ಮನೆ ಆರೋಗ್ಯ ತಾರೆಕಾಯಿ : ಗಾಯವಾಸಿ ಮಾಡುವ ಗುಣ

ತಾರೆಕಾಯಿ : ಗಾಯವಾಸಿ ಮಾಡುವ ಗುಣ

0

       ಎಥನಾಲ್ ದ್ರಾವಣ ಉಪಯೋಗಿಸಿ ತಾರೆಕಾಯಿಯಿಂದ ತಯಾರಿಸಿದ ಸತ್ವ ಮತ್ತು ತಾರೆಕಾರಿಯಿಯ ಚೂರ್ಣದಿಂದ ತಯಾರಿಸಿದ ಮುಲಾವನ್ನು ಗಾಯದ ಮೇಲೆ 12 ದಿನಗಳವರೆಗೆ ಲೇಪಿಸಿ ಪರೀಕ್ಷಿಸಿದಾಗ  ಎರಡು ಬಗೆಯ ಔಷಧಿಗಳಿಗೆ ಗಾಯವಾಸಿ ಮಾಡುವ ಗುಣವಿದೆಯೆಂದು ತಿಳಿದುಬಂದಿದೆ.

Join Our Whatsapp Group

     ಎಥನಾಲ್ ದ್ರಾವಣ ಉಪಯೋಗಿಸಿ ತಾರೆಕಾಯಿಯಿಂದ ತಯಾರಿಸಿದ ಸತ್ವ ಮತ್ತು ಸತ್ವದಿಂದ ಬೇರ್ಪಡಿಸಿದ ಗ್ಯಾಲಿಕ್ ಆಮ್ಲಕ್ಕೆ ಮಧುಮೇಹಿಗಳ ಗಾಯವನ್ನು ವಾಸಿ ಮಾಡುವ ಸಾಮರ್ಥ್ಯವಿದೆ ಯೆಂದು ಇಳಿಗಳ ಮೇಲೆ ನಡೆಸಿದ ಪ್ರಯೋಗದಿಂದ ತಿಳಿದುಬಂದಿದೆ.

 ಜ್ವರವನ್ನು ವಾಸಿ ಮಾಡುವ ಗುಣ :

     ಈಸ್ಟ್ ದ್ರಾವಣವನ್ನು ಇಂಜೆಕ್ಷನ್ ಮೂಲಕ ಇಲಿಗಳಿಗೆ ಕೊಟ್ಟು ಜ್ವರ ಉಂಟಾಗುವಂತೆ ಮಾಡಲಾಯಿತು.ಎಥನಾಲ್ ದ್ರಾವಣ ಮತ್ತು ನೀರನ್ನು ಉಪಯೋಗಿಸಿ ತಾರೆಕಾಯಿಯಿಂದ ತಯಾರಿಸಿದ ಸತ್ವವಗಳನ್ನು ಇಲಿಗಳಿಗೆ ಕೊಟ್ಟು ಪರೀಕ್ಷಿಸಿದಾಗ ಎರಡೂ ಬಗೆಯ ಸತ್ವಗಳಿಗೆ ಜ್ವರವನ್ನು ವಾಸಿ ಮಾಡುವ ಗುಣವಿದೆಯೆಂದು ತಿಳಿದುಬಂದಿದೆ.

 ನೋವು ನಿವಾರಕ ಗುಣ:

    ಎಥನಾಲ್ ದ್ರಾವಣ ಮತ್ತು ನೀರು ಉಪಯೋಗಿಸಿ ತಾರೆಕಾಯಿಯಿಂದ ತಯಾರಿಸಿದ ಸತ್ವ ವನ್ನು ಇಲಿಗಳಿಗೆ ಕೊಟ್ಟು, ಪ್ರಯೋಗ ಶಾಲೆಯಲ್ಲಿ ವಿವಿಧ ರೀತಿಯ ನೋವನ್ನು ಪರೀಕ್ಷಿಸುವ ಪ್ರಯೋಗಗಳನ್ನು ನಡೆಸಿ ಪರೀಕ್ಷಿಸಿದಾಗ ಎರಡೂ ಸತ್ವಗಳಿಗೆ ನೋವು ನಿವಾರಕ ಗುಣವಿದೆಯೆಂದು ದೃಢಪಟ್ಟಿದೆ.

 ಪಿತ್ತಜನಕಾಂಗಳನ್ನು ಕಾಪಾಡುವ ಗುಣ ,:

    ಈಥೈಲ್ ಆಸಿಟೇಟ್ ಈಥರ್, ನೀರು ಮತ್ತು ಅಸಿಟೋನ್ ಮಿಶ್ರಣ ಉಪಯೋಗಿಸಿ ತಾರೆಕಾಯಿಯಿಂದ ತಯಾರಿಸಿದ ಸತ್ವಕ್ಕೆ ರಾಸಾಯನಿಕಗಳು ಉಂಟು ಮಾಡುವ ಹಾನಿಯಿಂದ ಪಿತ್ತ ಜನಾಂಗವನ್ನು ಕಾಪಾಡುವ ಗುಣವಿದೆಯೆಂದು ಪ್ರಯೋಗ ಶಾಲೆಯಲ್ಲಿ ಬೇರ್ಪಡಿಸಿದ ಪಿತ್ತ ಜನಾಂಗದ ಮತ್ತು ಇಲಿಗಳ ಮೇಲೆ ನಡೆಸಿದ ಪ್ರಯೋಗದಿಂದ ತಿಳಿದು ಬಂದಿದೆ.

 ಮಿಥನಾಲ್ ಮತ್ತು ಈಥೈಲ್ ಅಸಿಟೇಟ್ ದ್ರಾವಣ ಉಪಯೋಗಿಸಿ ತಾರೆ ಮರದ ಎಲೆ,ತೊಗಟೆ ಮತ್ತು ಕಾಂಡದಿಂದ ತಯಾರಿಸಿದ ಸತ್ವಕ್ಕೆ ರಾಸಾಯನಿಕಗಳು ಉಂಟು ಮಾಡುವ ಹಾನಿಯಿಂದ ಪಿತ್ತ ಜನಾಂಗವನ್ನು ಕಾಪಾಡುವ ಗುಣವಿದೆಯೆಂದು ವರದಿಯಾಗಿದೆ.

 ಬೊಜ್ಜು ಬೆಳೆಯದಂತೆ ತಡೆಯುವ ಗುಣ :

    ಬೊಜ್ಜಿನ ಬೆಳವಣಿಗೆ ಇನ್ಸುಲಿನ್ ಉತ್ಪತ್ತಿಯ ಮೇಲೆ ಪ್ರತಿಕೂಲ ಪರಿಣಾಮವನ್ನಂಟುಮಾಡಿ,ಮಧುಮೇಹ ಕಾಯಿಲೆಯ ಉಂಟಾಗಲು ಕಾರಣವಾಗುತ್ತದೆ ಇದು ಮಧುಮೇಹ ಉಂಟಾಲು ಇವರು ಕಾರಣಗಳಲ್ಲಿ ಒಂದು.ಬಿಸಿನೀರು ಉಪಯೋಗಿಸಿ ತಾರೆಕಾಯಿಯಿಂದ ತಯಾರಿಸಿದ ಸತ್ವವನ್ನು ಮಧುಮೇಹ ಉಂಟು ಮಾಡಿದ ಇಲಿಗಳಿಗೆ ಸೇವಿಸಲು ಕೊಟ್ಟು ನಂತರ ಪರಿಕ್ಷಿಸಿದಾಗ ಸತ್ವಕ್ಕೆ ಬೊಜ್ಜು ಬೆಳೆಯದಂತೆ ತಡೆಯುವ ಗುಣವಿದೆಯೆಂದು ಕಂಡು ಬಂದಿದೆ. ಪ್ರಯೋಗದಿಂದಲೂ ಈ ಸಂಗತಿ ದೃಢಪಟ್ಟಿದೆ ಸತ್ವದ ಈ ಗುಣಕ್ಕೆ ಅದರಲ್ಲಿ ಹಡಕವಾಗಿರುವ ಗ್ಯಾಲಿಕ್ ಆಮ್ಲ ಕಾರಣ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

 ಭೇದಿಯಾಗದಂತೆ ತಡೆಯುವ ಗುಣ :

    ಹರಳೆಣ್ಣೆ ಕುಡಿಸಿ ಭೇದಿಯಾಗದಂತೆ ಮಾಡಿದ ಇಲಿಗಳಿಗೆ,ನೀರು ಮತ್ತು ಎಥನಾಲ್ ದ್ರಾವಣ ಉಪಯೋಗಿಸಿ ತಾರೆಕಾಯಿಯಿಂದ ತಯಾರಿಸಿದ  ಸತ್ವವನ್ನು ಸೇವಿಸಲು ಕೊಟ್ಟು ಪರೀಕ್ಷಿಸಿದಾಗ  ಎರಡು ಬಗೆಯ ತತ್ವಗಳಿಗೆ ಭೇದಿಯಾಗದಂತೆ ತಡೆಯುವ ಗುಣವಿದೆಯೆಂದು ವರದಿಯಾಗಿದೆ.