ಮನೆ ರಾಜಕೀಯ ಬಿ.ಕೆ ಹರಿಪ್ರಸಾದ್, ಯತ್ನಾಳ್ ಸೇರಿ ಒಂದು ಪಕ್ಷ ಪ್ರಾರಂಭಿಸುದು ಒಳ್ಳೆಯದು: ಬಿ.ಸಿ ಪಾಟೀಲ್

ಬಿ.ಕೆ ಹರಿಪ್ರಸಾದ್, ಯತ್ನಾಳ್ ಸೇರಿ ಒಂದು ಪಕ್ಷ ಪ್ರಾರಂಭಿಸುದು ಒಳ್ಳೆಯದು: ಬಿ.ಸಿ ಪಾಟೀಲ್

0

ಬೆಂಗಳೂರು: ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸ್ಥಾನ ನೀಡದಿದ್ದಕ್ಕೆ ಅಸಮಾಧಾನಗೊಂಡಿರುವ ಹಿರಿಯ ನಾಯಕ ಬಿಕೆ ಹರಿಪ್ರಸಾದ್ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸಮಯ ಸಿಕ್ಕಗಲೆಲ್ಲಾ ಬಹಿರಂಗವಾಗಿ ವಾಗ್ದಾಳಿ ನಡೆಸುತ್ತಾ ಬಂದಿದ್ದಾರೆ.

ಮತ್ತೊಂದೆಡೆ ಬಿಜೆಪಿಯಲ್ಲಿಯೂ ರಾಜ್ಯಾಧ್ಯಕ್ಷ ಅಥವಾ ವಿಪಕ್ಷ ಸ್ಥಾನ ಯಾವುದು ದೊರೆಯದೆ ಕಂಗಲಾಗಿರುವ ಹಿರಿಯ ನಾಯಕ ಬಸನಗೌಡ ಪಾಟೀಲ್ ಕೂಡಾ ವಿಜಯೇಂದ್ರ ಹಾಗೂ ಅಶೋಕ್ ವಿರುದ್ಧ ಹೇಳಿಕೆ ನೀಡುತ್ತಾ ಪಕ್ಷವನ್ನು ಮುಜುಗರಕ್ಕೆ ಸಿಲುಕಿಸುವ ಪ್ರಯತ್ನವನ್ನು ನಿರಂತರವಾಗಿ ಮಾಡುತ್ತಾ ಬಂದಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿರುವ ಮಾಜಿ ಸಚಿವ ಬಿ. ಸಿ ಪಾಟೀಲ್  ವಿಕೃತ ಮನಸ್ಸುಗಳನ್ನು ಹೊಂದಿರುವಂತಹ ಬಿಕೆ ಹರಿಪ್ರಸಾದ್ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ಇಬ್ಬರು ಸೇರಿ ಒಂದು ಪಕ್ಷವನ್ನು ಪ್ರಾರಂಭಿಸುದು ಒಳ್ಳೆಯದು ಎಂದಿದ್ದಾರೆ.

ಬಿ ಸಿ ಪಾಟೀಲ್ ಅವರ ಈ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಯತ್ನಾಳ್ ತಮ್ಮ ಸ್ವಂತ ಕ್ಷೇತ್ರದ ಬಗ್ಗೆ ಯೋಚನೆ ಮಾಡಿ, ಪಕ್ಷದ ಬಗ್ಗೆ ಅಮೇಲೆ ಯೋಚಿಸಬಹುದು ಎಂದು ತಿರುಗೇಟು ನೀಡಿದ್ದಾರೆ.

ಹಿಂದಿನ ಲೇಖನಯುವ ಮತದಾರರ ಸೆಳೆಯಲು 5ನೇ ಗ್ಯಾರಂಟಿ ‘ಯುವನಿಧಿ’ ಯೋಜನೆಗೆ ಇಂದು ಸಿಎಂ ಸಿದ್ದರಾಮಯ್ಯ ಚಾಲನೆ
ಮುಂದಿನ ಲೇಖನನಳಿನ್ ಕುಮಾರ್ ಕಟೀಲ್, ಬೊಮ್ಮಾಯಿಯಿಂದ ಅಲ್ಪಸಂಖ್ಯಾತರ ನಿರ್ಲಕ್ಷ್ಯ: 4 ವರ್ಷಗಳ ನಂತರ ಓಲೈಕೆಗೆ ಬಿಜೆಪಿ