ಮನೆ ಅಪರಾಧ ಪಿರಿಯಾಪಟ್ಟಣ ಬಳಿ ಹೃದಯಾಘಾತದಿಂದ ಎಸ್ ​ಎಸ್​ ಎಲ್ ​ಸಿ ವಿದ್ಯಾರ್ಥಿನಿ ಸಾವು

ಪಿರಿಯಾಪಟ್ಟಣ ಬಳಿ ಹೃದಯಾಘಾತದಿಂದ ಎಸ್ ​ಎಸ್​ ಎಲ್ ​ಸಿ ವಿದ್ಯಾರ್ಥಿನಿ ಸಾವು

0

ಮೈಸೂರು: ಹೃದಯಾಘಾತದಿಂದ ಎಸ್​ಎಸ್​ಎಲ್​ಸಿ ವಿದ್ಯಾರ್ಥಿನಿ ಮೃತಪಟ್ಟ ಘಟನೆ ಪಿರಿಯಾಪಟ್ಟಣ ತಾಲೂಕಿನ ಕೆಲ್ಲೂರು ಗ್ರಾಮದಲ್ಲಿ ಸೋಮವಾರ ಸಂಭವಿಸಿದೆ.

Join Our Whatsapp Group

ನಾಗರಾಜ್, ವಸಂತ ದಂಪತಿ ಪುತ್ರಿ ದೀಪಿಕಾ (15) ಮೃತಪಟ್ಟ ವಿದ್ಯಾರ್ಥಿನಿ.

ರಾವಂದೂರು ಕರ್ನಾಟಕ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿ ದೀಪಿಕಾ ಇದ್ದಕ್ಕಿದ್ದಂತೆ ಅಸ್ವಸ್ಥಳಾಗಿದ್ದಾಳೆ. ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯೆ ಸಾವು ಸಂಭವಿಸಿದೆ.