ಮನೆ ರಾಜ್ಯ ಬಾಂಗ್ಲಾ ಹಿಂದೂಗಳ ಮೇಲಿನ ದೌರ್ಜನ್ಯಕ್ಕೆ ಶ್ರೀರಾಮ ಸೇನೆ ಖಂಡನೆ

ಬಾಂಗ್ಲಾ ಹಿಂದೂಗಳ ಮೇಲಿನ ದೌರ್ಜನ್ಯಕ್ಕೆ ಶ್ರೀರಾಮ ಸೇನೆ ಖಂಡನೆ

0

ಬೆಂಗಳೂರು: ಕರ್ನಾಟಕದಲ್ಲಿರುವ ಅಕ್ರಮ‌ ಬಾಂಗ್ಲಾ ನುಸುಳುಕೋರರನ್ನು ಹೆಮ್ಮೆಟ್ಟಿಸುವಂತೆ ನಗರ ಪೊಲೀಸ್ ಆಯುಕ್ತರಿಗೆ ಶ್ರೀರಾಮಸೇನೆಯ ಮುಖಂಡ ಪ್ರಮೋದ್ ಮುತಾಲಿಕ್ ಮನವಿ ಮಾಡಿದ್ದಾರೆ.

Join Our Whatsapp Group

ನಗರದಲ್ಲಿ ಅಕ್ರಮವಾಗಿ ಬಾಂಗ್ಲಾ ನುಸುಳುಕೋರರು ನೆಲಸಿರುವ ಬಗ್ಗೆ ಈಗಾಗಲೇ ಪೊಲೀಸರಿಗೂ ಮಾಹಿತಿ ಇದೆ. ಹಾಗಾಗಿ ಅಕ್ರಮ ವಲಸಿಗರ ಮೇಲೆ ದಾಳಿ ಕೂಡ ನಡೆದು ಕೆಲವರನ್ನು ವಾಪಸ್ಸು ಕಳುಹಿಸಲಾಗಿದೆ. ಆದರೆ ಈಗ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಗಲಭೆ ಹಾಗು ಹಿಂದೂಗಳ ಹತ್ಯೆಯಿಂದಾಗಿ ಈ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ.

ಶ್ರೀರಾಮಸೇನೆಯ ಮುಖಂಡ ಪ್ರಮೋದ್ ಮುತಾಲಿಕ್ ಅವರು ಪೊಲೀಸ್ ಆಯುಕ್ತ ಬಿ ದಯಾನಂದ್ ಅವರನ್ನ ಭೇಟಿ ಮಾಡಿ ನಗರದಲ್ಲಿ ಅಕ್ರಮವಾಗಿ ನೆಲಸಿರುವ ಅಕ್ರಮ ಬಾಂಗ್ಲಾ ವಲಸಿಗರು ಹಾಗೂ ಬರ್ಮಾ‌ ರೋಹಿಂಗ್ಯಾ ಮುಸ್ಲಿಮರನ್ನು ಕರ್ನಾಟಕದಿಂದ ಕಳುಹಿಸಬೇಕು ಎಂದು ಆಗ್ರಹಿಸಿ ದೂರು ನೀಡಿದ್ದಾರೆ.

ಅಷ್ಟೇ ಅಲ್ಲ ಬೆಂಗಳೂರಲ್ಲಿ 4 ರಿಂದ 5 ಲಕ್ಷ ಅಕ್ರಮ ಬಾಂಗ್ಲಾ ವಲಸಿಗರು ಹಾಗೂ ರೋಹಿಂಗ್ಯಾ ಮುಸ್ಲಿಮರು ಇದ್ದಾರೆ. ಅದರ ಮಾಹಿತಿಯನ್ನು ನಾವೇ ಪೊಲೀಸರಿಗೆ ನೀಡ್ತಿವಿ ಎಂದು ಶ್ರೀರಾಮಸೇನೆ ಹೇಳಿದೆ.

ಇನ್ನೂ ಇದೇ ಬಾಂಗ್ಲಾದಲ್ಲಿ ಮೀಸಲಾತಿ ವಿಚಾರಕ್ಕೆ ದಂಗೆ ನಡೀತಿದೆ. ಈ ವೇಳೆ ಹಿಂದೂಗಳ ಹತ್ಯೆ ಕೂಡ ಆಗ್ತಿದೆ. ದೇವಸ್ಥಾನಗಳ ಮೇಲೆ ಕೂಡ ದಾಳಿ ನಡೀತಿದೆ. ಅಂತಹ ರೋಹಿಂಗ್ಯಾಗಳನ್ನ ಇಲ್ಲಿ ಸ್ಥಾನ ನೀಡಲಾಗ್ತಿದೆ ಎಂದು ಆರೋಪಿಸಲಾಗಿದೆ. ಇದೇ ವೇಳೆ ಎಂಪಿ. ಎಂಎಲ್​ಎ ಕ್ಷೇತ್ರದಲ್ಲಿ ರೋಹಿಂಗ್ಯಾ ಮುಸಲ್ಮಾನರಿಗೆ ಸ್ಥಳೀಯ ದಾಖಲಾತಿ ನೀಡಲಾಗ್ತಿದೆ. ಅಷ್ಟೆ ಅಲ್ಲದೆ ಚಾಮರಾಜಪೇಟೆಯಲ್ಲಿ ಒಟ್ಟು ಒಂದು ಲಕ್ಷ ರೋಹಿಂಗ್ಯಾ ಮುಸಲ್ಮಾನರಿದ್ದಾರೆಂದು ಆರೋಪ ಮಾಡಲಾಗಿದೆ. ಪೊಲೀಸರ ಮೇಲೆ ಆರೋಪ ಮಾಡಿರುವ ಪ್ರಮೋದ್ ಮುತಾಲಿಕ್ ಅವರು ಪೊಲೀಸರು ಪೋಸ್ಟಿಂಗ್ ಗೆಲ್ಲ ರಾಜಕಾರಣಿಗಳ ಜೊತೆ ಕೆಲಸ ಮಾಡಬಾರದು ಎಂದು ಹೇಳಿಕೆ ನೀಡಿದ್ದಾರೆ. ಇನ್ನು ಪೊಲೀಸರು ಕ್ರಮ ಕೈಗೊಳ್ಳದೆ ಇದ್ದರೆ ನಾವೇ ಒದ್ದು ಓಡಿಸ್ತಿವಿ ಎಂದು ಎಚ್ಚರಿಕೆ ನೀಡಿದ್ದಾರೆ.

ಸದ್ಯ ಈ ಹಿಂದೆ ಪೊಲೀಸ್ ಆಪರೇಷನ್​ನಲ್ಲಿ ಕೂಡ ಸಾಕಷ್ಟು ರೋಹಿಂಗ್ಯಾ ಮುಸಲ್ಮಾನರು ಅಕ್ರಮವಾಗಿ ನೆಲಸಿರುವುದು ಬೆಳಕಿಗೆ ಬಂದಿತ್ತು. ಇದೀಗ ಮತ್ತೆ ಅದೇ ವಿಚಾರ ಮುನ್ಮಲೆಗೆ ಬಂದಿದ್ದು ಪೊಲೀಸರು ಯಾವ ಕ್ರಮ ಕೈಗೊಳ್ಳುತ್ತಾರೆಂದ ಕಾದು ನೋಡಬೇಕಿದೆ.