ಕೆ.ಜಿ.ಕೊಪ್ಪಲಿನ ಗ್ರಾಮಸ್ಥರದ್ದು. ಬಂದಂತಮ್ಮ ಕಾಳಮ್ಮ ಕೆ.ಜಿ. ಕೊಪ್ಪಲಿನ ಗ್ರಾಮದೇವತೆ. ಆದಿಶಕ್ತಿ ಶ್ರೀಬಂದಂತಮ್ಮ ಕಾಳಮ್ಮ ದೇವಾಲಯಕ್ಕೆ 400 ವರ್ಷಗಳ ಇತಿಹಾಸವಿದೆ.
ಕೆ.ಜಿ. ಕೊಪ್ಪಲು ಗ್ರಾಮ ನಿರ್ಮಾಣವಾದಾಗಲೇ ಗ್ರಾಮ ದೇವತೆ ಕೆ.ಜಿ.ಕೊಪ್ಪಲಿನಲ್ಲಿ ಬಂದು ನೆಲೆ ನಿಂತಳು. ಗ್ರಾಮದಲ್ಲಿ ಬಂದಂತಮ್ಮ ಕಾಳಮ್ಮ ದೇವಿಗೆ ಸಣ್ಣದೊಂದು ಗುಡಿ ಇತ್ತು. ನಾಲ್ಕು ದಶಕದ ಹಿಂದೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಕುವೆಂಪುನಗರದಲ್ಲಿ ದೇವಸ್ಥಾನ ನಿರ್ಮಾಣಕ್ಕೆ ಜಾಗ ಮಂಜೂರು ಮಾಡಿದ ನಂತರ ಭವ್ಯವಾದ ದೇವಸ್ಥಾನ 16 ವರ್ಷಗಳ ಹಿಂದೆ ನಿರ್ಮಾಣಗೊಂಡಿತು.
ಪ್ರತಿ ವರ್ಷ ಶ್ರೀಬಂದಂತಮ್ಮ ಕಾಳಮ್ಮ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆಯುತ್ತದೆ. ಗ್ರಾಮದ ಜನರು ಗ್ರಾಮದ ದೇವತೆ ಬಳಿ ಹರಕೆ ಹೊತ್ತು ಜಾತ್ರೆ ಸಂದರ್ಭ ಹರಕೆ ತೀರಿಸುತ್ತಾರೆ. ಬಂದಂತಮ್ಮ ಕಾಳಮ್ಮ ಜಾತ್ರೆ ಪ್ರತಿ ವರ್ಷದ 7ನೇ ತಿಂಗಳಿನಲ್ಲಿ ನಡೆಯುತ್ತದೆ. ಗ್ರಾಮದಲ್ಲಿ ಮೊದಲಿಗೆ ಈಶ್ವರ, ನಂತರ ಬಂದಂತ ಕಾಳಮ್ಮ, ಸಿದ್ದಪ್ಪಾಜಿ ಹಾಗೂ ಅಂತಿಮವಾಗಿ ಚಾಮುಂಡೇಶ್ವರಿ ಹಳ್ಳಿ ಸೇಪಾಕ್ ನಡೆಯುತ್ತದೆ.
ಬಂದಂತಮ್ಮ ಕಾಳಮ್ಮ ದೇವಿಯ ಜಾತ್ರೆಯನ್ನು ಗ್ರಾಮಸ್ಥರು ಒಟ್ಟಾ ಸೇರಿ ಆಚರಿಸುತ್ತಾರೆ. ಗ್ರಾಮದ ಜನರು ಜಾತ್ರೆ ಆಚರಣೆಗೆ ಕಾಣಿಕೆ ನೀಡುತ್ತಾರೆ. ಜತೆಗೆ ಭಕ್ತಾದಿಗಳು ತಮ್ಮ ಶಕ್ಯಾನುಸಾರ ಕಾಣಿಕೆ ನೀಡುತ್ತಾರೆ. ಶ್ರೀಆದಿಶಕ್ತಿ ಶ್ರೀಬಂದಂತಮ್ಮ ಶ್ರೀಕಾಳಮ್ಮ ದೇವಸ್ಥಾನ ಸೇವಾ ಸಮಿತಿ ನೇತೃತ್ವದಲ್ಲಿ ಇಲ್ಲಿ ಎಲ್ಲ ಕಾರ್ಯಗಳು ನಡೆಯುತ್ತವೆ.
ಆದಿಶಕ್ತಿ ಬಂದಂತಮ್ಮ ಕಾಳಮ್ಮ ದೇವಿಗೆ ದೇವಸ್ಥಾನ ನಿರ್ಮಾಣಗೊಳ್ಳುವ ಮುನ್ನ ಕೆ.ಜಿ.ಕೊಪ್ಪಲಿನಲ್ಲಿ ಸಣ್ಣ ಗುಡಿಯೊಂದರಲ್ಲಿ ದೇವತೆಗೆ ಪೂಜೆ ಸಲ್ಲಿಸಲಾಗುತಿತ್ತು. ಆ ಸಂದರ್ಭ ಮಣ್ಣಿನ ಮೂರ್ತಿಯನ್ನು ತಯಾರಿಸಿ ಅದನ್ನು ಊರ ಹೊರಗೆ ಬಿಟ್ಟು ಜಾತ್ರೆ ಆಚರಿಸುವ ಸಂಪ್ರದಾಯ ಇತ್ತು. ದೇವಸ್ಥಾನ ನಿರ್ಮಾಣಗೊಂಡ ನಂತರ ಜಾತ್ರೆಯಲ್ಲಿ ರಥೋತ್ಸವ ಹಾಗೂ ವಿವಿಧ ಪೂಜಾ ಕೈಂಕರ್ಯಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಜಾತ್ರಾ ಮಹೋತ್ಸವ ನಂತರ 8ನೇ ತಿಂಗಳು ದೇವಸ್ಥಾನದ ಕುಂಭಾಭಿಷೇಕ ನಡೆಯುತ್ತದೆ ಪ್ರತಿನಿತ್ಯ ದೇವಸ್ಥಾನದಲ್ಲಿ ಪೂಜಾ ಕೈಂಕರ್ಯಗಳು ನಡೆಯುತ್ತವೆ.
ಆದಿಶಕ್ತಿ ಬಂದಂತಮ್ಮ ಕಾಳಮ್ಮ ನಮ್ಮೂರ ಗ್ರಾಮ ದೇವತೆ, ಪ್ರತಿಯೊಬ್ಬರೂ ಇಂದಿಗೂ ಶ್ರದ್ಧಾ, ಭಕ್ತಿಯೊಂದಿಗೆ ದೇವಿಗೆ ಪೂಜೆ ಸಲ್ಲಿಸುತ್ತಾರೆ. ಪ್ರತಿ ವರ್ಷ ಗ್ರಾಮಸ್ಥರೆಲ್ಲ ಸೇರಿ ದೇವಿಯ ಜಾತ್ರೆ ನಡೆಸುತ್ತೇವೆ. ಆದಿಶಕ್ತಿ ಬಂದಂತಮ್ಮ ಕಾಳಮ್ಮ ನಂಬಿದ ಭಕ್ತರಿಗೆ ಅಭಯ ನೀಡುತ್ತಾಳೆ. ಈ ಕಾರಣಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಕೆ.ಜಿ.ಕೊಪ್ಪಲು ಗ್ರಾಮಸ್ಥರು ಮಾತ್ರವಲ್ಲದೆ ಹೊರ ಭಾಗದ ಭಕ್ತರು ದೇವಸ್ಥಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ.