ಮನೆ ದೇವಸ್ಥಾನ ಶ್ರೀ ಮಂಟೇಸ್ವಾಮಿ ಸನ್ನಿಧಿ

ಶ್ರೀ ಮಂಟೇಸ್ವಾಮಿ ಸನ್ನಿಧಿ

0

     ಇದು ಗುರುವಿನ ಪುಣ್ಯಕ್ಷೇತ್ರ ಅಲ್ಲಮ ಪ್ರಭುಗಳ ಪ್ರತಿರೂಪವಾಗಿ ದಕ್ಷಿಣ ಪ್ರಾಂತ್ಯದಲ್ಲಿ ಮಂಟೆಸ್ವಾಮಿ ಎಂಬ ಹೆಸರಿನಿಂದ  ಶ್ರೀ ಗುರುಗಳು ಈ ಕ್ಷೇತ್ರದಲ್ಲಿ ಒಂದಿಷ್ಟು ಕ್ರಾಂತಿಯನ್ನು ಮಾಡುವಂಥದ್ದು, ಇವರು ಮಹಾನ್ ಪವಾಡ ಪುರುಷರು.

Join Our Whatsapp Group

      ಶ್ರೀ ಶ್ರೀ ಜ್ಞಾನಾನಂದ ಚನ್ನರಾಜ ಅರಸು ಸ್ವಾಮಿಗಳು 5ನೆಯ ತಲೆಮಾರಿನ ಸ್ವಾಮಿಜಿ 1991 1992ರಲ್ಲಿ ಇವರಿಗೆ ಪಟ್ಟಾಭಿಷೇಕ ನಡೆದು ಪೀಠವನ್ನು ಅಲಂಕರಿಸಿದರು ಅಂದಿನಿಂದ ಇವರು ಈ ಮಠದ ಕರ್ತವ್ಯವನ್ನು ನಿರ್ವಹಿಸುತ್ತಾ ಬಂದಿದ್ದಾರೆ.ಧರೆಗೆ ದೊಡ್ಡವರಾದ ಶ್ರೀ ಮಂಟೇಸ್ವಾಮಿಯವರು ಉತ್ತರ ಭಾಗದಿಂದ ದಕ್ಷಿಣ ಭಾಗಕ್ಕೆ ಬಂದರು.

      ಕಲ್ಯಾಣ ಪಟ್ಟಣದಲ್ಲಿ ಬಸಪ್ಪನ ಆಸ್ಥಾನದಲ್ಲಿ ಇವರು ಇರುತ್ತಾರೆ ಇವರಿಗೆ ಧರೆಗೆ ದೊಡ್ಡವರು ಎಂಬ ಬಿರುದು ಹೇಗೆ ಬಂದಿತೆಂದರೆ, ಕಲ್ಯಾಣದಲ್ಲಿ ಶೂನ್ಯ ಪೀಠ ಎಂಬ ಮಹತ್ತರವಾದ ದೊಡ್ಡ ಮೂಲ ಪೀಠವಿರುತ್ತದೆ ಪೀಠದ ಮೇಲೆ ಕುಳಿತು ನ್ಯಾಯವನ್ನು ಹೇಳತಕ್ಕಂಥ ವಿಚಾರಗಳನ್ನು ಅಲ್ಲಿ ಕಲ್ಯಾಣ ಪಟ್ಟಪದ ಒಂದು ನಿಯಮ.

      ಅಲ್ಲಿ ಬಸಪ್ಪನವರು ಕೂತು ನ್ಯಾಯ ಹೇಳಬೇಕಾದರೆ ಅವರ ಮನಸ್ಸಿಗೂ ನನಗೂ ನ್ಯಾಯ ಹೇಳುವ ಅರ್ಹತೆ ಇಲ್ಲ ಎಂದು ಅಲ್ಲಿರುವಂಥ ಕೋಟ್ಯಾಂತರ ಗಣಂಗಳು ಮತ್ತು ಶರಣರನ್ನು ಕೇಳುತ್ತಾರೆ ಪ್ರಥಮವಾಗಿ ಅಲ್ಲಮ ಪ್ರಭುಗಳ ರೂಪದಲ್ಲಿ ಬಂದು ಮಂಟೇಸ್ವಾಮಿಗಳು ಒಂದು ಮೂಲೆಯಲ್ಲಿ ಕುಳಿತಿರುತ್ತಾರೆ.

      ಇವರ ಹತ್ತಿರ ಬಂದಾಗ ಬಸಣ್ಣವರಿಗೆ ಅವರ ಮುಖದಲ್ಲಿ ದಿವ್ಯ ಪ್ರಭೆ ಮತ್ತು ಜ್ಯೋತಿ ಕಾಣಿಸುತ್ತದೆ ಆಗ ಇವರೇ ಸರಿ ನ್ಯಾಯ ಹೇಳಲು ಎಂದು ಅವರನ್ನು ಆ ಪೀಠದ ಕೂಡಿಸುತ್ತಾರೆ ಆ ನ್ಯಾಯ ಪೀಠದಲ್ಲಿ ಕೂಡಿಸಿ ಶ್ರೀಮಂಟೇಸ್ವಾಮಿಯವರನ್ನು ಧರೆಗೆ ದೊಡ್ಡವರು ಎಂದು ಕೋಟ್ಯಾಂತರ ಗಣಂಗಳ ಸಮೇತ ಬಸವಣ್ಣನವರು ಹೇಳುತ್ತಾರೆ.

       ಈ ಪೀಠ ಧರೆಗೆ ದೊಡ್ಡದು ಈ ಪೀಠದಲ್ಲಿ ಕುಳಿತು ನ್ಯಾಯವನ್ನು ಹೇಳತಕ್ಕಂಥ ವಿಚಾರ ಇವರಿಗೆ ಇದೆ ಅನ್ನುವ ಭಾವನೆ ವ್ಯಕ್ತಪಡಿಸಿ ಆ ಪೀಠದ ಮೇಲೆ ಕುಳಿತು ನ್ಯಾಯ ಹೇಳುವಂತ ವ್ಯಕ್ತಿಗೆ ಧರೆಗೆ ದೊಡ್ಡವರು ಎಂದು ನಾಮಕರಣ ಮಾಡುತ್ತಾರೆ.

      ಅದು ನಮ್ಮ ಶ್ರೀಮಂಟೇಸ್ವಾಮಿಯವರಿಗೆ ಧರೆಗೆ ದೊಡ್ಡವರು ಎಂಬ ನಾಮಕರಣವಾಗಿ ಉಳಿಯುತ್ತದೆ. ಅನಂತರ ಅವರು ಕಲ್ಯಾಣದ ಕ್ರಾಂತಿಯ ನಂತರ ತಮ್ಮ ನೆಲೆಗಾಗಿ ಹೊರಡುತ್ತಾರೆ ದಕ್ಷಿಣ ಭಾಗಕ್ಕೆ ಬರುವಾಗ  ಕಂದಾಯವನ್ನು ಎತ್ತಿಕೊಂಡು ಹೊರಡುತ್ತಾರೆ. ಅವರು ಎಲ್ಲೆಲ್ಲಿ ಯಾವ ರೂಪದಲ್ಲಿ ಭಕ್ತರಿಗೆ ಕಾಣಿಸಿಕೊಂಡರು ಆ ರೂಪದಲ್ಲಿ ಅವರಿಗೆ ನಾಮದೇಯ ಕೊಡುತ್ತ ಹೋಗುತ್ತಾರೆ.

      ಜ್ಯೋತಿರ್ಲಿಂಗಯ್ಯ, ಲಿಂಗಯ್ಯ, ಹಾಗೆ ಪರಮ ಜ್ಯೋತಿರ್ಲಿಂಗಯ್ಯ ಹೀಗೆ ಬಿರುದುಗಳನ್ನು ಹೊತ್ತು ಮುಂದೆ ಈ ಗ್ರಾಮಕ್ಕೆ ಬರುತ್ತಾರೆ. ಆ ಸಮಯದಲ್ಲಿ ಆ ಗ್ರಾಮದಲ್ಲಿ ಬಪ್ಪೇಗೌಡ ಎಂಬ ಒಬ್ಬ ವ್ಯಕ್ತಿ  ಊರನ್ನು ಆಳುತ್ತಿರುತ್ತಾನೆ. ಚಿಕ್ಕದಾದ ಗ್ರಾಮಕ್ಕೆ  ಬಂದು ಅವರ ಲೀಲೆ ಮತ್ತು ಪವಾಡಗಳನ್ನು ತೋರಿಸುತ್ತಾರೆ.

       ಆಗ ಈ ಗ್ರಾಮಕ್ಕೆ ವರಪುರಾ ಎಂಬ ಹೆಸರಿತ್ತು ಈ ಗ್ರಾಮಕ್ಕೆ ಬಂದ ಸ್ವಾಮಿಗಳು ಆ ವ್ಯಕ್ತಿಯನ್ನು ತಾವು ನೆಲೆಗೊಳ್ಳಲು ಇಲ್ಲಿ ಸ್ಥಳವನ್ನು ಕೇಳುತ್ತಾರೆ ಆಗ ಬೋಪ್ಪೆಗೌಡನ ಸ್ಥಳವನ್ನು ಕೊಡಲು ನಿರಾಕರಿಸುತ್ತಾನೆ.ನಂತರ ಸ್ವಾಮಿಗಳು ಅವನಿಗೆ ತಮ್ಮ ಪವಾಡಗಳನ್ನು ತೋರಿಸುತ್ತಾರೆ.

        ಅದಾದ ನಂತರ ಬೋಪ್ಪೆ ಗೌಡನು  ಆ ಸ್ವಾಮಿಗೆ ಶರಣು ಹೋಗಿ ದೈವಿ ಪುರುಷರು ಇವರು ಜಂಗಮರಲ್ಲ ಎಂದು ತಿಳಿದ ಸ್ಥಳವನ್ನು ಕೊಡುತ್ತಾನೆ. ಅದು ವರಪುರಾ ಇದ್ದದ್ದು ಒಪ್ಪಿಕೊಂಡು ಪುರವಾಗಿ ನಂತರ ಬೊಪ್ಪೇಗೌಡನ ಪುರವಾಗಿ ನಿಂತಿತು ಈ ರೀತಿ ಮೂರು ಹೆಸರಿನಿಂದ ಕೂಡಿದೆ ಈ ಗ್ರಾಮ.

     ಜನ ಒಂದು ಸ್ಥಾನದಲ್ಲಿ ಆಳುತ್ತಿದ್ದರಿಂದ ರಾಜ ಬೋಪ್ಪೇಗೌಡನಪುರ ಎಂದು ಹೆಸರಾಯಿತು.ಅನೇಕ ಭಕ್ತರು ಬಂದು ಪೂಜೆಯನ್ನು ಮಾಡಿ ತಮ್ಮ ಕಷ್ಟವನ್ನು ಸ್ವಾಮಿಯಲ್ಲಿ ನಿವೇದನೆ ಮಾಡಿಕೊಂಡು ಅದರಿಂದ ಅವರಿಗೆ ಎಲ್ಲಾ ರೀತಿಯಿಂದ ಒಳ್ಳೆಯದಾಗಿದೆ.

      ಇಲ್ಲಿ ವರ್ಷಕ್ಕೊಮ್ಮೆ ಜಾತ್ರೆ ನಡೆಯುತ್ತದೆ.ಮೊದಲನೇ ಜಾತ್ರೆ ಚಿಕ್ಕಲೂರಿನಲ್ಲಿ ನಡೆಯುತ್ತದೆ ಎರಡನೆಯದು  ಕಪಡಿ ಜಾತ್ರೆ ಮೂರನೆಯದು ದೊಡ್ಡಮ್ಮತಾಯಿ ಒಂದು ದಿನದ ಜಾತ್ರೆ ಗುಟ್ಟಳ್ಳಿ ತೊಪ್ಪಿನಲ್ಲಿ ನಡೆಯುತ್ತದೆ ರಾಜ ಬೋಪ್ಪಗೌಡನಪುರದಲ್ಲಿ 15 ರಿಂದ 20 ದಿನ ನಡೆಯುತ್ತದೆ ಲಕ್ಷಾಂತರ ಭಕ್ತರು ಬರುತ್ತಾರೆ ಸ್ವಾಮಿಯನ್ನು ಆರಾಧನೆ ಮಾಡಿ ಮತ್ತೆ ತಮ್ಮ ಗ್ರಾಮಗಳಲ್ಲಿ ತೆರಳುತ್ತಾನೆ.

     ಪೂರ್ಣಿಮೆ ಅಮಾವಾಸ್ಯೆಗಳೆಂದು ವಿಶೇಷ ಅಲಂಕಾರ ಪೂಜೆ ನಡೆಯುತ್ತದೆ.ಶ್ರೀ ಮಂಟೇಸ್ವಾಮಿಯವರಿಗೆ ನಾಲ್ಕು ಜನ ಶಿಷ್ಯರು ಇರುತ್ತಾರೆ ರಾಜಪ್ಪಾಜಿಯವರು ಗಣಶೀಲ ಸಿದ್ದಪ್ಪಜಿಯವರು ಮಾತೃಶ್ರೀ ದೊಡ್ಡಮ್ಮನವರು ಮಾತೃಶ್ರೀ ಶ್ರೀ ಚೆನ್ನಮ್ಮ ತಾಯಿಯವರು, ಶ್ರೀ ಮಂಟೇಸ್ವಾಮಿಯವರು ಸಮಾಧಿಗಾಗಿ ಒಪ್ಪಿಕೊಂಡಿರುವ ಪುರದಲ್ಲಿ ನೆಲೆಗೊಂಡಿದ್ದಾರೆ

      ಇಲ್ಲಿನ ಮೂಲ ಪುರುಷರು ಚನ್ನರಾಜ ಅರಸ್, ಬಿ.ರಾಜಾ ಅರಸ್, ಬಿ,ಎಸ್, ರಾಜ್ಯ ಅರಸ್, ಬಿ ಆರ್ ಸಿದ್ದಲಿಂಗ ಎಸ್ ಎಂಬುವವರ ಮೊದಲನೆಯ ಪುತ್ರ ರಾದಂತಹ ಶ್ರೀ ಜ್ಞಾನನಂದ ಚೆನ್ನ ರಾಜಅರಸ್ ಸ್ವಾಮಿಗಳು ಇಗ ಪೀಠವನ್ನು ಅಲಂಕರಿಸಿ ಕ್ಷೇತ್ರದ ಚಟುವಟಿಕೆಗಳನ್ನು ನೆರವೇರಿಸಿಕೊಂಡು ಬಂದಿದ್ದಾರೆ.