ಮನೆ ಯೋಗ ಶಾಂತಿ ಮತ್ತು ಏಕಾಗ್ರತೆಗೆ ಸಹಾಯಕವಾಗಬಲ್ಲ ಈ ಯೋಗಗಳನ್ನು ದಿನವನ್ನು ಪ್ರಾರಂಭಿಸಿ..!

ಶಾಂತಿ ಮತ್ತು ಏಕಾಗ್ರತೆಗೆ ಸಹಾಯಕವಾಗಬಲ್ಲ ಈ ಯೋಗಗಳನ್ನು ದಿನವನ್ನು ಪ್ರಾರಂಭಿಸಿ..!

0

ನಮ್ಮನ್ನು ನಾವು ಇಡೀ ದಿನ ಮೈ ಮನಸ್ಸುಗಳನ್ನು ಉಲ್ಲಾಸದಿಂದಿರಿಸಿಕೊಳ್ಳಬೇಕಾದರೆ ಬೆಳಗ್ಗಿನ ಸಮಯದಲ್ಲಿ ಕೆಲವು ವ್ಯಾಯಾಮಗಳು ಅಥವಾ ಯೋಗಗಳ ಅಭ್ಯಾಸ ಇಟ್ಟುಕೊಳ್ಳುವುದು ಅತ್ಯಂತ ಪ್ರಯೋಜನಕಾರಿಯಾಗಿದೆ. ಒತ್ತಡಭರಿತ ಜೀವನ ಶೈಲಿಯಿಂದಾಗಿ ನಾವು ನಮ್ಮ ಮನಸ್ಸಿನ ಶಾಂತಿ ಮತ್ತು ಏಕಾಗ್ರತೆಯಲ್ಲಿ ಕೊರತೆಯನ್ನು ಕಾಣುತ್ತೇವೆ. ಈ ಕೊರತೆಯನ್ನು ನೀಗಿಸಲು ನಾವು ದಿನಾ ಬೆಳಿಗ್ಗೆ ಈ ಯೋಗಗಳ ಅಭ್ಯಾಸ ಮಾಡುವುದು ಒಳ್ಳೆಯದು.

ಸದಾ ನಿರತವಾಗಿರುವ ಜಗತ್ತಿನಲ್ಲಿ ನಮ್ಮ ಜೀವನವೂ ಸದಾ ಗಡಿಬಿಡಿಯ ವಾತಾವರಣದಿಂದಲೇ ಕೂಡಿರುವುದು ಸಹಜ. ನಾವು ವಾಸಿಸುವ ಜಗತ್ತಿನಲ್ಲಿ ಸ್ಪಷ್ಟ ಮನಸ್ಸು ಮತ್ತು ಉತ್ತಮ ಏಕಾಗ್ರತೆಯನ್ನು ಹುಡುಕುವುದು ಸವಾಲಿನ ಕೆಲಸವಾಗಬಹುದು . ಇಂತಹ ಸಮಯದಲ್ಲಿ ಕೆಲವು ಪರಿಸ್ಥಿತಿಗಳು ನಮ್ಮನ್ನು ಕೆಲವೊಮ್ಮೆ ಕಷ್ಟಕರವಾಗಿಸುತ್ತದೆ. ಇದು ನಮ್ಮ ಅರಿವಿನ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ. ಜನರು ಏನನ್ನು ಆರಿಸಬೇಕು ಏನನ್ನು ಆರಿಸಬಾರದು ಎನ್ನುವ ಗೊಂದಲದಲ್ಲಿ ಸಿಲುಕಿದ್ದು, ಏಕೆಂದರೆ ಇಂತಹ ಕಠಿಣ ವಾತಾವರಣಕ್ಕೆ ಸಹಾಯ ಮಾಡಲು ಜಗತ್ತು ಕೆಲವೇ ಆಯ್ಕೆಗಳನ್ನು ನೀಡುತ್ತದೆ. ಅದರಲ್ಲಿ ಯೋಗ ಕೂಡಾ ಒಂದಾಗಿದೆ.

ಯೋಗವು ನಮ್ಮ ಒಟ್ಟಾರೆ ಯೋಗಕ್ಷೇಮವನ್ನು ಸುಧಾರಿಸುವಲ್ಲಿ ಸಹಾಯ ಮಾಡುತ್ತದೆ. ಅದರಲ್ಲೂ ಕೆಲವು ಯೋಗಭಂಗಿಗಳು ಏಕಾಗ್ರತೆ ಮತ್ತು ಮನಸ್ಸಿನ ಶಾಂತಿಯನ್ನು ಉತ್ತೇಸುತ್ತವೆ. ಇವು ನಿಜವಾಗಿಯೂ ಸಹಾಯ ಮಾಡುತ್ತವೆ. ನಮ್ಮಲ್ಲಿ ಏಕಾಗ್ರತೆಯನ್ನು ಹೆಚ್ಚಿಸುವಂತಹ ಯೋಗ ಭಂಗಿಗಳು ಯಾವುವು ಮತ್ತು ಇವು ಹೇಗೆ ಮನಸ್ಸನ್ನು ಉಲ್ಲಾಸಗೊಳಿಸುತ್ತದೆ ಮತ್ತು ಇವುಗಳನ್ನು ನಿಮ್ಮ ದಿನಚರಿಯಲ್ಲಿ ಸೇರಿಸುವುದರಿಂದ ಎಷ್ಟೆಲ್ಲಾ ಪ್ರಯೋಜನಗಳನ್ನು ನೀಡುತ್ತದೆ.

ಪದ್ಮಾಸನ – ಸರಳ ಆದರೆ ಅತ್ಯಂತ ಪರಿಣಾಮಕಾರಿಯಾದ ಕಮಲದ ಭಂಗಿ ಅಥವಾ ಪದ್ಮಾಸನದಿಂದ ಪ್ರಾರಂಭಿಸಿ. ಇದು ಆಳವಾದ ಉಸಿರಾಟಕ್ಕೆ ದಾರಿಮಾಡಿ ಕೊಡುತ್ತದೆ. ಮತ್ತು ಬೆನ್ನು ಮೂಳೆ ಯನ್ನು ನೇರಗೊಳಿಸುತ್ತದೆ. ಇದು ಮನಸ್ಸನ್ನು ಶಾಂತಗೊಳಿಸಲು ಮತ್ತು ಗಮನವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಭ್ರಮರಿ ಪ್ರಾಣಾಯಾಮ ಮತ್ತು ವೃಕ್ಷಾಸನದಂತಹ ಇತರ ಯೋಗಭಂಗಿಗಳೊಂದಿಗೆ ಕಮಲದ ಭಂಗಿಗಳನ್ನು ಅಭ್ಯಾಸ ಮಾಡುವುದರಿಂದ ಉತ್ತಮ ಸ್ಮರಣಶಕ್ತಿ ಮತ್ತು ಏಕಾಗ್ರತೆಗೆ ಹೆಚ್ಚಿನ ಕೊಡುಗೆ ನೀಡುತ್ತದೆ.

ಹಲಾ​ಸನ – ​ಏಕಾಗ್ರತೆ ಮತ್ತು ಶಾಂತಿಯನ್ನು ಉತ್ತೇಜಿಸುವಲ್ಲಿ ಹಲಾಸನ ಅಥವಾ ನೇಗಿಲಿನ ಭಂಗಿಯೂ ಕೂಡಾ ಸೇರಿದೆ. ಈ ಅದ್ಬುತ ಭಂಗಿಯು ನೆನಪಿನ ಶಕ್ತಿಯನ್ನು ಸುಧಾರಿಸಲು ಮತ್ತು ಮನಸ್ಸನ್ನು ಶಾಂತಿಗೊಳಿಸುವ ಮತ್ತು ವಿಶ್ರಾಂತಿಯನ್ನು ನೀಡುವ ಮೂಲಕ ಏಕಾಗ್ರತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ. ಈ ಆಸನವು ಮೆದುಳಿಗೆ ರಕ್ತದ ಹರಿವನ್ನು ಹೆಚ್ಚಿಸುತ್ತದೆ ಮತ್ತು ಒತ್ತಡ ವನ್ನು ಕಡಿಮೆ ಮಾಡುತ್ತದೆ. ಇದು ಥೈರಾಯ್ಡ್ ಗ್ರಂಥಿಯನ್ನು ಉತ್ತೇಜಿ ಸುವಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತದೆ.

ಸರ್ವಾಂಗಾಸನ – ಸರ್ವಾಂಗಾಸನ ಅಥವಾ ಶೋಲ್ಡರ್ ಸ್ಟ್ಯಾಂಡ್ ಭಂಗಿ ಎಂದು ಕರೆಯಲ್ಪಡುವ ಈ ಭಂಗಿಯು, ನಿಮ್ಮ ಸ್ಮರಣೆಯನ್ನು ಚುರುಕು ಗೊಳಿಸಲು ಮತ್ತು ಏಕಾಗ್ರತೆಯನ್ನು ಸುಧಾರಿಸುವ ಅತ್ಯುತ್ತಮ ಯೋಗ ಭಂಗಿಗಳಲ್ಲಿ ಒಂದಾಗಿದೆ. ಇದು ಮೆದುಳಿಗೆ ರಕ್ತದ ಹರಿವನ್ನು ಹೆಚ್ಚಿಸುವ ಮೂಲಕ ಕಾರ್ಯ ನಿರ್ವಹಿಸುತ್ತದೆ. ಇದು ಮೆದುಳಿಗೆ ಹೆಚ್ಚಿನ ಆಮ್ಲಜನಕ ಮತ್ತು ಪೋಷಕಾಂಶಗಳನ್ನು ತರಲು ಸಹಾಯ ಮಾಡುತ್ತದೆ. ಅಲ್ಲದೆ, ಮನಸ್ಸನ್ನು ಸ್ಪಷ್ಟ, ಶಾಂತ ಮತ್ತು ಹೆಚ್ಚು ಏಕಾಗ್ರತೆ ಯನ್ನುಂಟು ಮಾಡಲು ಸಹಾಯ ಮಾಡುತ್ತದೆ.

ವೃಕ್ಷಾಸನ – ಏಕಾಗ್ರತೆಯನ್ನು ಉತ್ತೇಜಿಸುವ ಭಂಗಿಗಳಲ್ಲಿ ವೃಕ್ಷಾಸನ ಅಥವಾ ಮರದ ಭಂಗಿಯೂ ಒಂದು ಅತ್ಯಂತ ಪರಿಣಾಮಕಾರಿಯಾದ ಯೋಗ ಭಂಗಿಯಾಗಿದೆ. ಇದು ಮನಸ್ಸಿನ ಮುಕ್ತತೆಯನ್ನು ಉತ್ತೇಜಿಸುವುದಲ್ಲದೆ ಏಕಾಗ್ರತೆ ಮತ್ತು ಸ್ಮರಣಾ ಶಕ್ತಿಯನ್ನು ಹೆಚ್ಚಿಸುತ್ತದೆ. ಮಾನಸಿಕ ಸ್ಥಿರತೆಯನ್ನು ಉತ್ತೇಜಿಸುವ ಮೂಲಕ ಏಕಾಗ್ರತೆಯನ್ನು ಸುಧಾರಿಸಲು ಇದು ಅತ್ಯಂತ ಪರಿಣಾಮಕಾರಿಯಾದ ಯೋಗ ಭಂಗಿ ಎನಿಸಿದೆ.

ಬಾಲಾಸನ – ಚಿಕ್ಕ ಮಗುವಿನಂತೆ ಏಕಾಗ್ರತೆಯನ್ನು ಪಡೆಯಲು ಖಂಡಿತವಾಗಿಯೂ ಮಗುವಿನ ಭಂಗಿ ಅಥವಾ ಬಾಲಾಸನದ ಆಯ್ಕೆ ಮಾಡುವುದು ಉತ್ತಮ. ಈ ಭಂಗಿಯಲ್ಲಿ ಮೃದುವಾಗಿ ಮತ್ತು ಸ್ವಲ್ಪ ಬೆನ್ನನ್ನು ಬಾಗಿಸುವುದನ್ನು ಒಳಗೊಂಡಿರುತ್ತದೆ. ಇದರಿಂದ ಕೆಳಬೆನ್ನು ಮತ್ತು ಸೊಂಟದಲ್ಲಿನ ಒತ್ತಡ ಬಿಡುಗಡೆಗೆ ಸಹಾಯವಾಗುತ್ತದೆ. ಅಷ್ಟೇ ಅಲ್ಲದೆ, ಈ ಆಸನವು ಒತ್ತಡವನ್ನು ಬಿಡುಗಡೆ ಮಾಡುವ ಕೆಲಸ ಮಾಡುತ್ತಾ ವಿಶ್ರಾಂತಿಯನ್ನು ಉತ್ತೇಜಿಸುವಲ್ಲಿ ಪ್ರಯೋಜನಕಾರಿಯಾಗಿದೆ.

ಭ್ರಾಮರಿ ಪ್ರಾಣಾಯಾಮ – ಭ್ರಾಮರಿ ಅಥವಾ ಬೀ ಬ್ರೀತ್ ಪ್ರಾಣಾಯಾಮವು ಮನಸ್ಸನ್ನು ಶಾಂತ ಗೊಳಿಸಲು, ಸ್ಮರಣಾ ಶಕ್ತಿಯನ್ನು ಸುಧಾರಿಸಲು ಮತ್ತು ಏಕಾಗ್ರತೆಯನ್ನು ಹೆಚ್ಚಿಸಲು ಸಹಾಯ ಮಾಡುವಂತಹ ಸರಳ ಉಸಿರಾಟದ ತಂತ್ರವಾಗಿದೆ. ಇದರಲ್ಲಿ ಆಳವಾದ ಉಸಿರನ್ನು ಒಳಗೆ ತೆಗೆದುಕೊಂಡು ನಂತರ ನಿಧಾನವಾಗಿ ಜೇನುನೊಣದಂತೆ ಗುನುಗುವ ಶಬ್ದವನ್ನು ಮಾಡುತ್ತಾ ಉಸಿರನ್ನು ಬಿಡುವ ಸರಳ ಕ್ರಿಯೆಯನ್ನು ಒಳಗೊಂಡಿರುತ್ತದೆ, ಈ ಶಬ್ದವು ಹಿತವಾದ ಕಂಪನವನ್ನು ಸೃಷ್ಟಿಸುತ್ತದೆ.

ಶವಾಸನ – ನಿಮ್ಮ ಮನಸ್ಸಿನ ಸ್ಪಷ್ಟತೆಗಾಗಿ ನಿಮ್ಮ ಯೋಗಾಭ್ಯಾಸವನ್ನು ಶವಾಸನ ದೊಂದಿಗೆ ಮುಗಿಸಿ. ಈ ಯೋಗ ಭಂಗಿಯು ಮನಸ್ಸಿನ ಸ್ಪಷ್ಟತೆಯನ್ನು ಉತ್ತೇಜಿಸುತ್ತದೆ ಮತ್ತು ಉತ್ತಮ ನಿದ್ರೆಯನ್ನು ಉತ್ತೇಜಿಸುವಂತಹ ಪ್ರಯೋಜನಗಳನ್ನು ನೀಡುವಲ್ಲಿ ಸಹಾಯ ಮಾಡುತ್ತದೆ. ಈ ವಿಶ್ರಾಂತಿ ಭಂಗಿಯು ಮಾನಸಿಕ ಶಾಂತತೆ ಮತ್ತು ಸ್ಪಷ್ಟತೆಗೆ ದಾರಿ ಮಾಡಿಕೊಡುವ ಮೂಲಕ ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡಿಕೊಡುತ್ತದೆ ಮತ್ತು ಉತ್ತಮ ಸ್ಮರಣಾ ಶಕ್ತಿ ಮತ್ತು ಏಕಾಗ್ರತೆಯನ್ನು ಉತ್ತೇಜಿಸುವಲ್ಲಿ ಸಹಾಯ ಮಾಡುತ್ತದೆ.