ಮಂಡ್ಯ: ಶ್ರೀರಗಪಟ್ಟಣ ತಾಲೂಕು ಪಾಲಹಳ್ಳಿ ಗ್ರಾಮದಲ್ಲಿ ಹಾಡು ಹಗಲೇ ರೌಡಿಶೀಟರ್ ನನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ.
ಪ್ರಜ್ವಲ್ ಅಲಿಯಾಸ್ ಪಾಪು ಕೊಲೆಯಾದ ಯುವಕ.
ಭಾನುವಾರ ಬೆಳಿಗ್ಗೆ ಸರಿಸುಮಾರು 9.30 ರ ಸಮಯದಲ್ಲಿ ರೌಡಿಶೀಟರ್ ಆದ ಪ್ರಜ್ವಲ್ ಅಲಿಯಾಸ್ ಪಾಪು ಎಂಬುವರನ್ನು ಯಾರೋ ದುಷ್ಕರ್ಮಿಗಳು ಪಾಲಹಳ್ಳಿ ಗ್ರಾಮದಲ್ಲೇ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಪ್ರಕರಣವನ್ನು ದಾಖಲಿಸಿಕೊಂಡು ಪರಾರಿ ಆಗಿರುವ ಆರೋಪಿಗಳನ್ನು ಶೋಧಿಸಲು ಪೊಲೀಸರು ಮುಂದಾಗಿದ್ದಾರೆ.