ಇದು ಸುಕ್ಷೇತ್ರವು 300 ವರ್ಷ ಹಳೆಯ ದೇವಾಲಯವಾಗಿದೆ.ಈ ದೇವಿಯನ್ನು ಸಾದಳ್ಳಿ ಗುಡ್ಡೆಯಿಂದ ತಂದು ಸ್ಥಾಪನೆ ಮಾಡಿ ಸಣ್ಣ ದೇವಾಲಯವನ್ನು ನಿರ್ಮಾಣ ಮಾಡಿ ಕಾಳಿಕಾಂಬ ಎಂಬ ಹೆಸರಿನ ಪೂಜಿಸಿದ್ದಾರೆ.
ಸನ್ನಿಧಿಯಲ್ಲಿ ವಿಶೇಷವೇನೆಂದರೆ ಮಕ್ಕಳಿಗೂ ಮತ್ತು ಸರ್ವರಿಗೂ ಯಂತ್ರವನ್ನು ಕಟ್ಟಿದರೆ ಸರ್ವರೋಗ ನಿವಾರಣೆಯಾಗುತ್ತದೆ ಎಂಬ ಪ್ರತೀತಿ ಇದೆ.ಭಕ್ತಾದಿಗಳು ಅವರು ಕೋರಿದ್ದನು ತಾಯಿಯ ಮುಂದೆ ಇಟ್ಟಾಗ ತಾಯಿ ಬಲಭಾಗದಿಂದ ಹೂವಿನ ಪ್ರಸಾದ ಕೊಟ್ಟರೆ ಅವರ ಕಾರ್ಯಗಳು ನೆರೆವೇರುತ್ತವೆ. ಗ್ರಾಮದಲ್ಲಿ ಏನೇ ತೊಂದರೆ ಯಾದರೂ ಈ ತಾಯಿ ಕಾಪಾಡುತ್ತಾಳೆ. ಈ ಕ್ಷೇತ್ರದಲ್ಲಿ ಯುಗಾದಿ ಅದರೆ ಅಂದು ಐದು ದಿನಗಳ ನಂತರ ದೇವಿಯ ಜಾತ್ರಾ ಮಹೋತ್ಸವು ವಿಜೃಂಭಣೆಯಿಂದ ನಡೆಸುತ್ತಾರೆ.
ಈ ಕ್ಷೇತ್ರದಲ್ಲಿ ಮೂಲ ವಿಗ್ರಹಕ್ಕೆ ಅಭಿಷೇಕವಿರುವುದಿಲ್ಲ ಉತ್ಸವ ಮೂರ್ತಿಗೆ ಮಾತ್ರ ಅಭಿಷೇಕವನ್ನು ಮಾಡುತ್ತಾರೆ.ಹಲವಾರು ರಾಜ್ಯಗಳಿಂದ ಭಕ್ತಾದಿಗಳು ಈ ಪುಣ್ಯಕ್ಷೇತ್ರಕ್ಕೆ ಬಂದು ತಾಯಿಯ ಕೃಪೆಗೆ ಪಾತ್ರರಾಗಿದ್ದಾರೆ.