ಮನೆ ಮನರಂಜನೆ ತೆಲುಗಿನಲ್ಲಿ ಬ್ಯುಸಿಯಾದ ನಟಿ ಶ್ರೀಲೀಲಾ

ತೆಲುಗಿನಲ್ಲಿ ಬ್ಯುಸಿಯಾದ ನಟಿ ಶ್ರೀಲೀಲಾ

0

ಬೆಂಗಳೂರು (Bengaluru): ಕನ್ನಡದ ಕಿಸ್ ಸಿನಿಮಾದ ಮೂಲಕ ನಟಿಯಾಗಿ ಎಂಟ್ರಿ ಕೊಟ್ಟ ಶ್ರೀಲೀಲಾ ಮೊದಲ ಸಿನಿಮಾದ ಮೂಲಕವೇ ಸಾಕಷ್ಟು ಹೆಸರುಗಳಿಸಿದ್ದಾರೆ. ಇದೀಗ ಶ್ರೀಲೀಲಾ ಕನ್ನಡ ಮತ್ತು ತೆಲುಗು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ.

ಶ್ರೀಲೀಲಾ ಅಭಿನಯದ ಮೊದಲ ತೆಲುಗು ಸಿನಿಮಾ ‘ಪೆಳ್ಳಿ ಸಂದ ಆ’ಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಈ ಮೂಲಕ ತೆಲುಗಿನಲ್ಲೂ ಶ್ರೀಲೀಲಾಗೆ ಅಭಿಮಾನಿ ಬಳಗ ಹುಟ್ಟಿ ಕೊಂಡಿದೆ.

ಶ್ರೀಲೀಲಾ ನಟ ಮಹೇಶ್‌ ಅವರೊಂದಿಗೆ ಅಭಿನಯಿಸಲಿದ್ದಾರೆ. ಇದು ಬಹುತೇಕ ಖಚಿತವಾಗಿದೆ. SSMB28 ಚಿತ್ರದಲ್ಲಿ ಶ್ರೀಲೀಲಾ ನಟಿಸುವುದು ಪಕ್ಕಾ ಎನ್ನಲಾಗುತ್ತಿದೆ. ಸದ್ಯ ಶ್ರೀಲೀಲಾ ಕೈನಲ್ಲಿ ಒಟ್ಟು 6 ಸಿನಿಮಾಗಳಿವೆ ಎನ್ನಲಾಗುತ್ತಿದೆ.

ನಟ ರವಿತೇಜ ಜೊತೆಗೆ ‘ಧಮಾಕ’ ಚಿತ್ರದಲ್ಲಿ ಅಭಿನಯಿಸುತ್ತಾ ಇದ್ದಾರೆ. ಇದರ ಜೊತೆಗೆ ಶ್ರೀಲೀಲಾ ‘ವರಾಹಿ ಚಲನ ಚಿತ್ರಂ’ ನಿರ್ಮಾಣ ಸಂಸ್ಥೆಯ ಅಡಿಯಲ್ಲಿ ಕಿರೀಟಿ ರೆಡ್ಡಿ ಜೊತೆಗೆ ಒಂದು ಸಿನಿಮಾ ಮಾಡುತ್ತಾ ಇದ್ದಾರೆ. ಇದು ತೆಲುಗು ಜೊತೆಗೆ ಕನ್ನಡದಲ್ಲೂ ಬರುತ್ತಿದೆ. ಹಾಗೇ ನಿವೀನ್ ಪೋಲಿ ಶೆಟ್ಟಿಯ ‘ಅನಗನಗ ಒಕ ರಾಜ’ ಚಿತ್ರದಲ್ಲೂ ಶ್ರೀಲೀಲಾ ಅಭಿನಯಿಸುತ್ತಿದ್ದಾರೆ.

ಇನ್ನು ನಟ ವೈಷ್ಣವ್ ತೇಜ್ ಸಿನಿಮಾದಲ್ಲಿ ಕೂಡ ಶ್ರೀಲೀಲಾ ನಟಿಸುತ್ತಿದ್ದಾರೆ. ಆದರೆ ಈ ಚಿತ್ರಕ್ಕೆ ಇನ್ನೂ ಟೈಟಲ್ ನಿಗದಿ ಆಗಿಲ್ಲ. ಈ ಚಿತ್ರ ಸಿತಾರಾ ಎಂಟರ್ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಆಗುತ್ತಿದೆ. ಇದರ ಜೊತೆಗೆ ನಂದಮೂರಿ ಬಾಲಕೃಷ್ಣನ ಸಿನಿಮಾದಲ್ಲೂ ನಟಿಸುತ್ತಾರೆ. ಈ ಚಿತ್ರಲ್ಲೇ ಬಾಲಯ್ಯನ ಮಗಳ ಪಾತ್ರದಲ್ಲಿ ಶ್ರೀಲೀಲಾ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರಕ್ಕೆ ಅನಿಲ್ ರವಿಪುಡಿ ನಿರ್ದೇಶನವಿದೆ.

ಅಲ್ಲದೆ, ತೆಲುಗು ನಟ ನಿತಿನ್ ಜೊತೆಗೆ ಹೊಸ ಸಿನಿಮಾ ಮಾಡುತ್ತಾ ಇದ್ದಾರೆ. ಈ ಚಿತ್ರಕ್ಕೆ ಇನ್ನು ಟೈಟಲ್ ಫಿಕ್ಸ್ ಆಗಿಲ್ಲ. ‘ಪ್ರೊಡಕ್ಷನ್ ನಂಬರ್ 9’ ಎನ್ನುವ ಟೈಟಲ್‌ನಲ್ಲಿ ಸಿನಿಮಾ ಸೆಟ್ಟೇರಿದೆ. ಚಿತ್ರದ ಮುಹೂರ್ತದ ಫೋಟೋಗಳನ್ನು ಚಿತ್ರತಂಡ ಹಂಚಿಕೊಂಡಿದೆ.

ನಟಿ ಶ್ರೀಲೀಲಾ ಕನ್ನಡದಲ್ಲಿ ‘ಕಿಸ್’, ‘ಭರಾಟೆ’ ಮತ್ತು ‘ಬೈ ಟು ಲವ್’ ಚಿತ್ರಗಳಲ್ಲಿ ಶ್ರೀಲೀಲಾ ಅಭಿನಯಿಸಿದ್ದಾರೆ. ಆದರೆ ಶ್ರೀಲೀಲಾ ಅಭಿನಯದ ತೆಲುಗಿನ ‘ಪೆಳ್ಳಿ ಸಂದ ಡಿ’ ಚಿತ್ರ ಮಾತ್ರ ರಿಲೀಸ್ ಆಗಿದೆ.

ಹಿಂದಿನ ಲೇಖನನ್ಯಾಯಾಧೀಶರ ಮೇಲೆ ಟೀಕಾ ಪ್ರಹಾರ: ಮಾಧ್ಯಮಗಳ ವರದಿಗೆ ಸುಪ್ರೀಂ ಕೋರ್ಟ್‌ ಅಸಮಾಧಾನ
ಮುಂದಿನ ಲೇಖನಸರ್ವರ ವಿಕಾಸಕ್ಕೆ ಸಮೃದ್ಧ ಕರ್ನಾಟಕವನ್ನು ಕಟ್ಟುವ ಸಂಕಲ್ಪ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ