ಹಾವೇರಿ: ಪೋಷಕರು ಬುದ್ಧಿವಾದ ಹೇಳಿದ್ದಕ್ಕೆ ಬೇಸರದಿಂದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಯೊಬ್ಬ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವಂತ ಘಟನೆ ಹಾವೇರಿಯಲ್ಲಿ ನಡೆದಿದೆ.
ಹಾವೇರಿ ಜಿಲ್ಲೆಯ ಬ್ಯಾಡಗಿ ಪಟ್ಟಣದಲ್ಲಿ ನೇಣು ಬಿಗಿದುಕೊಂಡು ರುದ್ರೇಶ್ ಗಂಜಿಗಟ್ಟಿ(15) ಎಂಬ ಎಸ್ ಎಸ್ ಎಲ್ ಸಿ ಓದುತ್ತಿದ್ದಂತ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮೊಬೈಲ್ ಬಿಟ್ಟು ಓದಿನ ಕಡೆ ಗಮನ ಹರಿಸುವಂತೆ ಪೋಷಕರು ಎಸ್ ಎಸ್ ಎಲ್ ಸಿ ವಿದ್ಯಾರ್ಥಿಯಾಗಿದ್ದಂತ ರುದ್ರೇಶ್ ಗಂಜಿಗಟ್ಟಿಗೆ ಬುದ್ಧಿವಾದ ಹೇಳಿದ್ದರು. ಇಷ್ಟಕ್ಕೇ ಬೇಜಾರು ಮಾಡಿಕೊಂಡು, ಇಂದು ಮನೆಯಲ್ಲಿ ಯಾರು ಇಲ್ಲದಂತ ಸಂದರ್ಭದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.














