ಮನೆ ದೇವಸ್ಥಾನ ಶ್ರೀ ಕಲ್ಯಾಣ ಬಸವೇಶ್ವರ ದೇವಾಲಯ

ಶ್ರೀ ಕಲ್ಯಾಣ ಬಸವೇಶ್ವರ ದೇವಾಲಯ

0

    ಪ್ರಕೃತಿಯ ನಡುವೆ ಸುಂದರವಾದ ಜಾಗದಲ್ಲಿ ಬಸವೇಶ್ವರರು ನೆಲೆ ನಿಂತಿದ್ದಾರೆ.

Join Our Whatsapp Group

     ಬೆಂಗಳೂರು ನಿಂದ 70km ಮೈಸೂರಿನಿಂದ 70km ರಾಷ್ಟ್ರೀಯ ಹೆದ್ದಾರಿ 209 ರಿಂದ ಒಂದು ಕಿಲೋಮೀಟರ್ ಒಳಗೆ ಬಂದರೆ ಹಗಾದೂರು ಎಂಬ ಗ್ರಾಮದಲ್ಲಿ ಚೇಳರ ಕಾಲದಲ್ಲಿ ನಿರ್ಮಿತವಾದ ದೇವಾಲಯವಿದೆ.

      ಇದು ಶೀತಲಗೊಂಡ ಸಂದರ್ಭದಲ್ಲಿ ಊರಿನ ಗ್ರಾಮಸ್ಥರ ಸಹಾಯದಿಂದ ಈ ದೇವಾಲಯವನ್ನು ನವೀಕರಣ ಮಾಡಿದ್ದಾರೆ.ಹಗಾ ಎಂದರೆ ಪಾಪ ಎಂದು ಅದ್ದರಿಂದ ಪಾಪವನ್ನು ದೂರ ಮಾಡುವ ಶಕ್ತಿ ಈ ಬಸವೇಶ್ವರನಿಗೆ  ಇದೆ ಎಂದು ಹಿಂದಿನಿಂದಲೂ ಹೇಳುತ್ತಾ ಬಂದಿದ್ದಾರೆ.

      ಇಲ್ಲಿ ಒಂದು ಕಲ್ಯಾಣಿ ಇದೆ ಈ ಕಲ್ಯಾಣಿಯಲ್ಲಿ ಯಾರು ಸ್ಥಾನ ಮಾಡಿ ಬಸವೇಶ್ವರನ ಆರಾಧಿಸುತ್ತಾರೋ ಅವರ ಸಕಲ ರೋಗಗಳನ್ನು ನಿವಾರಹಣೆ ಯಾಗುತ್ತದೆ ಎಂದು ಹಿಂದಿನಿಂದಲೂ ಪ್ರತೀತಿ ಇದೆ.

     ಮತ್ತೊಂದು ವಿಶೇಷವೇನೆಂದರೆ ಬಸವೇಶ್ವರ ಸ್ವಾಮಿಯು ಇಲ್ಲಿ ಭಕ್ತರಿಗೆ ಹೂವಿನ ಪ್ರಸಾದ ಕೊಡುವ ಮುಖಾಂತರ ಅವರ ಇಷ್ಟಾರ್ಥಗಳನ್ನು ನೆರವೇರಿಸುತ್ತಿದ್ದಾನೆ.ಇಲ್ಲಿರುವ ಸುತ್ತಮುತ್ತಲಿನ ಬಡತನದಲ್ಲಿ ಇರುವ ಗ್ರಾಮಸ್ಥರು ಈ ಸನ್ನಿಧಾನದಲ್ಲಿ ಮದುವೆಗಳನ್ನು ನೆರವೇರಿಸಿಕೊಳ್ಳುತ್ತಾರೆ.

         ಈ ಊರಿನಲ್ಲಿ ಬಸವೇಶ್ವರ ದೇವಸ್ಥಾನ.ಮಾರಮ್ಮ ದೇವಸ್ಥಾನ,ರೇವಣ ಸಿದ್ದೇಶ್ವರ ದೇವಸ್ಥಾನಗಳು ಇವೆ. ಇಲ್ಲಿರುವ ಕಲ್ಯಾಣಿಗೆ ಚಾರಿತ್ರಿಕವಾದ ಇತಿಹಾಸವಿದೆ.ಈ ಕಲ್ಯಾಣಿಯನ್ನು ಊರಿನ ಮುಖ್ಯಸ್ಥರು ಮತ್ತು ಊರಿನ ಯುವಕರು ಇಂದು ಗ್ರಾಮ ಪಂಚಾಯಿತಿ  ಅಧ್ಯಕ್ಷರು ಸೇರಿ ಪುನರುರ್ಜೀವಗೊಳಿಸಿ ಮರು ಜೀವನವನ್ನು ಕೊಟ್ಟಿದ್ದಾರೆ.

    ಇತಿಹಾಸ ತಿಳಿಯುವುದಾದರೆ ಸಾವಿರ ವರ್ಷಗಳ ಹಿಂದಿನ ಒಂದು ಕಲ್ಯಾಣಿ ಒಳಗೊಂಡಿರುವ ಪ್ರದೇಶ ಬಹಳ ವಿಶಾಲವಾಗಿದೆ. ಹಲಗೂರಿನ ಎಡಭಾಗದಲ್ಲಿ ಭೀಮನ ಕಿಂಡಿ ಬೆಟ್ಟವಿದೆ. ಅದರ ಬಲಭಾಗದಲ್ಲಿ ಬಸವೇಶ್ವರ ಬೆಟ್ಟ ಮತ್ತು ಕಣಿವೆ ವಿಶಾಲವಾದ ಕಾಡು ಇದೆ.

       ಹಲಗೂರಿನ ದಕ್ಷಿಣ ಭಾಗ ವಿಶಾಲವಾದ ಕಾಡು ಕಾಡಿನ ನಡುವೆ ಹರಿಯುವ ಕಾವೇರಿ ನದಿ ಇದ್ದು ಒಂದು ಭೌಗೋಳಿಕವಾದ ರೂಪ ಎರಡೂ ಬೆಟ್ಟದ ನಡುವೆ ಒಂದು ಕಣಿವೆಯೊಳಗೆ ಹಲಗೂರು ಇದೆ.ಹಲಗೂರಿನಿಂದ ಸುಮಾರು ಎರಡು ಕಿಲೋಮೀಟರ್ ದೂರದಲ್ಲಿ ಹಾಗಾದೂರು ಎಂಬ ಒಂದು ಗ್ರಾಮವಿದೆ.

      ಈ ಗ್ರಾಮದಲ್ಲಿ ಬಸವೇಶ್ವರ ದೇವಸ್ಥಾನ ಪಕ್ಕದಲ್ಲಿ ಇರುವಂತ ಕಲ್ಯಾಣಿ ಇದೆ.ಇಷ್ಟು ದೊಡ್ಡ ವಿಶಾಲವಾದ ಚೌಕಾಕಾರವಾಗಿ ರುವಂಥ ಈ ಕಲ್ಯಾಣಿ ಒಂದು ಕಡೆಗೆ 75 ಮೀಟರ್ ಇದೆ.ನಾಲ್ಕು ಭಾಗಗಳು ಸಮನಾಗಿದ್ದು ಭೂಮಿಯ ಮೇಲ್ಮಟ್ಟದಿಂದ ಸುಮಾರು 150 ರಿಂದ 180 ಅಡಿ ಆಳವಿದೆ ಎನ್ನುವಂತದ್ದು ಕಂಡು ಬಂದಿದೆ.

   ಈ ಕಲ್ಯಾಣಿಯು ಯಾವ ಬಳಕೆ ಇಲ್ಲದೆ ಸಂಪೂರ್ಣವಾಗಿ ನಶಿಸಿಹೋಗಿತ್ತು. ಕಳೆದ ಐದು ವರ್ಷಗಳ ಈಚೆಗೆ ಸ್ಥಳೀಯರು ಇದರ ಬಗ್ಗೆ ಗಮನಹರಿಸಿ ಹಗಾ ದೂರಿನಲ್ಲಿ ಕೆಲವು ಯುವಕರು ಪ್ರಮುಖವಾಗಿ ಚರಣ್ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರು ಆದಂತಹ ಸಿದ್ದೇಗೌಡರು ಸ್ಥಳಿಯ ಪತ್ರಕರ್ತರ ಉಪನ್ಯಾಸಕರು ಹೀಗೆ ಹಲವಾರು ಮಂದಿ ಕಲ್ಯಾಣಯನ್ನು  ಪುನರ್ಜೀವನಗೊಳಿಸಲು ಪ್ರಯತ್ನ ಮಾಡಿದರು.

     ಎಲ್ಲರ ಪ್ರಯತ್ನಿಂದ ಕೊನೆಗೆ ಪಕ್ಕದ ಊರಿನ ಗ್ರಾಮದ ದಿವಂಗತ ವಿಜಯ ಗೌಡರು ಪುತ್ರರಾದ ಗುರುತೇಜ ಅವರು ಅದೇ ಊರಿನವರಾಗಿದ್ದು ಬೆಂಗಳೂರಿನಲ್ಲಿ ವಾಸವಾಗಿದ್ದರು ಅವರು ತಮ್ಮ ಊರಿನ ಕಲ್ಯಾಣಿಯ ಬಗ್ಗೆ ಮಾಹಿತಿ ತಿಳಿದು ಅದು ನಶಿಸಿ ಹೋದ ವಿಷಯವಾಗಿ ತಮ್ಮ ಕಂಪನಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಆ ಕಂಪನಿಯಿಂದ ಸಿ ಎಸ್ ಆರ್  ನಿಂದ ಕಂಪನಿಯವರು ಕಲ್ಯಾಣಿಯನ್ನು ಪುನರ್ಜೀವನಗೊಳಿಸಲು ಹಣವನ್ನು ನೀಡಿತ್ತಾರೆ.

       Collins Aero S pace Company ಅವರು ಕೊಟ್ಟಂತಹ ಹಣದಲ್ಲಿ ಚಾರಿತ್ರಿಕವಾಗಿ ಮಹತ್ವವುಳ್ಳ ಈ ಕಲ್ಯಾಣಿಯು ಬಹಳ ಸುಂದರವಾಗಿ ಮರುರೂಪ ಪಡೆದಿದೆ ಮತ್ತು ಇವರು ಶಾಸನವನ್ನು ಗಮನಿಸಿದರೆ ಇದು ಚೇಳರ ಕಾಲದಲ್ಲಿ ನಿರ್ಮಾಣವಾಗಿರುವುದು ಎಂದು ತಿಳಿಯುತ್ತದೆ.

    ಕಲ್ಯಾಣಿಯ ಬಳಿ ವೀರ ಗಲ್ಲುಗಳು ಕೂಡ ಇವೆ. ಸಾಮಂತರಾಜನು ಇಲ್ಲಿ ಲಿಂಗ ಪ್ರತಿಷ್ಠಾಪಿಸಿ ಪೂಜೆ ಮಾಡಿರಬಹುದು ಎಂಬ ಊಹೆ ಕೂಡ ಕಂಡುಬರುತ್ತದೆ. ಆದ್ದರಿಂದ ಈ ಪುಣ್ಯಕ್ಷೇತ್ರವನ್ನು ಎಲ್ಲರೂ ದರ್ಶನ ಪಡೆದು ಆ ಬಸವೇಶ್ವರನ ಕೃಪೆಗೆ ಪಾತ್ರರಾಗಬೇಕು.