ಬೆಂಗಳೂರು: ರಾಮಜನ್ಮಭೂಮಿ ಹೋರಾಟ ಪ್ರಕರಣದಲ್ಲಿ ಶ್ರೀಕಾಂತ್ ಪೂಜಾರಿ ಬಂಧನ ಖಂಡಿಸಿ ಬಿಜೆಪಿ ಪ್ರತಿಭಟನೆಗೆ ಮುಂದಾಗಿರುವ ಹಿನ್ನೆಲೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿರುಗೇಟು ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್, ರಾಮಜನ್ಮಭೂಮಿ ಹೋರಾಟದ 26 ಪ್ರಕರಣದಲ್ಲಿ 36 ಜನ ಆರೋಪಿಗಳಿದ್ದಾರೆ. ಆ 36 ಜನರೂ ಹಿಂದೂಗಳೇ. ಆದರೆ ಬಿಜೆಪಿಯವರು ಶ್ರೀಕಾಂತ್ ಪೂಜಾರಿ ಹಿಂದೆ ಮಾತ್ರ ಹೋಗಿದ್ದಾರೆ. ಹಾಗಾದ್ರೆ ಶ್ರೀಕಾಂತ್ ಪೂಜಾರಿ ಮಾತ್ರ ಹಿಂದೂನಾ ಬೇರೆಯವರು ಹಿಂದೂಗಳಲ್ಲವಾ..? ಎಂದು ಪ್ರಶ್ನಿಸಿದರು.
ಸರ್ಕಾರದ ವಿರುದ್ದ ಪ್ರತಿಭಟನೆ ಮಾಡೋದು ಬಿಜೆಪಿ ಹಕ್ಕು ಪ್ರತಿಭಟನೆ ಮಾಡಲಿ ಬೇಡ ಎನ್ನಲ್ಲ ಶ್ರೀಕಾಂತ ಪೂಜಾರಿ ಮೇಲೆ 16 ಕೇಸ್ ದಾಖಲಾಗಿದೆ. ಬಂಧಿತ ವ್ಯಕ್ತಿ ಕರಸೇವಕ ಅಂತ ಬರೆದಿಲ್ಲ ಅವರು ಅಪರಾಧಿ. ಬಿಜೆಪಿಯವರು ಅಪರಾಧಿ ಪರ ನಿಂತಿದ್ದಾರೆ. ಅಯೋಧ್ಯೆ ಹೆಸರಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಕಿಡಿಕಾರಿದರು.
Saval TV on YouTube