ಮನೆ ಸುದ್ದಿ ಜಾಲ ಶ್ರೀರಾಂಪುರ ಪಟ್ಟಣ ಪಂಚಾಯಿತಿ ಹಲವು ಬಡಾವಣೆಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಜಿ.ಟಿ.ದೇವೇಗೌಡ ಚಾಲನೆ

ಶ್ರೀರಾಂಪುರ ಪಟ್ಟಣ ಪಂಚಾಯಿತಿ ಹಲವು ಬಡಾವಣೆಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಜಿ.ಟಿ.ದೇವೇಗೌಡ ಚಾಲನೆ

0

ಮೈಸೂರು(Mysuru): ಚಾಮುಂಡೇಶ್ವರಿ ಕ್ಷೇತ್ರದ ವ್ಯಾಪ್ತಿಯಲ್ಲಿ ಹೊಸದಾಗಿ ರಚನೆಗಿರುವ ಶ್ರೀರಾಂಪುರ ಪಟ್ಟಣ ಪಂಚಾಯಿತಿ ಹಲವು ಬಡಾವಣೆಗಳ ಅಭಿವೃದ್ಧಿಗೆ ಗುರುವಾರ ಶಾಸಕ ಜಿ.ಟಿ.ದೇವೇಗೌಡ ಚಾಲನೆ ನೀಡಿದರು.

ನಗರದ ರಿಂಗ್ ರಸ್ತೆ ಶ್ರೀರಾಂಪುರ ಮತ್ತು ಪರಸಯ್ಯನಹುಂಡಿ ಜಂಕ್ಷನ್‌’ನಲ್ಲಿ ಸಂಚಾರ ನಿರ್ವಹಣೆ ಮಾಡಿ ಅಪಘಾತಗಳನ್ನು ತಡೆಯಲು ನೂತನವಾಗಿ ಸಿಗ್ನಲ್ ದೀಪವನ್ನು ಅಳವಡಿಸಲು ಎಸ್ ಎಫ್ ಸಿ  ೧೪.೮೫ ಲಕ್ಷ ರೂ.ವೆಚ್ಚದ ಕಾಮಗಾರಿಗೆ ಚಾಲನೆ ನೀಡಿದರು.

ವೃತ್ತದಲ್ಲಿ ಸಿಗ್ನಲ್ ದೀಪದ ಜತೆಗೆ ಹೈ ವಾಸ್ಕ್ ಲೈಟ್, ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗುತ್ತದೆ.  ಪರಸಯ್ಯನಹುಂಡಿಯಲ್ಲಿ ನಗರೋತ್ಥಾನ ಯೋಜನೆಯಡಿ ೧೬ ಲಕ್ಷ ರೂ.ವೆಚ್ಚದಲ್ಲಿ ರಸ್ತೆ, ಚರಂಡಿ ಕಾಮಗಾರಿ, ನಿರ್ಮಲ ಕಾನ್ವೆಂಟ್ ರಸ್ತೆ ಮತ್ತು ಚರಂಡಿ ಅಭಿವೃದ್ಧಿಪಡಿಸಲು ೧೫ ನೇ ಹಣಕಾಸು ಮತ್ತು ನಗರೋತ್ಥಾನದಿಂದ ೨೦.೫ ಲಕ್ಷ ರೂ.ವೆಚ್ಚದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.

ರಿಂಗ್ ರಸ್ತೆಯಿಂದ ಪೌರ ಕಾರ್ಮಿಕರ ಮನೆ ಕಡೆಗೆ ಹೋಗುವ ರಸ್ತೆಯಲ್ಲಿ ಮಳೆ ನೀರು ಚರಂಡಿ ಕಾಮಗಾರಿಗೆ ೧೫ ನೇ ಹಣಕಾಸು ಆಯೋಗದಿಂದ ೯.೫೨ ಲಕ್ಷ ರೂ.ವೆಚ್ಚದ ಕಾಮಗಾರಿ ಆರಂಭಕ್ಕೆ ಚಾಲನೆ ನೀಡಿದರು.

ಇದಲ್ಲದೆ, ೨೦ ಲಕ್ಷ ರೂ.ವೆಚ್ಚದಲ್ಲಿ ಕೊಪ್ಪಲೂರು ಗ್ರಾಮದ ಮುಖ್ಯರಸ್ತೆಅಭಿವೃದ್ಧಿ, ೧೧ ಲಕ್ಷ ರೂ.ವೆಚ್ಚದಲ್ಲಿ  ಅಂಬೇಡ್ಕರ್ ಸಮುದಾಯ ಭವನ ನಿರ್ವಾಣ, ೬ ಲಕ್ಷ ರೂ.ವೆಚ್ಚದಲ್ಲಿ ಪರಿಶಿಷ್ಟ ಜಾತಿ ಸ್ಮಶಾನದ ಅಭಿವೃದ್ಧಿ, ೨೫ ಲಕ್ಷ ರೂ.ವೆಚ್ಚದಲ್ಲಿ ರವಾಬಾಯಿನಗರದ ಎರಡನೇ ವಾರ್ಡ್ ಮುಖ್ಯರಸ್ತೆ ಅಭಿವೃದ್ಧಿ, ೧೭.೫೦ ಲಕ್ಷ ರೂ.ವೆಚ್ಚದಲ್ಲಿ ಸಮನ್ವಿತ ಮನೆಯಿಂದ ಭಕ್ತ ಕನಕದಾಸ ಕ್ಷೇವಾಭಿವೃದ್ಧಿ ಸಂಘದವರೆಗೆ ರಸ್ತೆ ಅಭಿವೃದ್ಧಿ, ೫ ಲಕ್ಷ ರೂ.ವೆಚ್ಚದಲ್ಲಿ ಗೊರೂರು ಬಸ್ ಶೆಲ್ಟರ್ ನಿರ್ವಾಣಕ್ಕೆ ಚಾಲನೆ ಕೊಡಲಾಯಿತು.

ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಮುಖ್ಯಾಧಿಕಾರಿ ಎ.ಎಂ.ಶ್ರೀಧರ್, ಮುಖಂಡರಾದ ಪರಸಯ್ಯನಹುಂಡಿ ಸುರೇಶ್, ಗೆಜ್ಜಗಳ್ಳಿ ಲೋಕೇಶ್, ಯೋಗಾ ಶ್ರೀನಿವಾಸ್, ಗುರೂರು ಶಂಕರ್, ಹನುಮಂತು, ಗುರೂರು ಮಹೇಶ್, ಶ್ರೀಕಂಠಮೂರ್ತಿ, ಕುಮಾರ್, ರಮೇಶ್ ಹಾಜರಿದ್ದರು.

೨ ಕೋಟಿ ರೂ.ವೆಚ್ಚದಲ್ಲಿ ನಾನಾ ಕಾಮಗಾರಿ

ಈ ಸಂದರ್ಭ ಮಾತನಾಡಿದ ಶಾಸಕ ಜಿ.ಟಿ.ದೇವೇಗೌಡ ಶ್ರೀರಾಂಪುರ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಎರಡು ಕೋಟಿ ರೂ.ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿುಂನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಹೇಳಿದರು.

ಗ್ರಾಮಪಂಚಾಯಿತಿಯಿಂದ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿದ ಬಳಿಕ ಸಾರ್ವಜನಿಕರಿಂದ ಹಲವಾರು ಬೇಡಿಕೆಗಳು ಬರುತ್ತಿದೆ. ಸ್ಥಳೀಯವಾಗಿ ಆರ್ಥಿಕ ಸಂಪನ್ಮೂಲ ಇಲ್ಲದ ಕಾರಣ ಸರ್ಕಾರದಿಂದ ಬಿಡುಗಡೆಯಾದ  ಅನುದಾನದಲ್ಲಿ ಹಲವಾರು ಕಾಮಗಾರಿಗಳನ್ನು ಆರಂಭಿಸಲಾಗಿದೆ ಎಂದು ಹೇಳಿದರು.

ಪಟ್ಟಣ ಪಂಚಾಯಿತಿಯಿಂದ ಖಾತೆ ವಾಡಲಾಗುತ್ತಿದೆ. ಬರುವ ತೆರಿಗೆಯಲ್ಲಿ ಎಲ್ಲವನ್ನೂ ವಾಡಲಾಗದು. ಅದಕ್ಕಾಗಿ ಎಸ್‌’ಎಫ್ ಸಿ, ೧೫ ನೇ ಹಣಕಾಸು, ಶಾಸಕರ ನಿದಿ, ನಗರೋತ್ಥಾನದಿಂದ ಹಂತ ಹಂತವಾಗಿ ಅಭಿವೃದ್ಧಿಪಡಿಸಿ ಉತ್ತಮ ಪಟ್ಟಣವಾಗಿ ವಾಡಲಾಗುವುದು ಎಂದು ಭರವಸೆ ನೀಡಿದರು.

ಪರಸಯನಹುಂಡಿ, ಶ್ರೀರಾಂಪುರ,ಮಹದೇವಪುರ, ಮುನಿಸ್ವಾಮಿನಗರ, ರವಾಬಾಯಿನಗರ ಪ್ರದೇಶದ ಬಡಾವಣೆಗಳ ರಸ್ತೆ,ಒಳಚರಂಡಿ,ಮಳೆ ನೀರು ಚರಂಡಿ ಕಾಮಗಾರಿಗಳು ನಡೆಯಲಿವೆ. ಗುಣಮಟ್ಟದ ಕಾಮಗಾರಿ ವಾಡುವ ಜತೆಗೆ ನಿಗದಿತ ಅವಧಿುಂಲ್ಲಿ ಮುಗಿಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.