ಮನೆ ರಾಜ್ಯ ಬರದ ನಡುವೆಯೂ 33 ಸಚಿವರಿಗೆ ಇನ್ನೋವಾ ಹೈಬ್ರೀಡ್ ಕಾರು ಖರೀದಿಸಿದ ರಾಜ್ಯ ಸರ್ಕಾರ

ಬರದ ನಡುವೆಯೂ 33 ಸಚಿವರಿಗೆ ಇನ್ನೋವಾ ಹೈಬ್ರೀಡ್ ಕಾರು ಖರೀದಿಸಿದ ರಾಜ್ಯ ಸರ್ಕಾರ

0

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ ಕೈಕೊಟ್ಟು ಬಹುತೇಕ ಜಲಾಶಯಗಳು ಭರ್ತಿಯಾಗದೇ ಬರಗಾಲ ಆವರಿಸಿದ್ದು, ರೈತರು, ಜನರು ಸಂಕಷ್ಟಕ್ಕೀಡಾಗಿದ್ದಾರೆ. ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಅನವಶ್ಯಕ ದುಂದು ವೆಚ್ಚಕ್ಕೆ  ಕಡಿವಾಣ ಹಾಕುವುದಾಗಿ ಹೇಳಿದ್ದ ರಾಜ್ಯ ಸರ್ಕಾರ ಇದೀಗ 33 ಸಚಿವರಿಗೆ ಇನ್ನೋವಾ ಹೈಬ್ರೀಡ್ ಕಾರು ಖರೀದಿಸಿದೆ.

ಬರಗಾಲದ ಕಾರಣಕ್ಕೆ ಅನುತ್ಪಾದಕ ವೆಚ್ಚ ಕಡಿತ ಎಂದು ಹೇಳಿತ್ತಿದ್ದ ಸರ್ಕಾರದಿಂದಲೇ ಕಾರು ಖರೀದಿಯಾಗಿರುವುದು ಎಲ್ಲೇಡೆ ಚರ್ಚೆಗೆ ಗ್ರಾಸವಾಗಿದೆ. ಬರೋಬ್ಬರಿ 9 ಕೋಟಿ 90 ಲಕ್ಷ ರೂ ವೆಚ್ಚದಲ್ಲಿ ಹೈಬ್ರೀಡ್ ಕಾರ್ ಖರೀದಿಸಲಾಗಿದೆ.

ಅಗಸ್ಟ್ ತಿಂಗಳ 17 ರಂದೇ 33 ಕಾರು ಇನ್ನೋವಾ ಕಾರು ಖರೀದಿಗಾಗಿ ಹಣ ಬಿಡುಗಡೆ ಮಾಡಲಾಗಿತ್ತು. ದಸರಾ ಆರಂಭವಾಗುತ್ತಿದ್ದಂತೆ ಎಲ್ಲಾ ಸಚಿವರ ನಿವಾಸಕ್ಕೆ ಕಾರುಗಳು ಬಂದಿವೆ.

ಹಿಂದಿನ ಲೇಖನಅಕ್ರಮವಾಗಿ ದುಡ್ಡು ಹೊಡೆದ ಡಿ.ಕೆ.ಶಿವಕುಮಾರ್ ಡಿಸಿಎಂ ಹುದ್ದೆಗೆ ರಾಜೀನಾಮೆ ನೀಡಲಿ: ಕೆ.ಎಸ್ ಈಶ್ವರಪ್ಪ
ಮುಂದಿನ ಲೇಖನಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ ಪ್ರಕರಣವನ್ನು ಸಿಐಡಿ ತನಿಖೆಗೆ ಆದೇಶ: ಗೃಹಸಚಿವ ಡಾ.ಜಿ.ಪರಮೇಶ್ವರ್