ಮನೆ ದೇವಸ್ಥಾನ ಶ್ರೀ ಸಿದ್ದರಾಮೇಶ್ವರ ಬೆಟ್ಟ

ಶ್ರೀ ಸಿದ್ದರಾಮೇಶ್ವರ ಬೆಟ್ಟ

0

    1200 ವರ್ಷಗಳ ಚೋಳರ ಕಾಲದ ದೇವಸ್ಥಾನವಿದು ಈ ಬೆಟ್ಟದಲ್ಲಿ ಸಿದ್ದರು ವಾಸವಾಗಿದ್ದು ಲಿಂಗವನ್ನು ಪ್ರತಿಷ್ಠಾಪಿಸಿ ಪೂಜಿಸುತ್ತಿದ್ದರು ಆದ್ದರಿಂದ ಈ ಬೆಟ್ಟವನ್ನು ಸಿದ್ದರಾಮೇಶ್ವರ ಬೆಟ್ಟ ಇಂದು ಪ್ರಸಿದ್ಧಿಯಾಗಿದೆ. ಕಾರ್ತಿಕ ಮಾಸ,ಶ್ರಾವಣ ಮಾಸ, ಮಹಾಶಿವರಾತ್ರಿಯಂದು ಈ ಬೆಟ್ಟದಲ್ಲಿ ನೆಲೆಸಿರುವಂಥ ಸಿದ್ಧರಾಮೇಶ್ವರ ವಿಶೇಷವಾದ ಅಭಿಷೇಕ ಪೂಜೆ ನಡೆಯುತ್ತದೆ. ಈ ಬೆಟ್ಟದಲ್ಲಿ ಎರಡು ಕಲ್ಯಾಣಿಗಳು ಬಹಳ ಪ್ರಸಿದ್ಧ ಹೊಂದಿದೆ.

Join Our Whatsapp Group

     ಬಹಳ ದಿನಗಳ ಹಿಂದೆ ಮಕ್ಕಳು ಇಲ್ಲದವರು ಮಕ್ಕಳು ಅಂದರೆ ಕಲ್ಯಾಣಿಗೆ ಸಮರ್ಪಿಸುತ್ತೇವೆ ಎಂದು ಹರಕೆ ಹೊತ್ತರೆ ಮಕ್ಕಳಾಗುತ್ತಿತ್ತು ಎಂದು ಇಲ್ಲಿನ ಪ್ರತೀತಿ.

      ಹಾಗೆ ಅವರಿಗೆ ಸಂತಾನ ಭಾಗ್ಯ ಲಭಿಸುತ್ತಿತ್ತು ಅವರು ಹರಕೆಯ ಪ್ರಕಾರ ಮಗುವನ್ನು ಕಲ್ಯಾಣಿ ಒಳಗೆ ಬಿಟ್ಟರೆ ಅದು ಮತ್ತೊಂದು ಕಡೆಯಿಂದ ಹೊರಗೆ ಬರುತ್ತಿತೆಂದು ಊರಿನ ಹಿರಿಯರು ಹೇಳುತ್ತಾರೆ. ಇದೊಂದು ಪವಾಡವೇ ಸರಿ. ಕಲ್ಯಾಣಿಯ ಬಳಿ ಒಂದು ಕಟ್ಟೆ ಇದೆ ಅದು ಬಹಳ ವಿಶೇಷವಾಗಿದೆ.ಮಳೆಗಾಲದಲ್ಲಿ ಆ ಕಟ್ಟೆಯ ಬಳಿ ನೀರು ಇರುವುದಿಲ್ಲ ಬೇಸಿಗೆಯಲ್ಲಿ ಬಹಳ ನೀರು ಇರುತ್ತದೆ ರಾಮನಗರ ಜಿಲ್ಲೆಯಲ್ಲಿ ಬಹಳ ಹೆಸರು ಪಡೆದಂತಹ ಕಟ್ಟೆ.