ಮನೆ ದೇವಸ್ಥಾನ ಶ್ರೀ ಗುರು ಗಿರಿ ಸಿದ್ದೇಶ್ವರ ಸ್ವಾಮಿ ಕ್ಷೇತ್ರ

ಶ್ರೀ ಗುರು ಗಿರಿ ಸಿದ್ದೇಶ್ವರ ಸ್ವಾಮಿ ಕ್ಷೇತ್ರ

0

     ಶ್ರೀ ಗುರುಸಿದ್ದೇಶ್ವರ ಮಹಾಸ್ವಾಮಿಯವರ ಶ್ರೀ ಮಠ ಸಾವಿರ ವರ್ಷ  ಇತಿಹಾಸ ಇರುವಂದ್ದಾಗಿದೆ.ಈ ಪುಣ್ಯಕ್ಷೇತ್ರ ಇದು ರಾಜ ಶೈಲೇಶ ಮಹಾರಾಜನಿಂದ ಆಳಲ್ಪಟ್ಟಿತು. ಶ್ರೀಶೈಲ ಮಹಾರಾಜನಿಗೆ ಪುತ್ರ ಸಂತಾನ ಕೊರಗು ಸದಾ ಕಾಡುತ್ತಿರುತ್ತಿತ್ತು. ಶಿವಭಕ್ತ ನಾಗಿ ಪುತ್ರ ಚಿಂತನೆಯಲ್ಲಿ ಕಾಲ ಕಳೆಯುತ್ತಿರುವಂತಹ ಸಂದರ್ಭದಲ್ಲಿ ಪರಮೇಶ್ವರನು ಅವರಿಗೆ ಯಜ್ಞ ಕಲ್ಪದಿಂದ ಅಗ್ನಿ ದೇವತೆಯ ಒಂದು ಹಸ್ತದಿಂದ ಒಂದು ಶಿಶುವನ್ನು ಮಹಾರಾಜನಿಗೆ ನೀಡುತ್ತಾನೆ.

Join Our Whatsapp Group

    ಆ ಶಿಶು ಯಾವುದೆಂದರೆ ಇಂದ್ರ ಲೋಕದಲ್ಲಿ ವಸಂತೋತ್ಸವ ನಡೆಯುತ್ತಿರುತ್ತದೆ ಆ ಸಂದರ್ಭದಲ್ಲಿ ಗಂಧರ್ವರು ಕೇಚರ ಮಾರ್ಗದಲ್ಲಿ ಸಂಚರಿಸುತ್ತಿರುವಾಗ ಅವರ ಪತ್ನಿಯರ ಒಳಗೂಡಿ ಆ ಲಿಂಗನ ಸುಖವನ್ನು ಅನುಭವಿಸುತ್ತಾರೆ ಆ ಒಂದು ಸಂದರ್ಭದಲ್ಲಿ ಭೂಲೋಕದಲ್ಲಿ ಯಜ್ಞ ಯಾಗಾದಿಗಳು ನಡೆಯುತ್ತಿರುತ್ತದೆ.ಈ ಆ ಯಜ್ಞ ಕುಂಡಕ್ಕೆ ಗಂಧರ್ವರ ಬಿಂದು ಬೀಳುತ್ತದೆ.ಆ ಯಜ್ಞವು ಅಪವಿತ್ರವಾಗುತ್ತದೆ.

     ಆಗ ಋಷಿಗಳು ಗಂಧರ್ವರಿಗೆ ಶಪಿಸುಸುತ್ತಾರೆ. ಭೂಲೋಕದಲ್ಲಿ ಜನಿಸಿ ಅನ್ನ ಆಹಾರವಿಲ್ಲದೆ ಸಕಲ ಕಷ್ಟ ಅನುಭವಿಸಿ ಶಿವ ಚಿಂತನೆಯಿಂದ ಭಿಕ್ಷಾಟನೆಯನ್ನು ಮಾಡಿ ನೀವು ಮಾನವ ರೂಪವನ್ನು ತಾಳಿ ಎಂದು ಅವರು ಶಾಪ ಕೊಡುತ್ತಾರೆ. ಮತ್ತು ಆರು ಋಷಿಗಳೆಲ್ಲರೂ ಕೂಡಿ ಆ ಯಜ್ಞ.  ದೇವತೆಯನ್ನು ಪ್ರಾರ್ಥಿಸುತ್ತಾರೆ. ಈ ಯಜ್ಞ ಭಂಗವಾಯಿತು ಮುಂದೇನು ಮಾಡಬೇಕು  ಎಂದು ಕೇಳಿದಾಗ ಯಜ್ಞ  ದೇವತೆ ಅನು ಗ್ರಹಿಸುತ್ತಾಳೆ.ಗಂಧರ್ವರ ಬಿದ್ದಿರುವಂತ ಶಿಶುವನ್ನು ಶೈಲೇಶ   ಮಹಾರಾಜನಿಗೆ ಆಶೀರ್ವದಿಸುತ್ತಾಳೆ.

      ಮುಂದೆ ಯಜ್ಞ  ಪೂರ್ಣವಾದಾಗ ಯಜ್ಞ ದೇವತೆಯ ಆಶೀರ್ವಾದವು ಪೂರ್ಣವಾಗುತ್ತದೆ.ಆ ಶಿಶುವು ಶೈಲೇಶ ಮಹಾರಾಜನ ಆಸ್ಥಾನದಲ್ಲಿ ರಾಜ ಸುಖದಿಂದ ಬೆಳೆಯುತ್ತದೆ.ಆದರೆ ಆ ಯಜ್ಞ ದೇವತೆ ಒಂದು ಸೂಚನೆ ಕೊಟ್ಟಿರುತ್ತಾಳೆ. ಮಹಾರಾಜರಿಗೆ ಹೇಳುತ್ತಾಳೆ.ಈಶಿಶುವು ಪ್ರಾಪ್ತ ವಯಸ್ಸಿಗೆ ಬಂದಾಗ ಯಾವುದೇ  ಕಾರಣಕ್ಕೂ ಕಾಡಿನತ್ತ ಭೇಟಿಗಾಗಿ ಕಳಿಸಬೇಡ ಎಂದು ಈತನನ್ನು   ಬೇಟೆಗಾಗಿ ಕಳಿಸಿದರೆ ಈತನಿಗೆ ರಾಕ್ಷಸ ಪ್ರವೃತ್ತಿ ಉಂಟಾಗುತ್ತದೆ ಎಂಬ ಶಾಪವೂ ದೊರಕುತ್ತದೆ ಎಂದು  ಸೂಚನೆ ನೀಡುತ್ತಾಳೆ.

      ಅದರಂತೆ ಮಹಾರಾಜನು ಆ ಕೂಸನ್ನು ಲಾಲನೆ ಪಾಲನೆ ಮಾಡಿ ಜೋಪಾನವಾಗಿ ನೋಡಿಕೊಳ್ಳುತ್ತಾನೆ.ಒಂದು ದಿನ ಆ ಸಾಕು ಪುತ್ರನಾದ ಮಯನೂ ತನ್ನ ತಂದೆಗೆ ತಿಳಿಯದ ಹಾಗೆ ತನ್ನ ಸ್ನೇಹಿತನೊಡನೆ ಅರಣ್ಯಕ್ಕೆ ಬೇಟೆಗೆ ಹೋಗುತ್ತಾನೆ ಅಲ್ಲಿ ಮನವಿಹಾರ ಮಾಡುವಾಗ ಅಲ್ಲಿಗೆ ಒಬ್ಬ ಋಷಿಗಳು ಅಲ್ಲಿಯ ಸರೋವರದಲ್ಲಿ  ಜಲಪಾನ ಮಾಡಲು ಕುಳಿತಿರುತ್ತಾರೆ.

      ಅವರು  ಜಲಪಾನ ಮಾಡುವ ಸಂದರ್ಭದಲ್ಲಿ ಯಾವುದೋ ಪ್ರಾಣಿ ಬಂದಿರಬೇಕೆಂದು ತಿಳಿದು ಇವರ ಧರ್ಮ ಧರ್ನಬಾಣ ಪ್ರಯೋಗಿಸಿದಾಗ ಋಷಿಗಳ ಎದೆಗೆ ನೇರವಾಗಿ ತಗಲಿದಾಗ ಅವರು ತಕ್ಷಣ ಕೂಗುತ್ತಾರೆ. ಕೂಗಿದ ಸದ್ದಿಗೆ ಇಬ್ಬರೂ ಆ ಸ್ಥಳಕ್ಕೆ ಬರುತ್ತಾರೆ.ಅವರನ್ನು ನೋಡಿ ಋಷಿಗಳು ನಾನು ಯಾರೆಂಬುದನ್ನು ತಿಳಿಯದೆ ನೀನು ನನ್ನ ಮೇಲೆ ಬಾಣ ಪ್ರಯೋಗಿಳಸಿದ್ದರಿಂದ ಈ ಭೂಲೋಕದಲ್ಲಿ ರಾಕ್ಷಸನಾಗಿ ಜನಿಸು ಎಂದು ಶಾಪವನ್ನು ಕೊಡುತ್ತಾರೆ.

      ಆಗಿನಿಂದ ಅವನು ಮಾಯಾ ಎಂಬ ರಾಕ್ಷಸನಾಗಿ ಪರಿವರ್ತನೆ ಗೊಳ್ಳುತ್ತಾನೆ. ಅಂದಿನಿಂದ ಅವರು ದೇವಾನುದೇವತೆಗಳನ್ನು ಬಹಳ ಕಿರಿಕುಳದಿಂದ ಹಿಂಸೆ ಮಾಡಿ ಯಜ್ಞಘಾತಕನಾಗಿ ಸಂಚರಿಸುತ್ತಿರುತ್ತಾನೆ. ಮುಕ್ಕೋಟಿ ದೇವತೆಗಳು ಎಲ್ಲರೂ ಕೂಡಿ ತ್ರಿಮೂರ್ತಿಗಳ ದರ್ಶನವನ್ನು ಮಾಡುತ್ತಾರೆ. ಅವರೆಲ್ಲರೂ ಕೂಡ ಕೈಲಾಸದತ್ತ ಪ್ರಯಾಣ ಬೆಳೆಸುತ್ತಾರೆ.ಆಗ ಪರಮೇಶ್ವರನು ಶಿಶುವಾಗಿ ಜನಿಸಿ ಗ್ರಾಮದಿಂದ ಆತನನ್ನು ಸಂಹರಿಸುತ್ತೇನೆ ಎಂದು ಹೇಳಿ ನೀವೆಲ್ಲಾ ನಿಶ್ಚಿಂತೆಯಿಂದ ಇರಿ ಎಂದು ಆಶೀರ್ವಾದವನ್ನು ಮಾಡುತ್ತಾನೆ.

     ಅಂತೆಯೇ ಆ ರಾಕ್ಷಸನನ್ನು ಪರಮೇಶ್ವರನ್ನು ಸಿದ್ದೇಶ್ವರ ಅನ್ನ ತಕ್ಕಂತ ಹೆಸರಿನಿಂದ ಅವತರಿಸಿ ಬಾಲ ಶಿಶುವಾಗಿ ಆತನನ್ನು ಭೂ ಸಾಲಿಗ್ರಾಮದಿಂದ  ಸಂಹರಿಸುತ್ತಾನೆ. ಈ ಕ್ಷೇತ್ರದಲ್ಲಿ ಈಗಲೂ ಕೂಡ ಭೂ ಸಾಲಿಗ್ರಾಮ ಮೂರ್ತಿಯೇ ಇಲ್ಲಿ ನೆಲೆಗೊಂಡಿದೆ ಅಂತ ಆಯುಧವಾಗಿದೆ.ಆ ಸಾಲಿಗ್ರಾಮ ಅಂದು ಮಾಯಾ ರಾಕ್ಷಸನನ್ನು ಸಂಹಾರ ಮಾಡಿರುವಂತಹ ಆಯುಧವಾಗಿದೆ  ಅಂದಿನಿಂದ ಇಂದಿನವರೆಗೂ ಈ ಕ್ಷೇತ್ರವನ್ನು ಶ್ರೀ ಗಿರಿ ಸಿದ್ದೇಶ್ವರ ಕ್ಷೇತ್ರವನ್ನು ಶ್ರೀ ಗಿರಿ ಸಿದ್ದೇಶ್ವರ ಕ್ಷೇತ್ರ  ಎಂದು ಕರೆಯುತ್ತಾರೆ.

     ಈ ಪರಮೇಶ್ವರನು ಈ ಕ್ಷೇತ್ರದಿಂದ 3 km ದೂರದಲ್ಲಿ ಇರುವಂಥ ಗಿರಿಯಲ್ಲಿ ಶಿಶುವಾಗಿ ಅವತರಿಸುತ್ತಾನೆ. ಈ ಶಿಶುವಾಗಿ ಅವತರಿಸಿ ಆ ರಾಕ್ಷಸನನ್ನು ಸಂಹರಿಸುತ್ತಾನೆ.ಈಗಲೂ ಆ ಗಿರಿ ಸಿದ್ದೇಶ್ವರ ಕ್ಷೇತ್ರಕ್ಕೆ ದ್ವಿತೀಯ ಕೇದಾರ ಎಂದು ಹೇಳಲ್ಪಡುತ್ತದೆ. ಯಾರು ಕೇದಾರಕ್ಕೆ ಹೋಗಿ ಕೇದಾರನಾಥ ದರ್ಶನ ಮಾಡಲು ಸಾಧ್ಯವಾಗುವುದಿಲ್ಲವೋ ಅವರು ಈ ಗಿರಿಯ ಸಿದ್ದೇಶ್ವರ ಕ್ಷೇತ್ರದಲ್ಲಿ ಅವನ ಸಾನಿಧ್ಯವನ್ನು ದರ್ಶನ  ಮಾಡಿದರೆ ಕೇದಾರನಾಥನ ದರ್ಶನ ಮಾಡಿದಂತಹ ಪುಣ್ಯ ಲಭಿಸುತ್ತದೆ.

ಈ ಬೆಟ್ಟವನ್ನು ಹತ್ತಿದರೆ ಇಷ್ಟಾರ್ಥಗಳು ಲಭಿಸುತ್ತದೆ.ಸರ್ಪದೋಷ ಕಾಲ ಸರ್ಪದೋಷ, ಕಾಳ ಸರ್ಪದೋಷ, ಇತ್ಯಾದಿ ಅನೇಕ ಜಾತಕ ದೋಷಗಳು ನಿವಾರಣೆಯಾಗುತ್ತದೆ. ಅಂತೆಯೇ ಆ ರಾಕ್ಷಸನ ಸಂಹಾರವಾದ ತಕ್ಷಣ ರಾಕ್ಷಸ ಅವಸಾನ ಕಾಲದಲ್ಲಿ ಪರಶಿವನ ಬಳಿ ಒಂದು ಕೋರಿಕೆಯನ್ನು ಹೇಳುತ್ತಾನೆ ನನ್ನ ಒಂದು ವಂಶವಾದರೂ ಅಂಶವಾದರೂ ಈ ಗ್ರಾಮದಲ್ಲಿ ಉಳಿಯುವಂತೆ ಆಶೀರ್ವದಿಸು ಎಂದು.ಆಗ ಪರಶಿವ ಮುಂದೇ ನೀನು ಮಂತ್ರವಾದಿಯಾಗಿ ಜನಿಸಿ ನಾನು ಭೃಂಗಯಯ್ಯ ಮಂಗಳಾದೇವಿ ಎಂಬ ಮಡಿಲಲ್ಲಿ ಶಿಶುವಾಗಿ ಜನಿಸುವೆ ಎಂದು ಆಶೀರ್ವದಿಸುತ್ತಾನೆ.