ಮನೆ ರಾಜ್ಯ ರಾಜ್ಯ ಸರ್ಕಾರದಿಂದ ಅಕ್ರಮ ಗಣಿಗಾರಿಕೆ ತನಿಖೆಯ SIT ಅವಧಿ ಮತ್ತೊಂದು ವರ್ಷ ವಿಸ್ತರಣೆ: ಸಚಿವ ಹೆಚ್.ಕೆ...

ರಾಜ್ಯ ಸರ್ಕಾರದಿಂದ ಅಕ್ರಮ ಗಣಿಗಾರಿಕೆ ತನಿಖೆಯ SIT ಅವಧಿ ಮತ್ತೊಂದು ವರ್ಷ ವಿಸ್ತರಣೆ: ಸಚಿವ ಹೆಚ್.ಕೆ ಪಾಟೀಲ್

0

ಬೆಂಗಳೂರು: ಗಣಿಗಾರಿಕೆಯಲ್ಲಿ ನಡೆದ ಅಕ್ರಮದ ತನಿಖೆಗೆ ಸೃಜಿಸಲಾಗಿರುವ ತನಿಖಾ ಸಮಿತಿಯ ಅವಧಿ ವಿಸ್ತರಣೆ ಮಾಡಲಾಗುತ್ತಿದೆ. ವಿವರವಾದ ತಾಂತ್ರಿಕ ಮಾಹಿತಿ ಕಲೆ ಹಾಕಲು ಅವಕಾಶ ಆಗುವ ಹಿನ್ನೆಲೆಯಲ್ಲಿ ಒಂದು ವರ್ಷದ ಅವಧಿಗೆ ವಿಸ್ತರಣೆ ಆಗಿದೆ. ಅಪ್ಸರಕೊಂಡ ಕಡಲ ಜೀವಧಾಮ ಘೋಷಣೆ ಮಾಡಲಾಗುತ್ತಿದೆ. ಹೊನ್ನಾವರದ ಸಮುದ್ರ ಪ್ರದೇಶದ ಆರು ಕಿ ಮೀ ದೂರದ ಪ್ರದೇಶವನ್ನ ವನ್ಯಧಾನಮವಾಗಿ ಘೋಷಣೆ ಮಾಡಲಾಗಿದೆ ಎಂಬುದಾಗಿ ಕಾನೂನು ಸಚಿವ ಹೆಚ್.ಕೆ ಪಾಟೀಲ್ ತಿಳಿಸಿದ್ದಾರೆ.

ಇಂದು ರಾಜ್ಯ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ಆರೋಗ್ಯ ಇಲಾಖೆಯ ಮೂರು ಲಕ್ಷ ಸಿಬ್ಬಂದಿ ಮತ್ತು ಅವರ ಅವಲಂಬಿತರಿಗೆ 5 ಲಕ್ಷದ ವರೆಗೆ ನಗದು ರಹಿತ ಆರೋಗ್ಯ ಯೋಜನೆ ಜಾರಿಗೊಳಿಸಲಾಗುತ್ತಿದೆ. ಮಾಸಿಕ ಕಂತುಗಳಲ್ಲಿ ಯೋಜನೆಗೆ ಸಿಬ್ಬಂದಿಗಳಿಂದ 100 ರೂ ಸಂಗ್ರಹಕ್ಕೆ ತೀರ್ಮಾನಿಸಲಾಗಿದೆ. ಈ ಸೌಲಭ್ಯವು ಖಾಯಂ ಹಾಗೂ ಗುತ್ತಿಗೆ ನೌಕರರಿಗೂ ಸಿಗಲಿದೆ ಎಂದರು.

ಹಾವೇರಿಯ ಬಸಾಪುರವನ್ನ ಗೇಲುಗುಡ್ಡ ಬಸಾಪುರ ಎಂದು ಮರು ನಾಮಕರಣ ಮಾಡಲು ಕಂದಾಯ ಇಲಾಖೆ ನಿರ್ಧಾರಿಸಿದೆ. ಅನುಭವ ಮಂಟಪ ಕಾಮಗಾರಿ ಹಣ ಪರಿಷ್ಕರಣೆ ಮಾಡಲಾಗಿದೆ. ಆರುನೂರು ಕೋಟಿಯಿಂದ ಏಳುನೂರ ನಲ್ವತ್ತೆರಡು ಕೋಟಿ ಪರಿಷ್ಕರಣೆಗೆ ಒಪ್ಪಿಗೆ ನೀಡಲಾಗಿದೆ. ವರ್ಷದೊಳಗೆ ಕಾಮಗಾರಿ ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ ಎಂದರು.

ದುರ್ಗಮ ಗ್ರಾಮೀಣ ಪ್ರದೇಶಗಳಿಗೆ ಆರೋಗ್ಯ ಸೇವೆ ಜಾರಿಗೊಳಿಸಲಾಗುತ್ತಿದೆ. ಸಂಚಾರಿ ಆರೋಗ್ಯ ಘಟಕಗಳಿಗೆ ಚಾಲನೆ ನೀಡಲಾಗಿದೆ ಎಂದರು.

ಸರ್ಕಾರದ ವಸತಿಯೋಜನೆಗಳಲ್ಲಿ ಅಲ್ಪಸಂಖ್ಯಾತರಿಗೆ ಮೀಸಲಾತಿ ಏರಿಕೆ ಮಾಡಲು ಸಂಪುಟ ಅನುಮೋದಿಸಿದೆ. ಹಿಂದಿದ್ದ 10% ಏರಿಕೆ ಗೆ ಹೆಚ್ಚುವರಿ 5% ಏರಿಕೆ ಮಾಡಲಾಗುತ್ತಿದೆ. ಮೀಸಲಾತಿಗೆ ಸಂಪುಟ ಅನುಮೋದಿಸಿದೆ ಎಂದರು.

ಅಲ್ಪಸಂಖ್ಯಾತ ವರ್ಗಕ್ಕೆ ಈ ಮೀಸಲಾತಿ ಏರಿಕೆ ಮಾಡಲಾಗುತ್ತಿದೆ. ಕೇವಲ ಮುಸ್ಲೀಂಮರಿಗೆ ಮಾತ್ರ ಅಲ್ಲ. ಹೊಸ ಮೀಸಲಾತಿ ಜಾರಿಗೆ ಸಂಪುಟ ಒಪ್ಪಿಗೆ ಸಾಕು. ನಿಯಮ ಬದಲಾವಣೆ,ಕಾನೂನು ತರೋ ಅವಶ್ಯಕತೆ ಇಲ್ಲ. ಸಾಮಾಜಿಕ ನ್ಯಾಯದ ಅನುಸಾರವಾಗಿ ಈ ಮೀಸಲಾತಿ ನೀಡಲಾಗ್ತಿದೆ. ದಲಿತರ ಯೋಜನೆಗಳನ್ನ ಹೊರತು ಪಡಿಸಿ ಸರ್ಕಾರದ ಎಲ್ಲ ವಸತಿ ಯೋಜನೆಗಳಿಗೂ ಈ ಮೀಸಲಾತಿ ಅನ್ವಯವಾಗಲಿದೆ ಎಂಬುದಾಗಿ ಸಚಿವ ಎಚ್ ಕೆ ಪಾಟೀಲ್ ಹೇಳಿದರು.