ಇದು ಸುಕ್ಷೇತ್ರವು 300 ವರ್ಷ ಹಳೆಯ ದೇವಾಲಯವಾಗಿದೆ. ಈ ದೇವಿಯನ್ನು ಸಾದಳ್ಳಿ ಗುಡ್ಡೆಯಿಂದ ತಂದು ಸ್ಥಾಪನೆ ಮಾಡಿ ಸಣ್ಣ ದೇವಾಲಯವನ್ನು ನಿರ್ಮಾಣ ಮಾಡಿ ಕಾಳಿಕಾಂಬ ಎಂಬ ಹೆಸರಿನ ಪೂಜಿಸುತ್ತಿದ್ದಾರೆ.
ಸನ್ನಿಧಿಯಲ್ಲಿ ವಿಶೇಷವೇನೆಂದರೆ ಮಕ್ಕಳಿಗೂ ಮತ್ತು ಸರ್ವರಿಗೂ ಯಂತ್ರವನ್ನು ಕಟ್ಟಿದರೆ ಸರ್ವ ರೋಗ ನಿವಾರಣೆಯಾಗುತ್ತದೆ ಎಂಬ ಪ್ರತೀತಿಯಿದೆ ಭಕ್ತಾದಿಗಳು ಅವರು ಕೋರಿದ್ದನ್ನು ತಾಯಿಯ ಮುಂದೆ ಇಟ್ಟಾಗ ತಾಯಿ ಬಲಭಾಗದಿಂದ ಹೂವಿನ ಪ್ರಸಾದ ಕೊಟ್ಟರೆ ಅವರ ಕಾರ್ಯಗಳು ನೆರವೇರುತ್ತವೆ, ಗ್ರಾಮದಲ್ಲಿ ಏನೇ ತೊಂದರೆಯಾದರು, ಆ ತಾಯಿ ಕಾಪಾಡುತ್ತಾರೆ, ಈ ಕ್ಷೇತ್ರದಲ್ಲಿ ಯುಗಾದಿ ಅದರೆ ಐದು ದಿನಗಳ ನಂತರ ದೇವಿಯ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಸುತ್ತಾರೆ.