ಮೈಸೂರು(Mysuru): ಇಂದು ವಿದ್ಯಾರಣ್ಯಪುರಂ ನಲ್ಲಿರುವ ಶಾಸಕರ ಕಛೇರಿಯಯಲ್ಲಿ ಶ್ರೀ ಶಂಕರಾಚಾರ್ಯರ ಹಾಗೂ ರಾಮಾನುಜಾಚಾರ್ಯ ಜಯಂತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು
ಆಚಾರ್ಯತ್ರಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಹಾಗೂ ವೇದಘೋಷದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಎಸ್.ಎ.ರಾಮದಾಸ್, ಕೇವಲ 32 ವರ್ಷಗಳ ಕಾಲ ಇದ್ದ ಶ್ರೀ ಶಂಕರರು ಸಮಾಜಕ್ಕೆ ಆಘಾದವಾದ ಕೊಡುಗೆಯನ್ನು ನೀಡಿದ್ದಾರೆ. ಕಾಲಟಿಯಿಂದ ಕಾಶ್ಮೀರದವರೆಗೆ 2 ಸಲ ಕಾಲ್ನಡಿಗೆಯಲ್ಲಿ ಪರ್ಯಟನೆ ಮಾಡಿ ಸನಾತನ ಧರ್ಮಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ತಮ್ಮ ಚಿಕ್ಕವಯಸ್ಸಿನಲ್ಲಿಯೇ ವಿಷ್ಣುಸಹಸ್ರನಾಮ ಸೇರಿದಂತೆ ಅನೇಕ ಗ್ರಂಥಗಳಿಗೆ ಭಾಷ್ಯವನ್ನು ಬರೆಯುತ್ತಾರೆ. ಇಂತಹ ಮಹಾತ್ಮರ ದಿನದಂದು ನಾವು ಸಮಾಜದ ಮಧ್ಯೆ ನೆಲಸಿ ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ಸೇವೆ ಮಾಡುತ್ತಿರುವವರಿಗೆ ಸನ್ಮಾನ ಮಾಡುತ್ತಿರುವುದು ಅತ್ಯಂತ ಸಂತಸ ತಂದಿದೆ ಎಂದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಶ್ರೀ ಎಂ.ಆರ್.ಬಾಲಕೃಷ್ಣ ( ಸೇವೆ) , ಶ್ರೀ ಹರಿ ( ಯೋಗ ಕ್ಷೇತ್ರ), ಶ್ರೀಮತಿ ಡಾ.ಲಕ್ಷ್ಮೀ( ವೈದ್ಯಕೀಯ ಕ್ಷೇತ್ರ) , ಪದ್ಮಶ್ರೀ ಶ್ರೀಮತಿ ಜಯಲಕ್ಷ್ಮೀ ಸಂಪತ್ ಕುಮಾರ್ (ಪತ್ರಿಕೋದ್ಯಮ), ಶ್ರೀ ಹೆಚ್ ವಿ ರಾಜೀವ್ (ರಾಜಕೀಯ), ಶ್ರೀಮತಿ ದೀಪಿಕಾ ಪಾಂಡುರಂಗಿ ( ಕಲಾ ಕ್ಷೇತ್ರ),ಶ್ರೀ ಸುಬ್ರಾಯರು, ಶ್ರೀಮತಿ ಅನುಪಮ(ಶಿಕ್ಷಣ), ಶ್ರೀ ಪ್ರಸನ್ನ(ವೈದ್ಯಕೀಯ), ಶ್ರೀ ಅಚ್ಯುತ್ ರಾವ್ (ಸಮಾಜ ಸೇವೆ) , ಶ್ರೀ ಪೈಲ್ವಾನ್ ಪ್ರಹ್ಲಾದ (ಸಂಗೀತ) , ಶ್ರೀ ವಿಶ್ವನಾಥ್ , ಶ್ರೀಮತಿ ಕೃಪಾ ಫಡ್ಖೆ ( ಕಲಾ) , ಶ್ರೀ ಸಾಂಭವ ಮೂರ್ತಿ, ಕುಮಾರಿ ಶಿಲ್ಪ, ಶ್ರೀ ಕುಮಾರ್( ಆಧ್ಯಾತ್ಮ). ರವರುಗಳಿಗೆ ಸನ್ಮಾನಿಸಲಾಯಿತು.
ಸದರಿ ಕಾರ್ಯಕ್ರಮದಲ್ಲಿ ಬಿಜೆಪಿ ಕೆ.ಆರ್.ಕ್ಷೇತ್ರದ ಅಧ್ಯಕ್ಷ ಎಂ.ವಡಿವೇಲು, ಪ್ರಧಾನಾ ಕಾರ್ಯದರ್ಶಿ ಓಂ ಶ್ರೀನಿವಾಸ್, ನಾಗೇಂದ್ರ ಕುಮಾರ್, ಮೂಡಾ ಅಧ್ಯಕ್ಷರಾದ ಹೆಚ್ ವಿ ರಾಜೀವ್, ಮೈಸೂರು ನಗರ ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ.ಟಿ. ಪ್ರಕಾಶ್, ನಗರಪಾಲಿಕಾ ಸದಸ್ಯರಾದ ಮಾವಿ ರಾಮಪ್ರಸಾದ್, ಬಿ.ವಿ.ಮಂಜುನಾಥ್, ಶ್ರೀಮತಿ ಶಾಂತಮ್ಮ ವಡಿವೇಲು, ಶ್ರೀಮತಿ ಸೌಮ್ಯ ಉಮೇಶ್, ಬಿ.ಎಲ್.ಎ 2 ಪ್ರಸಾದ್ ಬಾಬು, ಪ್ರಮುಖರಾದ ರವಿ, ಶಿವಪ್ಪ, ಪ್ರದೀಪ್ ಪ್ರಸಾದ್, ಅಕ್ಷಯ್, ನಾಗಶಂಕರ್ ಇನ್ನಿತರರು ಉಪಸ್ಥಿತರಿದ್ದರು.