ತುಮಕೂರು ಜಿಲ್ಲೆ, ಕುಣಿಗಲ್ ತಾಲ್ಲೂಕು,ಹುಲಿಯೂರುದುರ್ಗ ಹೋಬಳಿ, ಗಿಡದ ಕೆಂಚನಹಳ್ಳಿ ಶ್ರೀ ಮಹಾಕಾಳಿ ಶ್ರೀ ಮಹಾಲಕ್ಷ್ಮಿ ಶ್ರೀ ಮಹಾ ಸರಸ್ವತಿ ಸುರೂಪಿಯಾದಂತಹ ಶ್ರೀ ಕೊಲ್ಲಾಪುರದಮ್ಮ ಜಗದ್ವಖ್ಯಾದ ಆಗಿದ್ದಾಳೆ. ಈ ಕ್ಷೇತ್ರ ಗಿಡದ ಕೆಂಚನಹಳ್ಳಿಯಲ್ಲಿ ಅಮ್ಮನವರ ಪವಾಡಗಳು ಹೇಳಲು ಅಸಾಧ್ಯ ಮತ್ತು ಮಹಾ ವಿಶೇಷವಾದದ್ದು.
ಯಾವುದೇ ಒಂದು ಕೆಲಸ ಕಾರ್ಯ ಮಾಡಬೇಕಾದರೆ ಒಂದು ಸಮರ್ಪಣೆ ಮನೋಭಾವಬೇಕು. ಚಂಡಿಕಾಪಾರಮೇಶ್ವರಿ ಇಲ್ಲಿ ಪಟ್ಟಲದಮ್ಮ ಆಗಿರುವಂತಹ ದೇವಿ ಅನುಗ್ರಹ ಮಾಡಬೇಕಾದರೆ ಭಕ್ತಾದಿಗಳನ್ನು ಸೇರಿಸುವಂತೆ ಮಾಡಿ ಆ ದೇವಿ ಅನುಗ್ರಹವನ್ನು ಅವರಿಗೆ ತಲುಪಿಸುವಂತಹ ಒಬ್ಬ ಮಾರ್ಗದರ್ಶಕರಾಗಿ ಶ್ರೀಯುತ ಶಂಕರ್ ಅವರು ಇಲ್ಲಿ ಬಹಳ ಸೇವೆ ಮಾಡಿದ್ದಾರೆ
ಶ್ರೀಯುತ ಶಂಕರ್ ಅವರೇ ಅನುಗ್ರಹವಾದ ಮೇಲೆ ತಮ್ಮ ಪರಿಪೂರ್ಣ ಜೀವನವನ್ನು ಲೌಕಿಕ ಜೀವನವನ್ನು ತ್ಯಾಗ ಮಾಡಿ ಚಿಕ್ಕದಾದ ಒಂದು ಹುತ್ತದಲ್ಲಿ ಆವಿರ್ಭೊತವಾಗಿ ಉದ್ಭವಿಸಿದ ದೇವಿಯನ್ನು ಆರಂಭದಲ್ಲಿ ಚಿಕ್ಕದಾಗಿ ದೇವಿಯ ಸೇವೆಯನ್ನು ನಡೆಸುತ್ತಾ ಬಂದರು. ಆನಂತರ ಈಗ ದೊಡ್ಡದಾಗಿ ಬೆಳೆದಂತ ಕ್ಷೇತ್ರಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ. ಎಂತಹದೇ ಕಷ್ಟಕಾರ್ಪಣ್ಯಗಳು ಬಂದರು ದೇವಿಯ ಬಳಿ ಬಂದು ಶರಣಾಗತರಾದರೆ ಕಷ್ಟಕಾರ್ಪಣ್ಯಗಳು ದೂರವಾಗುತ್ತದೆ.ಅಂಥ ದಿವ್ಯ ಕ್ಷೇತ್ರ ಇದು.
ಒಳ್ಳೆಯ ಪರಿಸರದಲ್ಲಿ ತಾಯಿ ನೆಲೆನಿಂದ್ದಾಳೆ ಪ್ರತಿ ಅಮಾವಾಸ್ಯೆ ಹುಣ್ಣಿಮೆಯಂದು ಅಮ್ಮನವರಿಗೆ ಬಹಳ ವಿಶೇಷ ಪೂಜೆಯನ್ನು ಮಾಡುತ್ತಾರೆ. ಕೊಲ್ಲಾಪುರದಮ್ಮ ಪಟ್ಟಣದಮ್ಮ ಸುಬ್ರಮಣ್ಯೇಶ್ವರರು ಇವರು ಈ ಮಹಾ ಕ್ಷೇತ್ರದಲ್ಲಿ ಸಾವಿರಾರು ಜನಕ್ಕೆ ಅನ್ನದಾಸೋಹ ನಡೆಯುತ್ತದೆ.ಗೋಶಾಲೆಯು ಇದೆ. ಇಲ್ಲಿ ಜಾತಿ ಭೇದವಿಲ್ಲದೆ ಬಂದ ಎಲ್ಲಾ ಭಕ್ತಾದಿಗಳಿಗೂ ಅನ್ನದಾನ ನಡೆಯುತ್ತದೆ. ಹಾಗೆ ಈ ಕ್ಷೇತ್ರದಲ್ಲಿ ಕೊಂಡೋತ್ಸವ, ಜಾತ್ರಾ ಮಹೋತ್ಸವ ಸಮಾರಂಭಗಳನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.
ಮತ್ತೆ ಈ ಕ್ಷೇತ್ರದಲ್ಲಿ ವಿಶೇಷವಾದ ಮತ್ತು ವಿಶಾಲವಾದ ಕಲ್ಯಾಣ ಮಂಟಪವಿದ್ದು, ಶುಭ ಕಾರ್ಯಗಳನ್ನು ಮಾಡಲು ಬರುವವರಿಗೆ ಅತಿ ಕಡಿಮೆ ವೆಚ್ಚದಲ್ಲಿ ಎಲ್ಲ ಸೌಕರ್ಯಗಳು ಕೂಡ ಇಲ್ಲಿವೆ. ಈ ಕಲ್ಯಾಣ ಮಂಟಪದ ಪಕ್ಕದಲ್ಲೇ ಒಂದು ಕಲ್ಯಾಣಿ ಇದೆ.
ಈ ಕ್ಷೇತ್ರದಲ್ಲಿ ಶ್ರೀ ಶಿವನನ್ನು ಕೂಡ ನಾವು ದರ್ಶನ ಮಾಡಬಹುದು, ಭಕ್ತರು ಯಾವ ಸಮಯದಲ್ಲಿ ಬಂದರೂ ಕೂಡ ಅನ್ನದಾಸೋಹ ವ್ಯವಸ್ಥೆ ಇರುತ್ತದೆ. ಹಾಗೆಯೇ ಈ ಕ್ಷೇತ್ರದ ಮತ್ತೊಂದು ವಿಶೇಷತೆ ಏನೆಂದರೆ ಈ ಕ್ಷೇತ್ರದಲ್ಲಿ ನಡೆದಾಡುವ ದೇವರು ಎಂದೇ ಹೆಸರುವಾಸಿಯಾಗಿರುವ ಬಸವಣ್ಣನವರು ನೆಲೆಸಿರುವ ಪುಣ್ಯ ಕ್ಷೇತ್ರವೂ ಹೌದು. ತಾಯಂದಿರ ಆಶೀರ್ವಾದದಿಂದ ನೆಲೆಸಿರುವ ಈ ಬಸವಣ್ಣನಿಗೆ ವಿಶೇಷವಾದ ಶಕ್ತಿ ಇದೆ. ಬರುವಂತ ಭಕ್ತಾದಿಗಳ ಕಷ್ಟಗಳನ್ನು ದೂರ ಮಾಡಲು ತನ್ನ ಪವಿತ್ರವಾದ ಪಾದಗಳನ್ನು ನೀಡುವುದರ ಮುಖಾಂತರ ಮತ್ತು ಭಕ್ತಾದಿಗಳನ್ನು ದಾಟುವುದರ ಮುಖಾಂತರ ಎಲ್ಲ ಕಷ್ಟಗಳನ್ನು ದೂರ ಮಾಡುತ್ತಿದ್ದಾನೆ ರೆ ಈ ಭಗವಂತ.