಂಕು ಸ್ಥಾಪನೆಯಿಂದ ಪೂರ್ಣ ಶುರು ಮಾಡಿದರು 2014ರಲ್ಲಿ ದೇವಸ್ಥಾನ ಪ್ರತಿಷ್ಠಾಪನೆ ಮಹೋತ್ಸವ ಆಯಿತು ನಿರೀಕ್ಷೆಗೂ ಮೀರಿದಂತ ದೊಡ್ಡ ದೇವಾಲಯ ನಿರ್ಮಾಣವಾಯಿತು. ಪ್ರತಿವರ್ಷ ದೀಪೋತ್ಸವ ಪಡಿ ಪೂಜೆ, ಆಂದಿನಿಂದ ನಿರಂತರವಾಗಿ ಮಾಡಿಕೊಂಡು ಬಂದಿದ್ದಾರೆ.
ಮೂರು ವರ್ಷದ ಹಿಂದೆ ಸ್ವಾಮಿ ತಿರುವಾಭರಣ ಎಂಬ ಒಂದು ಮೆರವಣಿಗೆಯನ್ನು ಮಾಡಬೇಕೆಂದು ಸಂಕಲ್ಪ ಮಾಡಿ ಅದನ್ನು ಸಹ ಬಹಳ ವಿಜೃಂಭಣೆಯಿಂದ ಭಕ್ತಾದಿಗಳ ಸಹಾಯದಿಂದ ನಡೆಸುತ್ತಿದ್ದಾರೆ.ಸ ಜಿಲ್ಲಾಮಟ್ಟದಲ್ಲಿ ಎಲ್ಲಾ ಅಯ್ಯಪ್ಪ ಸ್ವಾಮಿಯ ದೇವಾಲಯದ ಗುರುಸ್ವಾಮಿಗಳನ್ನು ಸಭೆ ಕರೆದಿದ್ದರು.
ಹುಬ್ಬಳ್ಳಿಯಲ್ಲಿ ಅಯ್ಯಪ್ಪ ಸ್ವಾಮಿ ದೇವಾಲಯ ನ್ಯಾಮತಿ ಪ್ರತಿನಿಧಿಯಾಗಿ ಈ ದೇವಾಲಯದವರು ಭಾಗವಹಿಸಿದರು. ಕೋವಿಡ್ ಇದ್ದಿದ್ದರಿಂದ ಶಬರಿಯಾತ್ರೆ ಕಷ್ಟ ಆದ್ದರಿಂದ ಜನರಿಗೆ ತೊಂದರೆ ಆಗುವುದೆಂದು ಆ ಭಾಗದಲ್ಲಿ ಇರುವ ಅಯ್ಯಪ್ಪ ದೇವಾಲಯಗಳಿಗೆ ಭೇಟಿ ನೀಡಿ ಅಭಿಷೇಕ ಮಾಡಬಹುದೆಂದು ಅಂದು ತೆಗೆದುಕೊಂಡು ತೀರ್ಮಾನವಾಯಿತು.
ಕರ್ನಾಟಕದಲ್ಲಿ 18 ಮೆಟ್ಟಿಲು ಪಂಚಲೊಹದ ಮೂರ್ತಿ ಇರುವಂತ 10 ದೇವಾಲಯಗಳು ಆಯ್ಕೆ ಮಾಡಿದರು. ಅದರಲ್ಲಿ ಕ್ಷೇತ್ರದ ಅಯ್ಯಪ್ಪ ಸ್ವಾಮಿ ದೇವಾಲಯವು ಒಂದಾಗಿತ್ತು ಶಬರಿಗೆ ಹೋಗಲು ಸಾಧ್ಯವಾಗದೇ ಇದ್ದ ಪಕ್ಷದಲ್ಲಿ ಈ ಕ್ಷೇತ್ರಕ್ಕೆ ಭೇಟಿ ನೀಡುವುದು.