ಶ್ರೀ ವೇಣುಗೋಪಾಲ ಸ್ವಾಮಿ ದೇವಾಲಯವು ಕೆಆರ್’ಎಸ್ ಹಿನ್ನೀರು ಹಾಗೂ ಬೃಂದಾವನ ಉದ್ಯಾನವನಕ್ಕೆ ಭೇಟಿ ನೀಡುವ ಹೆಚ್ಚಿನ ಪ್ರವಾಸಿಗರು ನೋಡಲೇಬೇಕಾದ ತಾಣವಾಗಿ ಹೊರಹೊಮ್ಮಿದೆ. ಬೃಂದಾವನ ಉದ್ಯಾನವನದ ಪ್ರವೇಶದ್ವಾರದಿಂದ ಆರು ಕಿ.ಮೀ ದೂರದಲ್ಲಿರುವ ಹಿನ್ನೀರಿಗೆ ಪ್ರವಾಸಿಗರು ಸಂಜೆ ಹೊತ್ತಿನಲ್ಲಿ ಭೇಟಿ ನೀಡೋದು ಸೂಕ್ತವಾಗಿದೆ.
12 ನೇ ಶತಮಾನದ ದೇವಸ್ಥಾನ
ವಿಶಾಲ ನೀರಿನ ನಡುವೆ ಸೂರ್ಯಾಸ್ತವನ್ನು ಹೊರತುಪಡಿಸಿ, ಪ್ರವಾಸಿಗರು ಜಲಾಶಯದ ಸ್ಥಳದಿಂದ ಸ್ಥಳಾಂತರಿಸಲಾರುವ ಭವ್ಯವಾದ ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. 12 ನೇ ಶತಮಾನದ ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನವನ್ನು ಈಗ ಹೊಸ ಕನ್ನಂಬಾಡಿ ಗ್ರಾಮದ ಹೊರಭಾಗದಲ್ಲಿ ಸ್ಥಳಾಂತರಿಸಲಾಗಿದೆ.
900 ವರ್ಷಗಳ ಇತಿಹಾಸ
900 ವರ್ಷಗಳ ಇತಿಹಾಸ ಉಳ್ಳ ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನ ಮೂಲತಃ ಕನ್ನಂಬಾಡಿ ಗ್ರಾಮದಲ್ಲಿದೆ. ಇದು 1930 ರಲ್ಲಿ ಕೆ.ಆರ್.ಎಸ್ ಜಲಾಶಯದ ಹಿನ್ನೀರಿನಲ್ಲಿ ಮುಳುಗಿಹೋಗಿತ್ತು. ಜಲಾಶಯದಲ್ಲಿನ ನೀರಿನ ಮಟ್ಟ ಕಡಿಮೆಯಾದಾಗ ಇದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರನ್ನು ಆಕರ್ಷಿಸುತ್ತಿತ್ತು. ಈಗ ಈ ದೇವಾಲಯವನ್ನು ಅದರ ಮೂಲ ಸ್ಥಳದಿಂದ ಸ್ಥಳಾಂತರಿಸಲಾಗಿದೆ, ಹೊಸ ಕನ್ನಂಬಾಡಿ ಗ್ರಾಮದ ಹೊರಭಾಗದಲ್ಲಿ ಕಲ್ಲಿನಿಂದ ನಿರ್ಮಿಸಲಾಗಿದೆ.
ಹಳೆಯ ದೇವಸ್ಥಾನ
ಹಳೆಯ ದೇವಸ್ಥಾನವಿದ್ದ ಜಾಗದಲ್ಲಿದ್ದ ಅನೇಕ ಕಲ್ಲಿನ ಮಂಟಪಗಳು ಇಂದು ಪಳೆಯುಳಿಕೆಗಳಾಗಿ ಉಳಿದಿವೆ. ಹೊಸ ದೇವಸ್ಥಾನವನ್ನು ಹೊಯ್ಸಳ ಶೈಲಿಯಲ್ಲಿ ನಿರ್ಮೀಸಲಾಗಿದೆ. ಹಂಪಿ ಕಲ್ಲಿನ ರಥ, ಕಲ್ಲಿನ ಮಂಟಪಗಳನ್ನೂ ಇಲ್ಲಿ ಕಾಣಬಹುದು. ದೇವಾಲಯ ಸಂಕೀರ್ಣವು ತುಂಬಾ ದೊಡ್ಡದಾಗಿದೆ. ವಾಸ್ತುಶಿಲ್ಪ ಮತ್ತು ಕಾರ್ಮಿಕರ ಸುಂದರವಾದ ಕಲೆಗಾರಿಕೆಗೆ ಖಂಡಿತವಾಗಿಯೂ ಪ್ರಶಂಸಿಸಬೇಕಾಗಿದೆ. ಇದು ಭಕ್ತರು ಮತ್ತು ಪ್ರವಾಸಿಗರಿಗೆ ಪ್ರಶಾಂತ ವಾತಾವರಣವನ್ನು ನೀಡುತ್ತದೆ.
ತಲುಪುವುದು ಹೇಗೆ? ಮೈಸೂರಿಗೆ ಸಮೀಪದ ವಿಮಾನ ನಿಲ್ದಾಣವೆಂದರೆ ಅದು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ. ಇನ್ನು ರೈಲಿನ ಮೂಲಕ ಹೋಗುವುದಾದರೆ ಮೈಸೂರು ಜಂಕ್ಷನ್ ಸಮೀಪದ ರೈಲು ನಿಲ್ದಾಣವಾಗಿದೆ. ಇದು ಬೆಂಗಳೂರಿನಿಂದಲೂ ಉತ್ತಮ ಸಂಪರ್ಕ ಹೊಂದಿದೆ. ರಸ್ತೆ ಮೂಲಕ ಕೆಆರ್ಎಸ್ ಮೂಲಕ ಮೈಸೂರು, ಶ್ರೀರಂಗಪಟ್ಟಣ ಮತ್ತು ಪಾಂಡವಪುರದಿಂದ ತಲುಪಬಹುದು. ಇದು ಮೈಸೂರು ಪ್ರವಾಸೋದ್ಯಮದ ಪ್ರಸಿದ್ಧ ಹೆಗ್ಗುರುತಾಗಿದೆ.