ಮನೆ ರಾಜ್ಯ ವಾಲ್ಮೀಕಿ ಸಮಾಜಕ್ಕೆ ಸೇರದವರಿಗೆ ಪ.ಪಂಗಡ ಪ್ರಮಾಣ ಪತ್ರ: ಸಚಿವ ಶ್ರೀರಾಮುಲುಗೆ ಮುತ್ತಿಗೆ

ವಾಲ್ಮೀಕಿ ಸಮಾಜಕ್ಕೆ ಸೇರದವರಿಗೆ ಪ.ಪಂಗಡ ಪ್ರಮಾಣ ಪತ್ರ: ಸಚಿವ ಶ್ರೀರಾಮುಲುಗೆ ಮುತ್ತಿಗೆ

0

ಬಾಗಲಕೋಟೆ(Bagalakote): ವಾಲ್ಮೀಕಿ ಸಮಾಜಕ್ಕೆ ಸೇರದ ಕೆಲವರಿಗೆ ಪರಿಶಿಷ್ಟ ಪಂಗಡ ಪ್ರಮಾಣ ಪತ್ರ ನೀಡುವುದನ್ನು ಖಂಡಿಸಿ ಅಖಿಲ ಕರ್ನಾಟಕ ವಾಲ್ಮೀಕಿ ಸಮಾಜದ ಮುಖಂಡರು ಸಚಿವ ಶ್ರೀರಾಮುಲು ಅವರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಮಂಗಳವಾರ ಬಿಜೆಪಿ ವತಿಯಿಂದ ಹಮ್ಮಿಕೊಳ್ಳಲಿರುವ ಎಸ್ ಟಿ ಸಮಾವೇಶದ ಪೂರ್ವಭಾವಿ ಸಭೆಗೆ ಬಂದಿದ್ದ ಅವರಿಗೆ‌ ಮುತ್ತಿಗೆ ಹಾಕಿ, ಪ್ರತಿಭಟಿಸಿದರು.

ವಾಲ್ಮೀಕಿ ಸಮಾಜಕ್ಕೆ ಸೇರದ ಕೆಲವರಿಗೆ ಎಸ್ ಟಿ ಪ್ರಮಾಣ ಪತ್ರ ನೀಡಲಾಗುತ್ತಿದೆ. ಕೂಡಲೇ ಅದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಕೂಡಲೇ ಸ್ಪಂದಿಸಿದ ಸಚಿವ ಶ್ರೀರಾಮುಲು, ಜಿಲ್ಲಾಧಿಕಾರಿಗೆ ಮಾತನಾಡಿ ಪ್ರಮಾಣಪತ್ರ ನೀಡಬೇಡಿ. ಮುಖ್ಯಮಂತ್ರಿ ಅವರೊಂದಿಗೆ ಮಾತನಾಡುವೆ ಎಂದರು.